Asianet Suvarna News Asianet Suvarna News

ಭಾರತ ಬಿಟ್ಟು ಪ್ರಜ್ವಲ್ ರೇವಣ್ಣ ಹೋಗಿರುವುದಾರೂ ಎಲ್ಲಿಗೆ..? ಅಶ್ಲೀಲ ವಿಡಿಯೋ ವಿರುದ್ಧ ಬೀದಿಗಿಳಿದು ಪ್ರತಿಭಟನೆ

ಸಂತ್ರಸ್ತೆಯಿಂದ ಪ್ರಜ್ವಲ್ ರೇವಣ್ಣ ಮೇಲೆ ದಾಖಾಲಾಯ್ತು ದೂರು
ತಂದೆ ಮಗನ ಮೇಲೆ ಮನೆ ಕೆಲಸದವಳಿಂದ ದಾಖಲಾಯ್ತು ದೂರು
ಅಶ್ಲೀಲ ವಿಡಿಯೋ ವಿರುದ್ಧ ಆಕ್ರೋಶದಿಂದ ಪ್ರತಿಭಟಿಸಿದ ಕಾಂಗ್ರೆಸ್

ಕಳೆದ ನಾಳ್ಕೈದು ದಿನಗಳಿಂದ ರಾಜ್ಯದ ತುಂಬೆಲ್ಲ ವೈರಲ್ ವಿಡಿಯೋ ಮತ್ತು ಪೆನ್ ಡ್ರೈವನ್ನದ್ದೇ(Pendrive) ಚರ್ಚೆ ಚರ್ಚೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅವರದ್ದು ಎನ್ನಲಾದ ಹಲವು ಅಶ್ಲೀಲ ವಿಡಿಯೋಗಳು ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ. ಹಾಗೆನೇ ಇನ್ನೂ ಸಾವಿರಾರು ವಿಡಿಯೋಗಳಿರುವ ಪೆನ್‌ಡ್ರೈವ್ ಇದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿಗೆ(SIT) ತನಿಖೆಗೆ ಒಪ್ಪಿಸಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಒಂದೇ ಚರ್ಚೆ. ಎಲ್ಲಿ ನೋಡಿದರೂ ಅದರದ್ದೇ ಮಾತು. ಸಲೂನ್ ಶಾಪ್, ಹೋಟೆಲ್, ಮೆಟ್ರೋ, ರೈಲ್ವೇ ಸ್ಟೇಷನ್, ಮೆಜೆಸ್ಟಿಕ್, ಬಾರ್, ಪಾನ್ ಶಾಪ್, ಪ್ಲೇ ಗ್ರೌಂಡ್. ಇದಿಷ್ಟೇ ಯಾಕೆ ಜಮೀನು-ಗದ್ದೆಗಳಲ್ಲೂ ಈಗ ಅಶ್ಲೀಲ ವಿಡಿಯೋಗಳದ್ದೇ ಚರ್ಚೆಯಾಗುತ್ತಿದೆ. ಹಾಸನ(Hassan) ಸಂಸದ ಪ್ರಜ್ವಲ್ ರೇವಣ್ಣನವ ಅಶ್ಲೀಲ ವಿಡಿಯೋಗಳು ಎಂದು ಹೇಳಲಾಗುತ್ತಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರು ಅನೇಕ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಹೇಳಲಾಗುತ್ತಿದೆ. ನೂರಾರು ಮಹಿಳೆಯರೊಂದಿಗೆ ಬಲವಂತವಾಗಿ ನಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಈ ವಿಡಿಯೋಗಳಿಂದ ಹಾಸನದ ನೂರಾರು ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ರೊಚ್ಚಿಗೆದ್ದ ಜನ ವೈರಲ್ ಆಗಿರುವ ಅಶ್ಲೀಲ ವಿಡಿಯೋಗಳ ವಿರುದ್ಧ ಬೀದಿಗಿಳಿದಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಆಕ್ರೋಶಗೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ:  Prajwal Revanna: ಮಗನ ಪೆನ್‌ಡ್ರೈವ್‌ ಬಗ್ಗೆ ಮೌನ ಮುರಿದ ರೇವಣ್ಣ: ಅಶ್ಲೀಲ ವಿಡಿಯೋ ಬಗ್ಗೆ ಹೇಳಿದ್ದೇನು..?

Video Top Stories