Prajwal Revanna: ಮಗನ ಪೆನ್‌ಡ್ರೈವ್‌ ಬಗ್ಗೆ ಮೌನ ಮುರಿದ ರೇವಣ್ಣ: ಅಶ್ಲೀಲ ವಿಡಿಯೋ ಬಗ್ಗೆ ಹೇಳಿದ್ದೇನು..?

ಕಾನೂನು ರೀತಿಯಲ್ಲಿ  ಕ್ರಮ ತೆಗೆದುಕೊಳ್ಳಲಿ. ದೇವೇಗೌಡರ ಜತೆ ಪ್ರಜ್ವಲ್ ವಿಡಿಯೋ  ಚರ್ಚಿಸಿಲ್ಲ ಎಂದು ಹೆಚ್‌.ಡಿ.ರೇವಣ್ಣ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಮಗನ ಅಶ್ಲೀಲ ವಿಡಿಯೋ ಬಗ್ಗೆ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ಅವರದೇ ಸರ್ಕಾರ ಇದೆ ತನಿಖೆ ನಡೆಸಲಿ. ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಿ ಎಂದು ಶಾಸಕ ರೇವಣ್ಣ(HD Revanna) ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ(Prajwal Revanna) ವಿದೇಶಕ್ಕೆ ತೆರಳಿದ ವಿಚಾರವಾಗಿ ಮಾತನಾಡಿದ ಅವರು, ಎಫ್ಐಆರ್ ಹಾಕ್ತಾರೆ , ಎಸ್ಐಟಿ ಮಾಡ್ತಾರೆ ಅಂತಾ ಗೊತ್ತಿತ್ತಾ?. ಪ್ರಜ್ವಲ್ ವಿದೇಶಕ್ಕೆ ಹೋಗಬೇಕಿತ್ತು ಹೋಗಿದ್ದಾನೆ. ಎಸ್ಐಟಿ(SIT) ಕರೆದರೆ ಬರ್ತಾನೆ . ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಿ. ದೇವೇಗೌಡರ(Devegowda) ಜತೆ ಪ್ರಜ್ವಲ್ ವಿಡಿಯೋ ಚರ್ಚಿಸಿಲ್ಲ. ಕಾನೂನು ರೀತಿ ಪ್ರಕರಣವನ್ನು ಎದುರಿಸುತ್ತೇವೆ. 4-5 ವರ್ಷಗಳ ಹಳೆಯ ಪ್ರಕರಣ ತಂದು ಕೇಸ್ ಹಾಕಿದ್ದಾರೆ. ಅಶ್ಲೀಲ ವಿಡಿಯೋ ಸೇರಿ ಯಾವುದೇ ವಿಷಯಕ್ಕೂ ಮಾತಾಡಲ್ಲ. ಎಸ್ಐಟಿ ತನಿಖೆಗೆ ತೊಂದರೆ ಆಗಬಾರರೆಂದು ಮಾತಾಡಲ್ಲ. ನನ್ನ ವಿರುದ್ಧ ಎಫ್ಐಆರ್ ರಾಜಕೀಯ ಪ್ರೇರಿತ ಎಂದು ರೇವಣ್ಣ ಹೇಳಿದ್ದಾರೆ. ಜೆಡಿಎಸ್‌ನಿಂದ(JDS)ರೇವಣ್ಣ , ಪ್ರಜ್ವಲ್ ಉಚ್ಛಾಟನೆ ಒತ್ತಡ ಕೇಳಿ ಬಂದ ಬಗ್ಗೆ ಮಾತನಾಡಿದ ಅವರು, ನಮ್ಮ ವಿರುದ್ಧ ಕ್ರಮ ಪಕ್ಷದ ನಿರ್ಧಾರ ಎಂದ ರೇವಣ್ಣ. ದೇವೇಗೌಡರ ಜತೆ ಪ್ರಜ್ವಲ್ ವಿಡಿಯೋ ಚರ್ಚಿಸಿಲ್ಲ. ಕಾನೂನು ಕ್ರಮ ಏನ್ ಆಗುತ್ತೆ ಆಗಲಿ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: 'ಪ್ರಜ್ವಲ್ ಪ್ರಕರಣದಲ್ಲಿ ಕುಟುಂಬವನ್ನು ಏಕೆ ಎಳೆಯುತ್ತೀರಾ? ದೇವೇಗೌಡರು,ನನ್ನ ಹೆಸರನ್ನು ಏಕೆ ಸೇರಿಸುತ್ತೀರಾ?'

Related Video