Asianet Suvarna News Asianet Suvarna News

ಪ್ರಜ್ವಲ್ ರೇವಣ್ಣ ಬಂಧನ..ಹೇಗಿರುತ್ತೆ ತನಿಖೆ..? ಮೊಬೈಲ್ ಮದರ್ ಡಿವೈಸ್ ಬಗ್ಗೆ ಎಸ್‌ಐಟಿ ತನಿಖೆ!

ಇದೀಗ ಪ್ರಜ್ವಲ್ ರೇವಣ್ಣ ಬಂಧನವಾಗಿದ್ದು, ಮುಂದಿನ ತನಿಖೆ ಹೇಗಿರುತ್ತದೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಈಗ ಪ್ರಜ್ವಲ್ ರೇವಣ್ಣನ ಎಲ್ಲಾ ವಿಡಿಯೋಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುವುದು.

First Published May 31, 2024, 5:13 PM IST | Last Updated May 31, 2024, 5:14 PM IST

ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು ಇದೀಗ ಬಂಧನ ಆಡಲಾಗಿದ್ದು, ಮುಂದಿನ ತನಿಖೆಗಳು ಹೇಗಿರಲಿವೆ ಎನ್ನುವ ಕುತೂಹಲ ಜನರಿಗೆ ಹೆಚ್ಚಾಗಿದೆ. ಇನ್ನು ಪ್ರಜ್ವಲ್ ರೇವಣ್ಣ ಅವರದ್ದು ಎಲ್ಲನಾದ ವಿಡಿಯೋಗಳನ್ನ ಎಫ್ ಎಸ್ ಎಲ್ ಗೆ (FSL) ಕಳುಹಿಸಲಾಗುತ್ತದೆ ಎನ್ನಲಾಗಿದ್ದು, ಇದರೊಂದಿಗೆ ಮೊಬೈಲ್ ಮದರ್ ಡಿವೈಸ್ (Mother device) ಯಾರ ಬಳಿ ಇದೆ ಎಂಬ ತನಿಖೆಯನ್ನೂ ಸಹ ಈ ವೇಳೆ ಮಾಡಲಾಗುತ್ತದೆ.

ಹಾಗೆಯೇ ಪ್ರಜ್ವಲ್ ಬಂದನದ ನಂತರ ಮದರ್ ಡಿವೈಸ್ ಕುರಿತು ತನಿಖೆ ನಡೆಸಲಾಗುತ್ತಿದ್ದು, ಯಾವ ಮೊಬೈಲ್‌ನಲ್ಲಿ ವಿಡಿಯೋ ಶೂಟ್ ಮಾಡಿದ್ರು ಎಂದು ಶೋಧ ಮಾಡಲಾಗುತ್ತದೆ. ಈಗ ಸಿಕ್ಕಿರುವ ವಿಡಿಯೋಸ್‌ಗಳೆಲ್ಲವೂ ಸೆಕೆಂಡರಿ ಎವಿಡೆನ್ಸ್ ಆಗಿದ್ದು, ಇದಕ್ಕಾಗಿಯೇ ಮದರ್ ಡಿವೈಸ್ ಕುರಿತು ತನಿಖೆ ಮಾಡಲಾಗುತ್ತದೆ. ಈ ನಡುವೆ ಏನಾದರೂ ಮದರ್‌ ಡಿವೈಸ್‌ನಲ್ಲಿ ಎಲ್ಲವನ್ನೂ ನಾಶ ಮಾಡಿದ್ದೇ ಆದರೆ ಸಾಕ್ಷಿ ನಾಶದ ಅಡಿ ಮತ್ತೊಂದು ಸೆಕ್ಷನ್ ಪ್ರಜ್ವಲ್ ವಿರುದ್ಧ ದಾಖಲಾಗುತ್ತೆ. ಮದರ್ ಡಿವೈಸ್ ಸಿಗದೆ ಇದ್ರೆ ಬೇರೆ ಆಯಾಮಗಳಲ್ಲಿ ಎಸ್‌ಐಟಿ ತನಿಖೆ ಮುಂದುವರೆಸಲಿದೆ.

ಇದನ್ನೂ ವೀಕ್ಷಿಸಿ:  ಪ್ರಜ್ವಲ್ ರೇವಣ್ಣ ಕೋರ್ಟ್‌ಗೆ ಹಾಜರುಪಡಿಸಿದ SIT: ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​ !

Video Top Stories