Asianet Suvarna News Asianet Suvarna News

ಹಾಲಾಶ್ರೀ ಮೇಲೆ ಮತ್ತೊಂದು ಕೋಟಿ ಆರೋಪ..! ಮೂರುವರೆ ಕೋಟಿಯಲ್ಲಿ ಏನೇನು ಮಾಡಿದ್ಲು ಚೈತ್ರಾ..?

ಒಂದುವರೆ ಕೋಟಿಯಲ್ಲಿ ಒಂದು ಕೋಟಿ ಜಪ್ತಿ..!
ಹಾಲಾಶ್ರೀ ಡೀಲ್ ದುಡ್ಡಿನ ಲೆಕ್ಕ ರಿವೀಲ್ ಆಯ್ತಾ ?
ಅ. 6ರವರೆಗೆ ಚೈತ್ರಾಗೆ ನ್ಯಾಯಾಂಗ ಬಂಧನ..!

ಬರೊಬ್ಬರಿ 10 ದಿನ ಆಯ್ತು.. ಹಿಂದೂ ನಾಯಕಿ ಅನ್ನಿಸಿಕೊಂಡಿದ್ದ ಚೈತ್ರಾ ಸಿಸಿಬಿ ಬಲೆಗೆ ಬಿದ್ದು. ಈಕೆಯೇ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದ ಒಂದು ಸೂಪರ್ ಡೂಪರ್ ಸಿನಿಮಾ ಜನರನ್ನ ಇನ್ನಿಲ್ಲದಂತೆ ರಂಜಿಸಿತ್ತು. ಉದ್ಯಮಿ ಗೋವಿಂದ ಪೂಜಾರಿಗೆ(Govinda Babu Poojary) ಮಕ್ಮಲ್ ಟೋಪಿ ಹಾಕಿ 5 ಕೋಟಿ ಹೊಡೆದಿದ್ದ ಚೈತ್ರಾ ಆ್ಯಂಡ್ ಗ್ಯಾಂಗ್ ಇವತ್ತು ಸಿಸಿಬಿ ಮುಂದೆ 5 ಕೋಟಿಯ ಲೆಕ್ಕವನ್ನ ಕೊಡ್ತಿದೆ. ಇನ್ನೂ ಪೊಲೀಸರೂ ಕೂಡ 5 ಕೋಟಿಯಲ್ಲಿ ಬಹುತೇಕ ಎಲ್ಲಾ ಹಣವನ್ನ ವಶಪಡಿಸಿಕೊಂಡಿದ್ದಾರೆ. ಸರಿಯಾಗಿ 10 ದಿನಗಳ ಹಿಂದೆ ಅಂದ್ರೆ ಇದೇ ಸೆಪ್ಟಂಬರ್ 12ರ ರಾತ್ರಿ ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಲಾಟ್ನಲ್ಲಿ ಚೈತ್ರಾ ಕುಂದಾಪುರ ಅರೆಸ್ಟ್ ಆಗಿದ್ಲು. ಆವತ್ತು ಹಿಂದೂ ನಾಯಕಿ ಅರೆಸ್ಟ್ ಆದ ಕಾರಣ ಕೇಳಿ ಇಡೀ ಕರ್ನಾಟಕ ಫುಲ್ ಶಾಕ್ ಆಗಿತ್ತು. ಚೈತ್ರಾ ಕುಂದಾಪುರ(Chaitra Kundapur) ಕಥೆ. ಚಿತ್ರ ಕಥೆ, ಮತ್ತು ನಿದೇಶನದಲ್ಲಿ ಮಾಡಿದ್ದ ಸಿನಿಮಾವನ್ನ ನೋಡಿ ಎಲ್ಲರೂ ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ರು. ಉದ್ಯಮಿ, ಬೈಂದೂರು ಮೂಲದ ಗೋವಿಂದ್ ಪಾಜಾರಿ ಅನ್ನೋರಿಗೆ ಟಿಕೆಟ್ ಕೊಡಿಸ್ತೀನಿ ಅಂತ ನಂಬಿಸಿ ಕಬಾಬ್ ಮಾರುವವನಿಗೆ ಬಿಜೆಪಿ (BJP) ನಾಯಕನ ವೇಷ ಹಾಕಿ ನಂತರ ಇಲ್ಲದಿರೋ ನಾಯಕರನ್ನ ಹುಟುಹಾಕಿ ಇದೇ ಚೈತ್ರಾ ಆ್ಯಂಡ್ ಗ್ಯಾಂಗ್ ಬರೊಬ್ಬರಿ 5 ಕೋಟಿ ಹಣವನ್ನ ಗೋವಿಂದ್ ಪೂಜಾರಿಯವರಿಂದ ಕಿತ್ತುಕೊಂಡಿತ್ತು.

ಇದನ್ನೂ ವೀಕ್ಷಿಸಿ:  ಬಿಎಸ್‌ವೈ ಭೇಟಿ ಮಾಡಿದ ನಿಖಿಲ್‌: ಮಂಡ್ಯದಿಂದಲೇ ಮತ್ತೆ ಸ್ಪರ್ಧಿಸ್ತಾರಾ ಹೆಚ್‌ಡಿಕೆ ಪುತ್ರ ?

Video Top Stories