Asianet Suvarna News Asianet Suvarna News

ಬರ್ತಡೇ ದಿನವೇ ಅವನನ್ನ ಕೊಂದು ಮುಗಿಸಿದ್ರು..! ಚಿಕ್ಕ ವಿಷಯಕ್ಕೆ ಪ್ರಾಣವನ್ನೇ ತೆಗೆದುಬಿಡೋದಾ..?

ಮೆರವಣಿಗೆಯಲ್ಲಿ ನಡೆದಿತ್ತು ಸಣ್ಣ ಗಲಾಟೆ..! 
ಅವನು ಎಂಥಹ ಖತರ್ನಾಕ್ ಇದ್ದ ಗೊತ್ತಾ..?
ಕಾಲಿಗೆ ಗುಂಡು ಬಿದ್ದರೂ ಬುದ್ಧಿ ಕಲಿಯಲಿಲ್ಲ?

ಅವನು ರೌಡಿ ಶೀಟರ್..ಆ ರೌಡಿ ಶೀಟರ್ ಕೂಡ ಮಚ್ಚಿನೇಟಿಗೆ ಬಲಿಯಾಗಿದ್ದಾನೆ. ಎಲ್ಲಾ ಬಿಟ್ಟು ಒಳ್ಳೆಯವನಾಗ್ತೀನಿ ಅಂತ ಹೊರಟವನು ಮಚ್ಚಿನಿಂದಲೇ ಹೆಣವಾಗಿದ್ದಾನೆ. ಇನ್ನೂ ಅವನ ಕೊಲೆಯ ಕಾರಣ ಹುಡುಕ ಹೊರಟ ಪೊಲೀಸರಿಗೆ(Police) ಸಿಕ್ಕಿದ್ದು ಒಂದು ಸಿಲ್ಲಿ ರೀಸನ್. ಈದ್ ಮಿಲಾದ್ ದಿನ ಮೆರವಣಿಗೆಯಲ್ಲಿ(Eid Milad procession) ನಡೆದ ಒಂದು ಸಣ್ಣ ಗಲಾಟೆ ರೌಡಿಯೊಬ್ಬನ ಉಸಿರೇ ನಿಲ್ಲಿಸಿಬಿಟ್ಟಿದೆ. ತನ್ನವರ ಬಳಿ ಒಳ್ಳೆ ಹೆಸರು ಮಾಡಿದ್ದ ಸುಹೇಲ್ ಕೊಲೆಯಾಗಿಬಿಟ್ಟ.. ಆದ್ರೆ ಆತನ ಕೊಲೆಗೆ(Murder) ಕಾರಣ ನಿಜಕ್ಕೂ ಬಡ್ಡಿ ದಂಧೆ ವಿರುದ್ಧ ನಿಂತಿದ್ದಕ್ಕ..? ಇದೇ ಪ್ರಶ್ನೆಯೊಂದಿಗೆ ಪೊಲೀಸರ ಬಳಿ ಹೋದ್ವಿ.. ಆದ್ರೆ ತನಿಖೆ ನಡೆಸುತ್ತಿರುವ ಪೊಲೀಸರು ಹೆಳ್ತಿರೋದೇ ಬೇರೆ... ಅವರು ಈದ್ ಮಿಲಾದ್ ದಿನ ನಡೆದ ಮೆರವಣಿಗೆ ಟೈಂನಲ್ಲಿ ನಡೆದ ಒಂದು ಗಲಾಟೆಯ ಕಥೆಯನ್ನ ಹೇಳಿದ್ರು. ಅದೇ ಗಲಾಟೆಯೇ ಸುಹೇಲ್ ಕೊಲೆಗೆ ಕಾರಣ ಅಂದರು. ಅವನು ರೋಡಿಗಿಳಿದ್ರೆ ಮಹಿಳೆಯರ ಕುತ್ತಿಗೆಯಲ್ಲಿರೋ ಬಂಗಾರ ನಾಪತ್ತೆಯಾಗ್ತಿತ್ತು. ಸ್ವಲ್ಪ ಧೈರ್ಯ ಮಾಡಿ ವಿರೋಧ ವ್ಯಕ್ತಪಡಿಸಿದ್ರೆ ಹೆಣ ಬೀಳಿಸ್ತಿದ್ದ. ಆದ್ರೆ ಅವ್ನ ಪಾಪದ ಕೊಡ ತುಂಬಿತ್ತು ಅನ್ಸುತ್ತೆ. ಯಾವ ಮಾರಕಾಸ್ತ್ರ ಹಿಡಿದು ಕೊಲೆ ಸುಲಿಗೆ ಅಂತ ಮಾಡ್ತಿದ್ನೋ ಅದೇ ಮಚ್ಚಿನೇಟಿಗೆ ಬಲಿಯಾಗಿದ್ದಾನೆ. ನಾನೇ ಏರಿಯಾದಲ್ಲಿ ಪಂಟರ್ ಅಂತ ಹೇಳಿಕೊಂಡು ಓಡಾಡ್ತಿದ್ದವನ ಕಥೆ ಮುಗಿಸಲು ಅದೊಂದು ಗ್ಯಾಂಗ್ ಕಾದು ಕುಳಿತಿತ್ತು. ಆದ್ರೆ ಒಳ್ಳೆ ಸಮಯಕ್ಕಾಗಿ ಕಾದಿದ್ದ ಗ್ಯಾಂಗ್ಗೆ ಸ್ವತಹ ಸುಹೇಲ್ ಟೈಂ ಕೊಟ್ಟುಬಿಟ್ಟಿದ್ದ. ಮೆರವಣಿಗೆಯಲ್ಲಿ ಕಾಲು ತುಳಿದ ಅನ್ನೋ ಸಿಲ್ಲಿ ಕಾರಣಕ್ಕೆ ಎದುರಾಳಿ ಗ್ಯಾಂಗ್‌ನ ಸದಸ್ಯನನ್ನ ಹೊಡೆದು ಕಳಿಸಿದ್ದ ಸುಹೇಲ್. ಆದ್ರೆ ಪಾಪ ಆತನಿಗೆ ಅದೇ ತನ್ನ ಅಂತ್ಯಕ್ಕೆ ಕಾರಣವಾಗುತ್ತೆ ಅನ್ನೋದು ಗೊತ್ತಾಗಲೇ ಇಲ್ಲ.

ಇದನ್ನೂ ವೀಕ್ಷಿಸಿ:  ಡಿಕೆಶಿ ಹೇಳಿದ ಸೆಟ್ಲ್‌ಮೆಂಟ್‌ ಪಾಲಿಟಿಕ್ಸ್ ಇದೇನಾ..? ಹಾಲಿ-ಮಾಜಿ ಡಿಸಿಎಂ ಮಧ್ಯೆ ನಡೆದಿತ್ತು ರಣಭಯಂಕರ ಕಾಳಗ..!