ಪ್ರಜ್ವಲ್ ರೇವಣ್ಣ ಕೋರ್ಟ್‌ಗೆ ಹಾಜರುಪಡಿಸಿದ SIT: ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​ !

ಪೆನ್‌ಡ್ರೈವ್‌ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣರನ್ನು ಕೋರ್ಟ್‌ಗೆ ಎಸ್‌ಐಟಿ ಹಾಜರುಪಡಿಸಿದೆ. ಇದಕ್ಕೂ ಮೊದಲು ಮೆಡಿಕಲ್​ ಟೆಸ್ಟ್ ಮಾಡಿಸಲಾಗಿದೆ.
 

First Published May 31, 2024, 4:13 PM IST | Last Updated May 31, 2024, 4:14 PM IST

ಪೆನ್‌ಡ್ರೈವ್‌ (pen drive) ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣರನ್ನು (Prajwal Revanna) ಎಸ್‌ಐಟಿ (SIT)ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇದಕ್ಕೂ ಮೊದಲು ಮೆಡಿಕಲ್​ ಟೆಸ್ಟ್ ಮಾಡಿಸಲಾಗಿದೆ. ಬಳಿಕ ಸೆಷನ್ಸ್​ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇನ್ನು ಹೆಚ್ಚಿನ ವಿಚಾರಣೆಗೆ ಪ್ರಜ್ವಲ್‌ರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಎಸ್‌ಐಟಿ ಕೇಳಲಿದೆ. ಇದಾದ ನಂತರದಲ್ಲಿ ರೇಪ್​ ಕೇಸ್‌​ನಲ್ಲಿ ಪ್ರಜ್ವಲ್ ಎಸ್‌ಐಟಿ​ ವಿಚಾರಣೆ ನಡೆಸಲು ಎಲ್ಲಾ ತಯಾರಿ ಮಾಡೊಕೊಂಡಿದೆ ಎಂದು ತಿಳಿದುಬಂದಿದೆ. ಹಾಗೆಯೇ ಇವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ (Bowring Hospital) ಮೆಡಿಕಲ್ ಟೆಸ್ಟ್​ ಮಾಡಿಸಲಾಗಿದೆ. 5 ವೈದ್ಯರ ತಂಡದಿಂದ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಬಿಪಿ, ಶುಗರ್​, ಬ್ಲಡ್​​, ಇಸಿಜಿ, ಯೂರಿನ್​ ಟೆಸ್ಟ್​ ಅನ್ನು ಪ್ರತ್ಯೇಕ ರೂಮ್​ನಲ್ಲಿ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಎಚ್.ಡಿ.ರೇವಣ್ಣಗೆ ಸದ್ಯಕ್ಕಿಲ್ಲ ರಿಲೀಫ್​! ಎರಡೂ ಅರ್ಜಿ ಒಟ್ಟಿಗೆ ವಿಚಾರಣೆ ಮಾಡಲು ಕೋರ್ಟ್‌ ಒಪ್ಪಿಗೆ

Must See