ಶಿವಮೊಗ್ಗದಲ್ಲಿ ಹೈ ಅಲರ್ಟ್‌: ರಾಗಿಗುಡ್ಡ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರ ಸರ್ಪಗಾವಲು

Shivamogga  Ragigudda riot caseಕ್ಕೆ ಸಂಬಂಧಿಸಿದಂತೆ ಬಹುತೇಕ ಎಫ್ಐಆರ್‌ನಲ್ಲಿ ಆರೋಪಿಗಳ ಹೆಸರು ಪುನರಾವರ್ತನೆಯಾಗಿದೆ.
 

Share this Video
  • FB
  • Linkdin
  • Whatsapp

ಶಿವಮೊಗ್ಗ ರಾಗಿಗುಡ್ಡ ಗಲಾಟೆ ಪ್ರಕರಣಕ್ಕೆ(Ragigudda riot case) ಸಂಬಂಧಿಸಿದಂತೆ 24 ಎಫ್ಐಆರ್ ದಾಖಲಾಗಿವೆ. ಇದರಲ್ಲಿ 9 ಕಲ್ಲು ತೂರಾಟ ಪ್ರಕರಣ, 7 ಮನೆ ಡ್ಯಾಮೇಜ್ ಪ್ರಕರಣಗಳಾಗಿವೆ. ಇನ್ನೂ 8 ಸುಮೋಟೋ ಕೇಸ್‌ಗಳಾಗಿವೆ. ಬಹುತೇಕ ಎಫ್ಐಆರ್‌ನಲ್ಲಿ (Fir) ಆರೋಪಿಗಳ ಹೆಸರು ಪುನರಾವರ್ತನೆ ಆಗಿದೆ. ಈಗಾಗಲೇ 60 ಆರೋಪಿತರನ್ನು ಪೊಲೀಸರು(Police) ಬಂಧಿಸಿದ್ದಾರೆ. ಉಳಿದ 15ಕ್ಕೂ ಹೆಚ್ಚು ಆರೋಪಿತರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕಲ್ಲು ತೂರಾಟದ ವೇಳೆ ಗಾಯಗೊಂಡ ಎರಡು ಕೋಮಿನ ಒಟ್ಟು 12 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಗಿಗುಡ್ಡ ಗಲಾಟೆ ಹಿನ್ನೆಲೆ ಶಿವಮೊಗ್ಗ(Shivamogga) ನಗರದಾದ್ಯಂತ ಸೆಕ್ಷನ್ 144 ಮುಂದುವರೆದಿದೆ. ರಾಗಿಗುಡ್ಡ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ರಾಗಿಗುಡ್ಡ ಒಳ ಪ್ರವೇಶಿಸುವಾಗ ಪೊಲೀಸರಿಂದ ತಪಾಸಣೆ ನಡೆಸಲಾಗುತ್ತದೆ. ಕಳೆದ ರಾತ್ರಿ ಕೂಡ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ವೀಕ್ಷಿಸಿ: ಬೆಂಗಳೂರು ಶಾಲೆಗಳ ವೇಳಾಪಟ್ಟಿ ಬದಲಾಗುತ್ತಾ ? ಸಿಲಿಕಾನ್ ಸಿಟಿ ಸ್ಕೂಲ್ ಬಾಗಿಲು ತೆರೆಯೋದು ಎಷ್ಟೊತ್ತಿಗೆ..?

Related Video