
ಅರೆಸ್ಟ್‌ಗೂ ಮುನ್ನ ಏರ್ಪೋರ್ಟ್ ನಲ್ಲಿ ನಡೆದಿದ್ದೇನು..? ಎಸ್‌ಐಟಿ ಅಧಿಕಾರಿಗಳು ಬರುತ್ತಿದ್ದನ್ನು ಕಂಡು ಪ್ರಜ್ವಲ್ ಗರಂ!
ಹಾಸನ ಪೆನ್‌ಡ್ರೈವ್ ಪ್ರಕರಣ ಬಳಿಕ ದೇಶ ತೊರೆದಿದ್ದ ಸಂಸದ ಪ್ರಜ್ವಲ್ ರೇವಣ್ಣರನ್ನ 35 ದಿನಗಳ ಬಳಿಕ ಕೊನೆಗೂ ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ.
ಅರೆಸ್ಟ್‌ಗೂ ಮುನ್ನ ಏರ್ಪೋರ್ಟ್ನಲ್ಲಿ ಏನಾಯಿತು ಎಂಬ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ. ಇಮಿಗ್ರೇಷನ್ ಪ್ರಕ್ರಿಯೆ ವೇಳೆ ನಡೆದ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ. ಏರ್ಪೋರ್ಟ್ನಲ್ಲಿ( Airport) ಎಸ್‌ಐಟಿ(SIT) ಅಧಿಕಾರಿಗಳಿಗೆ ಪ್ರಜ್ವಲ್(Hasan pen drive case) ಆವಾಜ್ ಆಗಿದ್ದು, ಬಳಿಕ ಎಸ್ಐಟಿಯಿಂದ ಪ್ರಜ್ವಲ್ ರೇವಣ್ಣ(Prajwal revanna) ಅರೆಸ್ಟ್ ಮಾಡಲಾಗಿದೆ. ಎಸ್‌ಐಟಿ ಅಧಿಕಾರಿಗಳು ಬರುತ್ತಿದ್ದನ್ನು ಕಂಡು ಪ್ರಜ್ವಲ್ ಗರಂ ಆಗಿದ್ದು, ನನ್ನನ್ನು ಮುಟ್ಟಬೇಡಿ ಎಂದು ಆವಾಜ್ ಹಾಕಿದ್ದಾರಂತೆ. ನಾನೇ ಬರ್ತೀನಿ ನೀವು ಮುಟ್ಟಬೇಡಿ . ಇಮಿಗ್ರೇಷನ್ ಹಸ್ತಾಂತರ ಬಳಿಕ ಎಸ್ಐಟಿಯಿಂದ ಬಂಧನ ಮಾಡಲಾಗಿದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: Yash-Radhika: ಯಶ್-ರಾಧಿಕಾ ಕಿತ್ತಾಡಿಕೊಳ್ಳುತ್ತಾರಾ..? ಅಭಿಮಾನಿಯ ಪ್ರಶ್ನೆಗೆ ನಟಿ ಉತ್ತರ ಏನು..?