Asianet Suvarna News Asianet Suvarna News

ಬಿಎಸ್‌ವೈ ಭೇಟಿ ಮಾಡಿದ ನಿಖಿಲ್‌: ಮಂಡ್ಯದಿಂದಲೇ ಮತ್ತೆ ಸ್ಪರ್ಧಿಸ್ತಾರಾ ಹೆಚ್‌ಡಿಕೆ ಪುತ್ರ ?

ಲೋಕಸಭೆ ಗೆಲ್ಲೋಕೆ ಬಿಜೆಪಿ, ಜೆಡಿಎಸ್ ದೋಸ್ತಿ
ಬಿಎಸ್‌ವೈ ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ
ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿ

ಬೆಂಗಳೂರು: ಸೌಹಾರ್ದಯುತ ಭೇಟಿಗಾಗಿ ನಿಖಿಲ್‌ ಕುಮಾರಸ್ವಾಮಿ(Nikhil Gowda) ನನ್ನ ಮನೆಗೆ ಬಂದಿದ್ದರು. ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿಯವರು(HD Kumaraswamy) ನಿವಾಸಕ್ಕೆ ಬರೋದಕ್ಕೆ ಹೇಳಿದ್ದಾರೆ. ಹೇಗಿದ್ದರು ನಮ್ಮದು ಅವರದ್ದು ಮೈತ್ರಿ ಆಗಿದೆ. ಒಮ್ಮೆ ಸದ್ಯದ್ರಲ್ಲೇ ಅವರ ಭೇಟಿ ಮಾಡಿ ಬರ್ತೇನೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ದೆಹೆಲಿಗೆ ಹೋಗ್ತಿರಾ ಎನ್ನುವ ಪ್ರಶ್ನೆಗೆ ಇಲ್ಲ ಎಂದು ಯಡಿಯೂರಪ್ಪ(BS Yediyurappa) ತಲೆದೂಗಿದರು. ಲೋಕಸಭೆ ಗೆಲ್ಲೋಕೆ ಬಿಜೆಪಿ(BJP), ಜೆಡಿಎಸ್(JDS) ದೋಸ್ತಿ ಮಾಡಿಕೊಂಡ ಹಿನ್ನೆಲೆ ಬಿಎಸ್‌ವೈರನ್ನು ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾದಲ್ಲಿ ಭೇಟಿ ಮಾಡಿದ್ದು, ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ನಿಖಿಲ್ ಕುಮಾರಸ್ವಾಮಿಗೆ ಶಾಸಕ ಮುನಿರತ್ನ ಸಾಥ್‌ ಕೊಟ್ಟಿದ್ದಾರೆ. ದೆಹಲಿಯಲ್ಲಿ ಶಾ, ನಡ್ಡಾ ಜೊತೆ ಎಚ್‌ಡಿಕೆ ಚರ್ಚಿಸಿದ್ದರು. 

ಇದನ್ನೂ ವೀಕ್ಷಿಸಿ:  ಬಿಲ್ಲವ ಹಾಸ್ಟೆಲ್ ಲೋಕಾರ್ಪಣೆ: ಹರಿಪ್ರಸಾದ್ ಜೊತೆ ಕಾಣಿಸಿಕೊಳ್ಳಬಾರದೆಂದು ಗೈರಾದ್ರ ಸಿಎಂ..?