Asianet Suvarna News Asianet Suvarna News

ಸುರತ್ಕಲ್ ನೈತಿಕ ಪೊಲೀಸ್‌ಗಿರಿ ಆರೋಪಿಗಳು ಕೆಲವೇ ಗಂಟೆಯಲ್ಲಿ ರಿಲೀಸ್!

* ಮಂಗಳೂರಿನ ಸುರತ್ಕಲ್ ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ

* ಪೊಲೀಸ್ ಅಧಿಕಾರಿ ಸಮ್ಮುಖದಲ್ಲೇ ಗೂಂಡಾಗಿರಿ ನಡೆದ್ರೂ ಮೃಧು ಧೋರಣೆ ತಳೆದ್ರಾ ಮಂಗಳೂರು ಪೊಲೀಸರು?

* ಮಂಗಳೂರಿನ ನೈತಿಕ ಪೊಲೀಸ್ ಗೂಂಡಾಗಳ ಬಗ್ಗೆ ಪೊಲೀಸರ ಸಾಫ್ಟ್ ಕಾರ್ನರ್

* ಬಂಧಿತ ಐವರು ಆರೋಪಿಗಳು ಠಾಣಾ ಜಾಮೀನಿನಲ್ಲಿ ಬಿಡುಗಡೆ

ಮಂಗಳೂರು(ಸೆ. 28)  ಮಂಗಳೂರಿನ (Mangaluru) ಸುರತ್ಕಲ್ ನಲ್ಲಿ ನೈತಿಕ ಪೊಲೀಸ್ ಗಿರಿ(Moral policing) ಪ್ರಕರಣಕ್ಕೆ ಸಂಬಂದಿಸಿ ಒಂದಷ್ಟು ಪ್ರಶ್ನೆಗಳು ಎದ್ದಿವೆ ಪೊಲೀಸ್ ಅಧಿಕಾರಿ ಸಮ್ಮುಖದಲ್ಲೇ ಗೂಂಡಾಗಿರಿ ನಡೆದ್ರೂ ಮೃಧು ಧೋರಣೆ ತಾಳಿದ್ರಾ ಪೊಲೀಸರು ಎಂಬ ಪ್ರಶ್ನೆ  ಎದ್ದಿದೆ. ಮಂಗಳೂರಿನ ಪೊಲೀಸರು ಸಾಫ್ಟ್ ಕಾರ್ನರ್ ತೋರಿದ್ರಾ?

ಬಂಧಿತ ಐವರು ಆರೋಪಿಗಳು ಠಾಣಾ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ. ಬಂಧನವಾದ ಕೆಲವೇ ಗಂಟೆಗಳಲ್ಲಿ ಆರೋಪಗಳನ್ನು ಬಂಧಮುಕ್ತಗೊಳಿಸಲಾಗಿದೆ. ಆರೋಪಿಗಳಾದ ಪ್ರೀತಂ ಶೆಟ್ಟಿ, ಅರ್ಶಿತ್, ಶ್ರೀನಿವಾಸ, ರಾಕೇಶ್, ಅಭಿಷೇಕ್ ಬಿಡುಗಡೆಯಾಗಿದ್ದಾರೆ. ಐಪಿಸಿ 341, 323, 504ರಡಿ ಪ್ರಕರಣ ದಾಖಲಿಸಿ ಠಾಣಾ ಜಾಮೀನಿನಡಿ ಬಿಡುಗಡೆ ಮಾಡಲಾಗಿದೆ.

ಮಂಗಳೂರಿನಲ್ಲಿ ಇರೋದು ತಾಲೀಬಾನಿ ಸರ್ಕಾರವಾ?

ನೈತಿಕ ಪೊಲೀಸ್ ಗಿರಿ ವಿಡಿಯೋ ಸಾಕ್ಷ್ಯ ಇದ್ದರೂ ದುರ್ಬಲ ಸೆಕ್ಷನ್ ನಡಿ ಕೇಸು ದಾಖಲು? ಮಾಡಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ. ಐವರು ಆರೋಪಿಗಳು ಹಿಂದೂ ಪರ ಸಂಘಟನೆ ಕಾರ್ಯಕರ್ತರಾಗಿದ್ದಾರೆ. ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಕೇರಳದ ಕೊಲ್ಲಂ ನಿವಾಸಿ ಸವಿಯೋ.ಟಿ.ಆಲ್ಫೋನ್ಸಾ ದೂರಿನಡಿ ಪ್ರಕರಣ ದಾಖಲಾಗಿತ್ತು ಪೊಲೀಸ್ ಅಧಿಕಾರಿ ಅಂಗಲಾಚಿದರೂ ವಿದ್ಯಾರ್ಥಿಗಳಿದ್ದ ವಾಹನದ ಮೇಲೆ ದಾಳಿ ನಡೆದಿತ್ತು.

ಮಂಗಳೂರು ಹೊರವಲಯದ ಸುರತ್ಕಲ್ ಟೋಲ್ ಗೇಟ್ ಬಳಿ ನೈತಿಕ ಪೊಲೀಸಗಿರಿ ನಡೆದ ಪ್ರಕರಣ ಉಡುಪಿಯ ಮಲ್ಪೆ ಬೀಚ್ ಗೆ ತೆರಳಿ ವಾಪಾಸ್ ಆಗ್ತಿದ್ದ ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳು ಮುಗಿಬಿದ್ದಿದ್ದರು. ಅನ್ಯಕೋಮಿನ ವಿದ್ಯಾರ್ಥಿಗಳು ಅನ್ನೋ ಮಾಹಿತಿ ಹಿನ್ನೆಲೆ ಹಿಂದೂ ಕಾರ್ಯಕರ್ತರು ದಾಳಿ ನಡೆಸಿದ್ದರು ಎನ್ನಲಾಗಿದೆ. ಸಿವಿಲ್ ಡ್ರೆಸ್ ನಲ್ಲಿದ್ದ ಪೊಲೀಸ್ ಅಂಗಲಾಚಿದರೂ ಕೇಳದೇ ದಾಳಿ ಮಾಡಿದ್ದರು. 

Video Top Stories