Asianet Suvarna News Asianet Suvarna News

ಸಂಬರಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಅವರನ್ನು ಸುಮ್ಮನೆ ಬಿಡಲ್ಲ: ಸಂಜನಾ

Sep 7, 2020, 1:43 PM IST

ಬೆಂಗಳೂರು (ಸೆ. 07): ನಟಿ ಸಂಜನಾ ವಿರುದ್ಧ ಪ್ರಶಾಂತ್ ಸಂಬರಗಿ ಮತ್ತೆ ವಾರ್ ಶುರು ಮಾಡಿದ್ದಾರೆ.  ಶಾಸಕ ಜಮೀರ್ ಜೊತೆ ಸಂಜನಾ ಶ್ರೀಲಂಕಾಗೆ ಹೋಗಿದ್ಯಾಕೆ? 2019  ಜುಲೈ 8 ರಂದು ಕೊಲಂಬೋದಲ್ಲಿ ಏನು ನಡೆಯಿತು? ಎಂದು ಪ್ರಶ್ನೆಗಳನ್ನು ಎತ್ತಿದ್ದಾರೆ. 

ಪ್ರಶಾಂತ್ ಸಂಬರಗಿ, ಕೊಲಂಬೋ ಪಾರ್ಟಿಯಲ್ಲಿ ಸಂಜನಾ ಭಾಗಿಯಾಗಿರುವ ವಿಡಿಯೋ ರಿಲೀಸ್ ಮಾಡಿ, ಈ ಪಾರ್ಟಿಗೆ ಸಂಜನಾ ಹೋಗಿದ್ದೇಕೆ? ಎಂಬ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಸಂಜನಾ ಪ್ರತಿಕ್ರಿಯಿಸಿ, ನಾನು ಚೀಫ್ ಗೆಸ್ಟ್ ಆಗಿ ಹೋಗಿದ್ದೆ ಅಷ್ಟೇ. ನನಗೆ ಬೇರೆ ಏನೂ ಗೊತ್ತಿಲ್ಲ. ಯಾಕೆ ಸುಮ್ಮನೆ ಆರೋಪ ಮಾಡಿ, ನನಗೂ, ನನ್ನ ಕುಟುಂಬಕ್ಕೂ ಹೆರಾಸ್ ಮಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಆರೋಪ ಕೇಳಿ ಕೇಳಿ  ನನ್ನ ತಾಯಿಗೆ ಎದೆನೋವು ಶುರುವಾಗಿದೆ. ಅವರಿಗೆ ಹೆಚ್ಚು ಕಡಿಮೆ ಆದರೆ ನಾನು ಸಂಬರಗಿಯವರನ್ನು ಸುಮ್ಮನೆ ಬಿಡಲ್ಲ' ಎಂದು ಸಂಜನಾ ಮಾಧ್ಯಮದೆದುರು ಭಾವುಕರಾದರು.  

ರಾಗಿಣಿ ದ್ವಿವೇದಿ ಸಿಸಿಬಿ ಕಸ್ಟಡಿ ಇಂದು ಮುಕ್ತಾಯ; ಮತ್ತೆ ಪೊಲೀಸ್ ವಶಕ್ಕೆ ಸಾಧ್ಯತೆ?