ಸ್ಯಾಂಟ್ರೋ ರವಿ ಸಿಗಲು ಮೊದಲ ಪತ್ನಿ ಕಾರಣ: ಇಲ್ಲಿದೆ ಬಂಧನದ ರೋಚಕ ಕಥೆ

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್‌ ಆಗಿದ್ದ ಖತರ್ನಾಕ್‌ ಸ್ಯಾಂಟ್ರೋ ರವಿ, ಇದೀಗ ಅರೆಸ್ಟ್ ಆಗಿದ್ದಾನೆ.
 

Share this Video
  • FB
  • Linkdin
  • Whatsapp

ಸ್ಯಾಂಟ್ರೋ ರವಿಯನ್ನು ಪೊಲೀಸರು ಬಂಧಿಸಿದ್ದು, ಆತ ಇರುವಿಕೆಯ ಬಗ್ಗೆ ಲೀಡ್‌ ಕೊಟ್ಟಿದ್ದೇ ಆತನ ಮೊದಲ ಪತ್ನಿ ಎಂಬ ಮಾಹಿತಿ ಲಭ್ಯವಾಗಿದೆ. ರವಿಯ ಮೊದಲ ಪತ್ನಿಯನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಪೊಲೀಸರು, ಮನೆ ಜಪ್ತಿ ಮಾಡಿ ವಿಚಾರಣೆ ಹೆಸರಲ್ಲಿ ರವಿ ಪತ್ನಿ ಜತೆ ಮಾತುಕತೆ ನಡೆಸಿದ್ದರು. ಆಸ್ತಿ ಕೈ ತಪ್ಪಲ್ಲ ಎಂದು ಸುಳ್ಳು ಭರವಸೆ ಕೊಟ್ಟಿದ್ದರು. ಪೊಲೀಸರ ಮಾತು ನಂಬಿ ಮೊದಲ ಪತ್ನಿ ಮಾಹಿತಿ ಬಾಯ್ಬಿಟ್ಟಿದ್ದಾರೆ. ಸ್ನೇಹಿತನ ಮೂಲಕ ರವಿಯನ್ನು ಟ್ರ್ಯಾಪ್‌ ಮಾಡಿ ಬಂಧಿಸಲಾಗಿದೆ. ಹೊರ ರಾಜ್ಯದಲ್ಲಿ ನಾಲ್ಕು ಆಪ್ತ ಸ್ನೇಹಿತರನ್ನು ರವಿ ಹೊಂದಿದ್ದ‌. ಸ್ಯಾಂಟ್ರೋ ರವಿ ಬಂಧನ ಸ್ಟೋರಿಯೇ ಬಲು ರೋಚಕವಾಗಿದ್ದು, ಸ್ನೇಹಿತರ ಜಾಡು ಹಿಡಿದರೂ ರವಿಯ ಮಾಹಿತಿ ಸಿಕ್ಕಿರಲಿಲ್ಲ. ಅನುಮಾನದ ಮೇಲೆಯೇ ಅವನ ಹುಡುಕಾಟ ನಡೆದು, ಕೊನೆಗೂ ಅರೆಸ್ಟ್ ಆಗಿದ್ದಾನೆ.
ಸ್ಯಾಂಟ್ರೋ ರವಿ ಬಂಧನ: ನಿರ್ದಾಕ್ಷಿಣ್ಯ ಕ್ರಮ ಎಂದ ಆರಗ ಜ್ಞಾನೇಂದ್ರ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video