ಪ್ರಜ್ವಲ್‌ ಟ್ರಾವೆಲ್‌ ಹಿಸ್ಟರಿ ಕಲೆಹಾಕಿದ ಎಸ್‌ಐಟಿ ಅಧಿಕಾರಿಗಳು..ಹಂಗೇರಿಯಾದಿಂದ ವಿಡಿಯೋ ಮಾಡಿದ್ರಾ ಸಂಸದ?

ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣನನ್ನು ಎಸ್​ಐಟಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ ನೀಡಿದೆ.ಅಲ್ಲದೇ ಪ್ರಜ್ವಲ್‌ ಟ್ರಾವೆಲ್‌ ಹಿಸ್ಟರಿಯನ್ನು ಎಸ್‌ಐಟಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

First Published Jun 1, 2024, 9:24 AM IST | Last Updated Jun 1, 2024, 9:24 AM IST

ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣನನ್ನು(Prajwal Revanna) ಎಸ್​ಐಟಿ(SIT) ಕಸ್ಟಡಿಗೆ ನೀಡಿ ಕೋರ್ಟ್​ ಆದೇಶ ನೀಡಿದೆ. 6 ದಿನ ಎಸ್​ಐಟಿ ಕಸ್ಟಡಿಗೆ ನೀಡಿ ಕೋರ್ಟ್(Court)​ ಆದೇಶ ನೀಡಿದ್ದು, ಮೆಡಿಕಲ್ ಪರೀಕ್ಷೆಗೆ ಸಹಕಾರ ನೀಡಬೇಕು ಎಂದು ಹೇಳಿದೆ. ಬೆಳಗ್ಗೆ 9.30ರಿಂದ 11.30 ಒಳಗೆ ವಕೀಲರ ಭೇಟಿಗೆ ಅವಕಾಶ ನೀಡಲಾಗಿದೆ. ಆರೋಪಿ ಪ್ರಜ್ವಲ್‌​ಗೆ ಕಿರುಕುಳ ನೀಡಬಾರದು ಎಂದು ಎಸ್​ಐಟಿಗೆ ಸೂಚನೆ ನೀಡಿ ಕೋರ್ಟ್‌ ಕಸ್ಟಡಿಗೆ ನೀಡಿದೆ. 34 ದಿನ ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ಎಲ್ಲಿ ತಲೆ ಮರೆಸಿಕೊಂಡಿದ್ದರು ಎಂಬ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕುತ್ತಿದೆ. ವಿಡಿಯೋ ಎಲ್ಲಿಂದ ಮಾಡಿದ್ದು, ಹಂಗೇರಿ, ಇಟಲಿ, ಮ್ಯೂನಿಚ್‌ ಸುತ್ತಮುತ್ತ ವಾಸ್ತವ್ಯ ಹೂಡಿರುವ ಬಗ್ಗೆ ಎಸ್ಐಟಿ ಮಾಹಿತಿ ಕಲೆ ಹಾಕಿದೆ.

ಇದನ್ನೂ ವೀಕ್ಷಿಸಿ:  ಮಹಿಳೆ ಕಿಡ್ನಾಪ್​ ಕೇಸ್‌​: ಭವಾನಿ ರೇವಣ್ಣಗೆ ಬಂಧನ ಭೀತಿ..SIT ಅಧಿಕಾರಿಗಳ ವಿಚಾರಣೆಗೆ ಸಿಗೋದಿಲ್ವಾ..?