ರಾಗಿಣಿ ಬಂಧನ ಬೆನ್ನಲ್ಲೇ ಸಂಜನಾಗೂ ಟೆನ್ಷನ್; ನೊಟೀಸ್ ನೀಡುತ್ತಾ ಸಿಸಿಬಿ?

ರಾಗಿಣಿ ಬಂಧನ ಬೆನ್ನಲ್ಲೇ ಸಂಜನಾಗೂ ಟೆನ್ಷನ್ ಶುರುವಾಗಿದೆ. ಈಗಾಗಲೇ ಸಂಜನಾ ಆಪ್ತ ರಾಹುಲ್ ವಿಚಾರಣೆಗೆ ಒಳಪಟ್ಟಿದ್ದಾರೆ. ಅವರ ಹೇಳಿಕೆ ಆಧರಿಸಿ ಸಂಜನಾಗೂ ಸಿಸಿಬಿ ನೊಟೀಸ್ ಕೊಡುವ ಸಾಧ್ಯತೆ ಇದೆ. ಸಹಜವಾಗಿ ಸಂಜನಾ ಟೆನ್ಷನ್‌ನಲ್ಲಿದ್ದಾರೆ. 
 

First Published Sep 7, 2020, 2:20 PM IST | Last Updated Sep 7, 2020, 3:01 PM IST

ಬೆಂಗಳೂರು (ಸೆ. 07): ರಾಗಿಣಿ ಬಂಧನ ಬೆನ್ನಲ್ಲೇ ಸಂಜನಾಗೂ ಟೆನ್ಷನ್ ಶುರುವಾಗಿದೆ. ಈಗಾಗಲೇ ಸಂಜನಾ ಆಪ್ತ ರಾಹುಲ್ ವಿಚಾರಣೆಗೆ ಒಳಪಟ್ಟಿದ್ದಾರೆ. ಅವರ ಹೇಳಿಕೆ ಆಧರಿಸಿ ಸಂಜನಾಗೂ ಸಿಸಿಬಿ ನೊಟೀಸ್ ಕೊಡುವ ಸಾಧ್ಯತೆ ಇದೆ. ಸಹಜವಾಗಿ ಸಂಜನಾ ಟೆನ್ಷನ್‌ನಲ್ಲಿದ್ದಾರೆ. 

ಕಳೆದ ಮೂರು ದಿನಗಳಿಂದ ಮನೆಯಲ್ಲಿದ್ದ ಸಂಜನಾ ಇಂದು ಮನೆಯಿಂದ ಹೊರ ಬಂದಿದ್ದು, ಮಾಧ್ಯಮಗಳು ಪ್ರಶ್ನಿಸಿದಾಗ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ನುಣುಚಿಕೊಂಡರು. 'ನನಗೆ ಸಿಸಿಬಿ ನೊಟೀಸ್ ಕೊಡುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು' ಸಂಜನಾ ಪದೇ ಪದೇ ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!

ಸಂಬರಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಅವರನ್ನು ಸುಮ್ಮನೆ ಬಿಡಲ್ಲ: ಸಂಜನಾ