ಪ್ರಜ್ಬಲ್ ರೇವಣ್ಣ ವಿರುದ್ಧ ಒಟ್ಟು 3 ಅತ್ಯಾಚಾರ ಕೇಸ್: ವಿಡಿಯೋ ಮಾಡಿದ ಮೊಬೈಲ್‌​ಗಾಗಿ ಎಸ್​ಐಟಿ ಹುಡುಕಾಟ!

ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ಭವಾನಿ ರೇವಣ್ಣಗೆ ಸಂಕಷ್ಟ
35 ದಿನ.. ಜರ್ಮನಿ TO ಬೆಂಗಳೂರು.. ಪ್ರಜ್ವಲ್ ರೇವಣ್ಣ ಲಾಕ್
6 ದಿನ ಎಸ್​ಐಟಿ ವಶಕ್ಕೆ ನೀಡಿದ 42ನೇ ಎಸಿಎಂಎಂ ಕೋರ್ಟ್

First Published Jun 1, 2024, 4:55 PM IST | Last Updated Jun 1, 2024, 4:55 PM IST

ಅಂತೂ ಇಂತೂ ಪ್ರಜ್ವಲ್(Prajwal Revanna) ಬೆಂಗಳೂರಿಗೆ ಬಂದಾಯ್ತು. 34 ದಿನ ಫಾರೀನ್ ಟ್ರಿಪ್ ಮುಗಿಸಿ ಈಗ SIT ಪಂಜರ ಸೇರಿದ್ದಾನೆ. ರಾತ್ರೋ ರಾತ್ರಿ ಆತನನ್ನ ವುಮೆನ್ ಪೊಲೀಸ್ ಟೀಂ ಅರೆಸ್ಟ್(Arrest) ಮಾಡಿಕೊಂಡು ಕರೆದೊಯ್ದರು. ಈ ರೀತಿ ಪ್ರಜ್ವಲ್ ಪೊಲೀಸರ ವಶಕ್ಕೆ ಬಂದ. ಇದೆಲ್ಲಾ ನಿನ್ನೆ ಮೊನ್ನೆಯ ಕಥೆಯಾದ್ರೆ ಆತನಿಗೆ ಬ್ಯುಸಿ ಡೇ ಇತ್ತು. ಅಧಿಕಾರಿಗಳ ಜೊತೆ ಆಸ್ಪತ್ರೆ, ಕೋರ್ಟ್ ಸುತ್ತಿದ್ದೇ ಆಯ್ತು. ತಡರಾತ್ರಿ ಬೆಂಗಳೂರಿಗೆ ಬಂದ ಪ್ರಜ್ವಲ್‌ಗೆ SIT ಟೀಂ ಕೊಂಚವೂ ರೆಸ್ಟ್ ನೀಡಲೇ ಇಲ್ಲ. ಬೆಳಗ್ಗೆಯಿಂದಲೇ ಪ್ರಜ್ವಲ್ ಬ್ಯುಸಿಯಾಗಿದ್ರು. ಮೊದಲಿಗೆ ವಕೀಲರನ್ನ ಭೇಟಿ ಮಾಡಿದ ಪ್ರಜ್ವಲ್ ನಂತರ ಆತನನ್ನ ವೈದ್ಯಕೀಯ ಪರೀಕ್ಷೆಗೆ ಕೊಂಡೊಯ್ದರು. ನಂತರ ಕೋರ್ಟ್‌ಗೆ ಹಾಜರು ಪಡಿಸಿದ್ರು. ಸಂಜೆವರೆಗೂ ನಡೆದ ವಾದ ಪ್ರತಿವಾದದಲ್ಲಿ ಪ್ರಜ್ವಲ್‌ಗೆ 6 ದಿನಗಳ SIT ಕಸ್ಟಡಿಗೆ ನೀಡಲಾಯ್ತು.

ಇದನ್ನೂ ವೀಕ್ಷಿಸಿ:  ಶತ್ರು ಭೈರವಿ ಯಾಗವನ್ನು ಅಘೋರಿಗಳು ಮಾತ್ರ ಮಾಡೋದಾ? ಡಿಕೆಶಿ ರಾಜಕೀಯ ಶತ್ರುಗಳಿಂದ ನಡೆಯುತ್ತಿದೆಯಾ ಯಾಗ?