Asianet Suvarna News Asianet Suvarna News

ಭೂ ವಿಜ್ಞಾನಾಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಟ್ವಿಸ್ಟ್..! ಪೊಲೀಸರ ತನಿಖೆ ವೇಳೆ ಬಯಲಾಯ್ತು ಸ್ಪೋಟಕ ರಹಸ್ಯ!

ಹಣ ಕದ್ದು ಕೋಣನಕುಂಟೆಯ ಸ್ನೇಹಿತ ಶಿವು ನಿವಾಸಲ್ಲಿ ಇರಿಸಿದ್ದ ಆರೋಪಿ 
‘ಯಾರೋ ಹಣ ಕೊಡಬೇಕಿತ್ತು, ಅದನ್ನೇ ನಿಮ್ಮ ಮನೆಯಲ್ಲಿ ಇಟ್ಟಿರುವೆ’
‘ಮಹಾದೇಶ್ವರ ಬೆಟ್ಟದಿಂದ ಬಂದ ಬಳಿಕ ಹಣ ತೆಗೆದುಕೊಳ್ಳುವೆ’ ಎಂದಿದ್ದ
ಹಣ ತಂದುಕೊಟ್ಟಿದ್ದರಿಂದ ಶಿವುವನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿದ ಪೊಲೀಸರು

ಭೂ ವಿಜ್ಞಾನಾಧಿಕಾರಿ ಪ್ರತಿಮಾ(Pratima) ಕೊಲೆ(Murder) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ಈ ಬಗ್ಗೆ EXCLUSIVE ಮಾಹಿತಿ ಇದೆ. ಆರೋಪಿ ಕಿರಣ್ ಕೊಲೆ ಮಾಡಿದ್ದು ಹಳೇ ದ್ವೇಷಕ್ಕಾಗಿ ಅಲ್ಲ, ಬಿಡಿಗಾಸಿಗಾಗಿ ಅನ್ನ ಹಾಕಿದವಳ ಕುತ್ತಿಗೆಯನ್ನೇ ಕೊಯ್ದಿದ್ದಾನೆ ಎಂದು ಹೇಳಲಾಗ್ತಿದೆ. ಕೇವಲ 5 ಲಕ್ಷದ ಆಸೆಗೆ ಅಧಿಕಾರಿಯ ಹೆಣವನ್ನೇ ಉರುಳಿಸಿಬಿಟ್ಟಿದ್ದಾನೆ. ಪೊಲೀಸ್ ವಿಚಾರಣೆ ವೇಳೆ ಸುಳ್ಳು ಹೇಳಿಕೆ ನೀಡಿದ್ದ ಆರೋಪಿ ಕಿರಣ್, ಸ್ನೇಹಿತ ಶಿವು ಎಂಬಾತನಿಂದ ಅಸಲಿ ಸತ್ಯ ಬಹಿರಂಗವಾಗಿದೆ. ಕೆಲಸದಿಂದ ತೆಗೆದಿದ್ದಕ್ಕೆ ಕೊಲೆ ಮಾಡಿದೆ ಎಂದು ಕಿರಣ್‌ ಕಥೆ ಕಟ್ಟಿದ್ದಾನೆ. ಕೊಲೆ ಬಳಿಕ ಮನೆಯಲ್ಲಿದ್ದ ಹಣ, ಚಿನ್ನವನ್ನು ಆರೋಪಿ ಕದ್ದೊಯ್ದಿದ್. ಹಣ ಮನೆಯಲ್ಲಿರುವ ವಿಚಾರ ತಿಳಿದುಕೊಂಡಿದ್ದ ಕಿರಣ್ , ಹಣ ಕದ್ದು ಸ್ನೇಹಿತ ಶಿವು ನಿವಾಸಲ್ಲಿ ಇರಿಸಿದ್ದ. ಕೊಲೆ ಬಳಿಕ 5 ಲಕ್ಷ ನಗದು, 4 ಲಕ್ಷ ಮೌಲ್ಯದ ಚಿನ್ನ ದೋಚಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ:  ವರನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಧುಮಗಳು: ಜಾತಿಯೇ ಐಶ್ವರ್ಯ ಸಾವಿಗೆ ಕಾರಣವಾಯ್ತಾ ?