ವಿಡಿಯೋ ವೈರಲ್ ಆಗ್ತಿದ್ದಂತೆ ಪ್ರಜ್ವಲ್ ಎಸ್ಕೇಪ್? ಬಂಧನ ತಪ್ಪಿಸಿಕೊಳ್ಳಲು ಜರ್ಮನಿಗೆ ಎಸ್ಕೇಪ್ ?

ಪ್ರಜ್ವಲ್ ರೇವಣ್ಣನ ನೂರಾರು ಅಶ್ಲೀಲ ವಿಡಿಯೋ ವೈರಲ್
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ತನಿಖೆ ಎಸ್ಐಟಿಗೆ
ಎಸ್ಐಟಿ ತನಿಖೆಗೆ ಒತ್ತಾಯಿಸಿ ಮಹಿಳಾ ಆಯೋಗದ ಪತ್ರ

Share this Video
  • FB
  • Linkdin
  • Whatsapp

ಅವನು ಸಂಸದ, ಪಾರ್ಲಿಮೆಂಟ್‌ನಲ್ಲಿ ಕೂತು ತನ್ನ ಜನರ ಪರವಾಗಿ ಧ್ವನಿ ಎತ್ತಬೇಕಿದ್ದವ.ಆದ್ರೆ ಆತ ಮಾಡಿದ್ದು ಮಾತ್ರ ಇಡೀ ಮನಕುಲವೇ ಛೀ.. ಥೂ..ಅಂತ ಉಗಿಯುವ ಕೆಲಸವನ್ನ. ನಾವು ಮಾತನ್ನಾಡ್ತೀರೋದು ಹಾಸನ(Hassan) ಸಂಸದ ಪ್ರಜ್ವಲ್ ರೇವಣ್ಣನ (Prajwal Revanna) ಬಗ್ಗೆ.ಎಲೆಕ್ಷನ್‌ಗೂ ಕೆಲವೇ ದಿನಗಳ ಹಿಂದೆ ವೈರಲ್ ಆದ ಕೆಲ ವಿಡಿಯೋಗಳು ರೇವಣ್ಣನ ಕುಟುಂಬವನ್ನ ಬೆತ್ತಲಾಗಿಸಿದೆ.ಇನ್ನೂ ಇದೇ ವಿಡಿಯೋಗಳನ್ನೇ ಇಟ್ಟುಕೊಂಡು ಕೆಲ ಹೆಣ್ಣು ಮಕ್ಕಳು ಕೇಸ್ ದಾಖಲಿಸಿದ್ದಾರೆ.ಒಟ್ಟಿನಲ್ಲಿ ಈ ಪೆನ್‌ಡ್ರೈವ್‌ ಪ್ರಕರಣ (Pen Drive Case) ಕ್ಷಣಕ್ಷಣಕ್ಕೂ ಹೊಸ ತಿರುವುಗಳನ್ನ ಪಡೆದುಕೊಳ್ತಿದೆ. ಆದ್ರೆ ಇದೇ ಪ್ರಕರಣದ ಬಗ್ಗೆ ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಯಾವಾಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹೊರ ಬಂತೋ ಕಾಂಗ್ರೆಸ್ ಸಿಡಿದೆದ್ದಿದೆ. ಬೀದಿಗಿಳಿದು ಪ್ರತಿಭಟಿಸುತ್ತಿದೆ. ಜೆಡಿಎಸ್ (JDS) ಮತ್ತು ಬಿಜೆಪಿ(BJP) ನಾಯಕರ ವಿರುದ್ಧ ಮಾತಿನ ಸಮರ ಶುರು ಮಾಡಿದೆ. ಮೋದಿ (Narendra Modi) ಈ ಪ್ರಕರಣದ ಬಗ್ಗೆ ಮಾತನ್ನಾಡಬೇಕು ಅಂತಿದ್ದಾರೆ. ಆದ್ರೆ ಇತ್ತ ಬಿಜೆಪಿ ಮಾತ್ರ ಈ ವಿವಾದದಿಂದ ಅಂತರ ಕಾಯ್ದುಕೊಳ್ಳುತ್ತಿದೆ. ರಾಸಲೀಲೆ ಪ್ರಕರಣಗಳು ರಾಜ್ಯ ರಾಜಕೀಯದಲ್ಲಿ ರಾಡಿ ಎಬ್ಬಿಸಿರುವುದು ಇದೇ ಮೊದಲಲ್ಲ. ಆದ್ರೆ ಈ ಬಾರಿ ಲೋಕಸಭೆ ಚುನಾವಣೆ ಹೊತ್ತಲ್ಲೇ ಪ್ರಜ್ವಲ್ ಅಶ್ಲೀಲ ವಿಡಿಯೋ ಕೋಲಾಹಲ ಎಬ್ಬಿಸಿದೆ. 

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ವಿರುದ್ಧ 'ಕೈ'ಪ್ರಚಾರ, ಎಲ್ಲಿ..? ಯಾಕೆ..? ಪಕ್ಷದ ಗದ್ದುಗೆ ಹಾದಿಗೆ ಎದುರಾಯ್ತಾ ಕಲ್ಲು ಮುಳ್ಳು..?

Related Video