Asianet Suvarna News Asianet Suvarna News

ಪೊಲೀಸರು ದರ್ಶನ್ ಅರೆಸ್ಟ್ ಮಾಡಿದ್ದೇ ರಣ ರೋಚಕ..! ಜೂ. 11 ಮಿಸ್ ಆಗಿದ್ರೆ ನಟ ಕೇಸ್‌ನಿಂದ ಎಸ್ಕೇಪ್ ಆಗ್ತಿದ್ರಾ?

ಕೊಲೆ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್‌ನನ್ನು ಬಂಧನ ಮಾಡಿರೋದೆ ಒಂದು ರಣ ರೋಚಕವಾಗಿದೆ. ಜೂನ್ 11ರಂದು ಮಿಸ್ ಆಗಿದ್ರೆ ದರ್ಶನ್ ಕೇಸ್‌ನಿಂದ ಎಸ್ಕೇಪ್ ಆಗ್ತಿದ್ರಂತೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ನಟ ದರ್ಶನ್‌ ಅರೆಸ್ಟ್‌ ಮಾಡಿದ್ದೇ ಒಂದು ರಣ ರೋಚಕವಾಗಿದೆ. ಜೂನ್ 11 ಮಿಸ್ ಆಗಿದ್ರೆ ದರ್ಶನ್ ಕೇಸ್‌ನಿಂದ ಎಸ್ಕೇಪ್ ಆಗ್ತಿದ್ರಂತೆ. ಬೆಳಗ್ಗೆ 8 ಗಂಟೆ ಮೀರಿದ್ರೆ ದರ್ಶನ್(Darshan) ಹಿಡಿಯೋದು ಅಸಾಧ್ಯವಾಗ್ತಿತ್ತಂತೆ. ಪೊಲೀಸರ(Police) ಬೆನ್ನು ಬಿದ್ದಿದ್ದಾರೆಂಬ ಸಣ್ಣ ಸುಳಿವು ಸಿಕ್ಕಿದ್ದರೆ ಎಸ್ಕೇಪ್ ಆಗ್ತಿದ್ರದಂತೆ. ದರ್ಶನ್‌ಗೆ ಪೊಲೀಸರ ವಾಸನೆ ಬಂದಿದ್ರೆ ತಲೆ ಮರೆಸಿಕೊಳ್ಳುವ ಸಾಧ್ಯತೆ ಇತ್ತು. ಆಗ ದರ್ಶನ್ ಹುಡುಕೋದು ಅಷ್ಟು ಸುಲಭವಾಗ್ತಿರಲಿಲ್ಲ. ದರ್ಶನ್ ಭೂಗತವಾಗಿಬಿಟ್ಟಿದ್ರೆ ಕೇಸ್ ಹಳ್ಳ ಹಿಡಿದು ಹೋಗ್ತಿತ್ತು. ಬೆಳಗ್ಗೆ 8 ಗಂಟೆ ಒಳಗೆ ದರ್ಶನ್ ನನ್ನು ಮೈಸೂರಿನಲ್ಲಿ(Mysore) ಅರೆಸ್ಟ್ ಮಾಡಲಾಗಿದೆ. ಮೈಸೂರು, ಮಂಡ್ಯ ಬಾರ್ಡರ್ ದಾಟುವವರೆಗೂ ಫುಲ್ ಅಲರ್ಟ್‌ನಲ್ಲಿ ಪೊಲೀಸರು ಇದ್ದರು. ವಿಚಾರ ಲೀಕ್ ಆದ್ರೆ ಅಭಿಮಾನಿಗಳು ಮುತ್ತಿಗೆ ಹಾಕುವ ಆತಂಕದಲ್ಲಿ ಪೊಲೀಸರು ಇದ್ದರು. ಪ್ರತಿ ಅರ್ಧ ಗಂಟೆಗೆ ಹಿರಿಯ ಅಧಿಕಾರಿಗಳಿಂದ ಫೋನ್ ಕಾಲ್. ಬಾರ್ಡರ್ ದಾಟಿದ್ರಾ, ಏನೂ ಪ್ರಾಬ್ಲಂ ಆಗ್ತಿಲ್ಲ ತಾನೆ ಅಂತಾ ಕಾಲ್ ಮೇಲೆ ಕಾಲ್ ಮಾಡಲಾಗ್ತಿತಂತೆ. ಹೆದ್ದಾರಿಯಲ್ಲೂ ದರ್ಶನ್ ಅರೆಸ್ಟ್ ಬಗ್ಗೆ ಸುಳಿವು ಸಿಗದಂತೆ ಕರೆತಂದಿದ್ರು. ಪೊಲೀಸರ ಜೀಪ್‌ನಲ್ಲಿರೋದು ಗೊತ್ತಾಗದ ಹಾಗೆ ಪೊಲೀಸರು ಕರೆತಂದಿದ್ದರು.

ಇದನ್ನೂ ವೀಕ್ಷಿಸಿ:  ದರ್ಶನ್ ಅಭಿಮಾನಿಗಳ ಸಂಘದಲ್ಲಿ ಪುಡಿ ರೌಡಿಗಳು..? ರೌಡಿಗಳ ಗ್ಯಾಂಗ್ ಕಂಡು ಪೊಲೀಸರೇ ಶಾಕ್..!

Video Top Stories