ದರ್ಶನ್ ಅಭಿಮಾನಿಗಳ ಸಂಘದಲ್ಲಿ ಪುಡಿ ರೌಡಿಗಳು..? ರೌಡಿಗಳ ಗ್ಯಾಂಗ್ ಕಂಡು ಪೊಲೀಸರೇ ಶಾಕ್..!

ದರ್ಶನ್ ಫ್ಯಾನ್ಸ್‌ನ ಪೂರ್ವಾಪರವನ್ನು ಪೊಲೀಸರು ಕೆದಕುತ್ತಿದ್ದು, ಬೆಂಗಳೂರು ಸೇರಿ ಪ್ರತಿ ಜಿಲ್ಲೆಯಲ್ಲೂ ರೌಡಿ ಗ್ಯಾಂಗ್ ಆಕ್ಟೀವ್ ಆಗಿದೆ ಎಂದು ತಿಳಿದುಬಂದಿದೆ.

Share this Video
  • FB
  • Linkdin
  • Whatsapp

ದರ್ಶನ್‌ ಅಭಿಮಾನಿಗಳ ಸಂಘದಲ್ಲಿ(Darshan fans association) ಪುಡಿ ರೌಡಿಗಳು ಇದ್ದಾರೆ ಎಂಬ ಮಾಹಿತಿ ದೊರೆತಿದ್ದು, ಇದನ್ನು ಕಂಡು ಪೊಲೀಸರೇ ಶಾಕ್‌ ಆಗಿದ್ದಾರೆ. ಪ್ರತೀ ಜಿಲ್ಲೆಯಲ್ಲೂ ರೌಡಿಗಳ ಗ್ಯಾಂಗ್‌ನನ್ನು(Rowdy gang) ದರ್ಶನ್ ಹೊಂದಿದ್ದಾರೆ. ದರ್ಶನ್ (Darshan) ಫ್ಯಾನ್ಸ್‌ನ ಪೂರ್ವಾಪರವನ್ನು ಪೊಲೀಸರು ಕೆದಕುತ್ತಿದ್ದಾರೆ. ಬೆಂಗಳೂರು(Bengaluru) ಸೇರಿ ಪ್ರತಿ ಜಿಲ್ಲೆಯಲ್ಲೂ ದರ್ಶನ್‌ನ ರೌಡಿ ಗ್ಯಾಂಗ್ ಆಕ್ಟೀವ್ ಆಗಿದೆ. ಚಿತ್ರದುರ್ಗದ (Chitradurga) ದರ್ಶನ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ರಘು, ಈತನೇ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆತಂದಿದ್ದಾನೆ ಎಂದು ತಿಳಿದುಬಂದಿದೆ. ಯಾದಗಿರಿಯಲ್ಲಿ ವ್ಯಾಪಾರಿಗೆ ದರ್ಶನ್ ಫ್ಯಾನ್ಸ್‌ನಿಂದ ಬೆದರಿಕೆ ಒಡ್ಡಲಾಗಿದ್ದು, ದರ್ಶನ್ ವಿರುದ್ಧ ಮಾತನಾಡಿದರೆ ಸುಟ್ಟು ಹಾಕ್ತೀನಿ ಎಂದು ದರ್ಶನ್ ಫ್ಯಾನ್ಸ್ ಹೇಳಿದ್ದಾರಂತೆ. ಹೀಗಾಗಿ ಫ್ಯಾನ್ಸ್ ಅಸೋಸಿಯೇಷನ್ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾವನ್ನು ಪೊಲೀಸರು ಜಾಲಾಡುತ್ತಿದ್ದಾರೆ. ದರ್ಶನ್ ಪರವಾಗಿ ಧಮ್ಕಿ ಹಾಕುವ ಪೋಸ್ಟರ್‌ಗಳ ಮೇಲೆ ಕಣ್ಣು ಸಹ ಹಾಕಿದ್ದಾರೆ.

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲೆ ಪ್ರಕರಣ..ಇಲ್ಲಿತನಕ ಪೊಲೀಸರು ಸಂಗ್ರಹಿಸಿದ ಸಾಕ್ಷ್ಯಗಳೇಷ್ಟು..?

Related Video