Asianet Suvarna News Asianet Suvarna News

ಜೋಗಿ ಮಠದಲ್ಲಿ ಜೋರಾಯ್ತು ‘ವಿಗ್ರಹ’ ವಿವಾದ: ಪೀಠಾಧಿಪತಿ ವಿರುದ್ಧವೇ ತಿರುಗಿಬಿದ್ದ ಸಮುದಾಯ !

ಮಂಗಳೂರಿನ ಕದ್ರಿಯ ಜೋಗಿ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಮಠಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರೇ ಪೀಠಾಧಿಪತಿ ಆಯ್ಕೆ ಮಾಡ್ತಾರೆ. ಆದ್ರೆ ಇಂತಹ ಮಠದಲ್ಲಿ ವಿವಾದ ಭುಗಿಲೆದಿದ್ದು, ಸಮುದಾಯದ ಮಂದಿಯೇ ತಿರುಗಿಬಿದ್ದಿದ್ದಾರೆ.
 


ಮಂಗಳೂರಿನ ಕದ್ರಿ ಗುಡ್ಡದ ತುದಿಯಲ್ಲಿರೋ ಜೋಗಿ ಮಠ. ಈ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದೀಗ ಈ ಮಠದಲ್ಲಿ ವಿವಾದವೊಂದು ಭುಗಿಲೆದ್ದಿದ್ದು..ಸಮಾಜದ ಭಕ್ತರೇ ತಿರುಗಿಬಿದ್ದಿದ್ದಾರೆ. ಜೋಗಿ ಮಠದಲ್ಲಿ(Jogi math) ದೇವರ ಮೂಲ ವಿಗ್ರಹವನ್ನೇ ಪೀಠಾಧಿಪತಿ ನಿರ್ಮಲ್ ನಾಥ್ ಜೀ (Nirmal Nath Ji) ಕಿತ್ತುಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ ಎರಡು ಸಾವಿರ ವರ್ಷಗಳ ಹಳೆಯ ಕಾಲಭೈರವ ಮೂರ್ತಿ ಹೊರಗಿಟ್ಟು, ರಾಜಸ್ಥಾನದ ಮಾರ್ವಾಡಿಗಳು ತಂದ ಸಣ್ಣ ಹೊಸ ಕಾಲಭೈರವ ಮೂರ್ತಿ(Kalabhairava Murthy) ಪ್ರತಿಷ್ಠಾಪನೆ ಮಾಡಿದ್ದಾರಂತೆ. ಹೀಗಾಗಿ ನಾಥ ಪರಂಪರೆಯ ಜೋಗಿ ಸಮುದಾಯ ಆಕ್ರೋಶ ಹೊರಹಾಕಿದೆ..ಅಲ್ದೆ ಹಳೇ ವಿಗ್ರಹ ಪ್ರತಿಷ್ಠಾಪಿಸದಿದ್ರೆ ಉಗ್ರ ಹೋರಾಟ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮಠಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಉಸ್ತುವಾರಿ. ಅಷ್ಟೇ ಅಲ್ಲ ಗೋರಖ್‌ಪುರ ಮಠಕ್ಕೂ ಈ ಜೋಗಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. 12 ವರ್ಷಕ್ಕೊಮ್ಮೆ ಯೋಗಿ ಆದಿತ್ಯ ನಾಥ್‌ ಜೋಗಿ ಮಠಕ್ಕೆ ಮಠಾಧಿಪತಿ ಆಯ್ಕೆ ಮಾಡ್ತಾರೆ. 2016ರ ಮಾರ್ಚ್ 7ರಂದು ನೂತನ ಪೀಠಾಧಿಪತಿ ನಿರ್ಮಲ ನಾಥಜೀಗೆ ಪಟ್ಟಾಭಿಷೇಕ ಮಾಡಿದ್ರು. ಮಠಕ್ಕೆ ಯಘಿ ಆದಿತ್ಯನಾಥ್ ಹಲವು ಬಾರೀ ಭೇಟಿ ನೀಡಿದ್ರು..ಆದ್ರೆ ಈ ಮಠದಲ್ಲಿ ಜೋಗಿ ಸಮುದಾಯವನ್ನ ದೂರವಿಟ್ಟು ಮಾರ್ವಾಡಿಗಳಿಗೆ ಮಣೆ ಹಾಕಿದ್ದರೆ ಅಂತಾ ಆರೋಪ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಸಂಸ್ಕಾರವಿಲ್ಲದ ವಿದ್ಯೆ..ಅಪ್ಪ ಅಗಲಿದರೂ ಸಂಬಂಧವೇ ಇಲ್ಲ ಎಂದ ಮಕ್ಕಳು !