ನೈತಿಕ ಪೊಲೀಸ್‌ಗಿರಿ: 'ಮಂಗಳೂರಿನಲ್ಲಿರೋದು ಬಿಜೆಪಿ ಸರ್ಕಾರನಾ? ತಾಲಿಬಾನ್‌ಗಳದ್ದಾ.'?

 ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮುಖ್ಯಮಂತ್ರಿಗಳ ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ.? ತಾಲಿಬಾನ್‌ಗಳದ್ದಾ.? ಎಂದು ಪ್ರಶ್ನಿಸಿದ್ದಾರೆ. 
 

Suvarna News  | Updated: Sep 28, 2021, 5:23 PM IST

ಬೆಂಗಳೂರು (ಸೆ. 28): ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಮುಖ್ಯಮಂತ್ರಿಗಳ ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ.? ತಾಲಿಬಾನ್‌ಗಳದ್ದಾ.? ಎಂದು ಪ್ರಶ್ನಿಸಿದ್ದಾರೆ. 

ಮಂಗಳೂರಿನಲ್ಲಿ ಹೆಚ್ಚಾಗ್ತಿದೆ ನೈತಿಕ ಪೊಲೀಸ್‌ಗಿರಿ, ವಿದ್ಯಾರ್ಥಿ ವಾಹನಗಳ ಮೇಲೆ ದಾಳಿ

ಮಂಗಳೂರು ಕಾಲೇಜೊಂದರ ಯುವಕ ಯುವತಿಯರು ನಿನ್ನೆ ಸಂಜೆ ಮಲ್ಪೆ ಬೀಚ್‌ಗೆ ಹೋಗಿ ವಾಪಸ್ ಬರುವಾಗ ಸುರತ್ಕಲ್ ಗೇಟ್‌ ಬಳಿ ಭಜರಂಗದಳ ಕಾರ್ಯಕರ್ತರು ತಡೆದಿದ್ಧಾರೆ. ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನೈತಿಕ ಪೊಲೀಸ್‌ಗಿರಿ ಆರೋಪದ ಮೇರೆ 5 ಮಂದಿ ಭಜರಂಗದಳ ಕಾರ್ಯಕರ್ತರನ್ನು ಬಂಧಿಸಲಾಗಿದೆ. 

Read More...