ಮಹಿಳೆ ಕಿಡ್ನಾಪ್​ ಕೇಸ್‌​: ಭವಾನಿ ರೇವಣ್ಣಗೆ ಬಂಧನ ಭೀತಿ..SIT ಅಧಿಕಾರಿಗಳ ವಿಚಾರಣೆಗೆ ಸಿಗೋದಿಲ್ವಾ..?

ಹೊಳೆನರಸೀಪುರ ಮನೆಯಲ್ಲೂ ಭವಾನಿ ರೇವಣ್ಣ ಇಲ್ಲ
ಸಾಲಿಗ್ರಾಮ ತವರು ಮನೆಯಲ್ಲೂ ಭವಾನಿ ರೇವಣ್ಣಇಲ್ಲ
15 ದಿನದಿಂದ ಬಹಿರಂಗವಾಗಿ ಕಾಣಿಸಿಕೊಳ್ಳದ ಭವಾನಿ 

Share this Video
  • FB
  • Linkdin
  • Whatsapp

ಮಹಿಳೆ ಕಿಡ್ನಾಪ್​ ಕೇಸ್‌​ನಲ್ಲಿ(Woman kidnapping Case​) ಭವಾನಿಗೆ ಬಂಧನ ಭೀತಿ ಎದುರಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್‌ ನಿನ್ನೆ ವಜಾಗೊಳಿಸಿದೆ. ಯಾವುದೇ ಕ್ಷಣದಲ್ಲಿ ಭವಾನಿ ರೇವಣ್ಣ(Bhavani revanna) ಅರೆಸ್ಟ್(Arrest) ಮಾಡುವ ಸಾಧ್ಯತೆ ಇದೆ. ಈಗಾಗಲೇ ಭವಾನಿಗೆ ಎಸ್‌ಐಟಿಯಿಂದ(SIT) ನೋಟಿಸ್(Notice) ನೀಡಲಾಗಿದೆ. ಇಂದು SIT ವಿಚಾರಣೆಗೆ ಭವಾನಿ ರೇವಣ್ಣ ಹೋಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ. SIT ವಿಚಾರಣೆ ವೇಳೆಯೇ ಅರೆಸ್ಟ್ ಆಗುವ ಸಾಧ್ಯತೆ ಸಹ ಇದೆ. ಭವಾನಿ ರೇವಣ್ಣ ಮನೆಯಲ್ಲಿಯೇ ಎಸ್​ಐಟಿ ವಿಚಾರಣೆ ನಡೆಸಲಿದೆ. ಹೊಳೆನರಸೀಪುರ ಚನ್ನಾಂಬಿಕ ನಿಲಯದಲ್ಲಿ ವಿಚಾರಣೆ ನಡೆಯಬಹುದು. ಆದ್ರೆ ಚನ್ನಾಂಬಿಕ ನಿಲಯಕ್ಕೆ ಭವಾನಿ ಬರೋದೆ ಡೌಟ್ ಎನ್ನಲಾಗ್ತಿದೆ. ಸದ್ಯ ಭವಾನಿ ರೇವಣ್ಣ ನಡೆ ಕುತೂಹಲ ಮೂಡಿಸಿದೆ.

ಇದನ್ನೂ ವೀಕ್ಷಿಸಿ: Today Horoscope: ಇಂದು ಕುಜ ಪರಿವರ್ತನೆಯಾಗಲಿದ್ದು, ಯಾವ ರಾಶಿಯವರಿಗೆ ಶುಭ-ಅಶುಭ ?

Related Video