Asianet Suvarna News Asianet Suvarna News

ವರನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಧುಮಗಳು: ಜಾತಿಯೇ ಐಶ್ವರ್ಯ ಸಾವಿಗೆ ಕಾರಣವಾಯ್ತಾ ?

ನವೆಂಬರ್ 23ಕ್ಕೆ ಮದುವೆಯಾಗಬೇಕಿದ್ದ ಐಶ್ವರ್ಯ ಎಂಬ ಯುವತಿ ವರನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
 

ಮದುವೆಗೆ ಇನ್ನೆರಡು ದಿನ ಇರುವಾಗಲೇ ಮಧುಮಗಳು(bride) ಆತ್ಮಹತ್ಯೆ(suicide) ಮಾಡಿಕೊಂಡಿರುವ ಘಟನೆ ಬಳ್ಳಾರಿಯ ಹೊಸಪೇಟೆ ತಾಲೂಕಿನ ಟಿ.ಬಿ. ಡ್ಯಾಂ ಬಳಿ ನಡೆದಿದೆ. ವರನ ಮನೆಯಲ್ಲಿ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವರ ಅಶೋಕನನ್ನು ಟಿಬಿ ಡ್ಯಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರೋಣತ್ತರ ಪರೀಕ್ಷೆ ನಡೆದಿದೆ. ಐಶ್ವರ್ಯ  ಆತ್ಮಹತ್ಯೆಗೆ ಪ್ರಚೋದನೆಯೇ ಕಾರಣವೆಂದು ಆಕೆಯ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಐಶ್ವರ್ಯ ಮತ್ತು ಅಶೋಕ ಪರಸ್ಪರ ಪ್ರೀತಿಸಿಸುತ್ತಿದ್ದರು. ನವೆಂಬರ್ 23ಕ್ಕೆ ಅವರ ಮದುವೆ ಇದ್ದು, ಭಾನುವಾರ ತಡರಾತ್ರಿ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಜಾತಿ‌ಕಾರಣ ಎಂಬ ಆರೋಪ ಸಹ ಕೇಳಿಬರುತ್ತಿದೆ. 

ಇದನ್ನೂ ವೀಕ್ಷಿಸಿ:  ಶ್ರೀಕಿ ಬಳಿ ಬಿಟ್ ಕಾಯಿನ್ ವರ್ಗಾಹಿಸಿಕೊಂಡ್ರಾ ಅಧಿಕಾರಿಗಳು..? ಆ 3 ಪೊಲೀಸ್‌ ಅಧಿಕಾರಿಗಳು ಯಾರು..?

Video Top Stories