ಪೋಷಕರ ಮೇಲಿನ ಸೇಡು ಶಂಕೆ.. ಮಕ್ಕಳಿಗೆ ವಿಷ ಉಣಿಸಲು ಯತ್ನಿಸಿದ್ರಾ..?

ಜಾಗತೀಕರಣ ಹೆಚ್ಚಾಗುತ್ತಿದ್ದಂತೆ ಮನುಷ್ಯ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆ. ತನ್ನ ಸ್ವಾರ್ಥಕ್ಕೆ ಎಂತಹ ಕೀಳು ಮಟ್ಟಕ್ಕೂ ಇಳಿಯಲು ಹಿಂಜರಿಯುತ್ತಿಲ್ಲ. ಪೋಷಕರ ಮೇಲಿನ ಕೋಪಕ್ಕೆ ಪುಟ್ಟ ಮಕ್ಕಳನ್ನು ವಿಷ ಉಣಿಸಿ ಕೊಲೆ ಮಾಡುವ ಪೈಶಾಚಿಕ  ಕೃತ್ಯಕ್ಕೆ ಮುಂದಾಗಿದ್ದಾರೆ. 
 

Share this Video
  • FB
  • Linkdin
  • Whatsapp

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯರು. ಮತ್ತೊಂದಡೆ ಕುಟುಂಬದ ಆಕ್ರಂದನ. ಇಡೀ ಊರಿಗೆ ಊರೇ ಭಯಭೀತರಾಗಿರೋ ಪರಿಸ್ಥಿತಿ. ಇದೆಲ್ಲ ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ (Bengaluru rural) ಜಿಲ್ಲೆ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ. ಪೋಷಕರ ಮೇಲಿನ ಕೋಪಕ್ಕೆ ತಮ್ಮ ಮಕ್ಕಳಿಗೆ ವಿಷ ಉಣಿಸಿ ಕೊಲೆ(Murder) ಮಾಡಲು ಯತ್ನಿಸಿದ್ದಾರಂತೆ. ಅಣ್ಣೇಶ್ವರ ಗ್ರಾಮ ಪಂಚಾಯಿತಿಯ ಸದಸ್ಯೆ ಶಿಲ್ಪಾ ಅಶೋಕ್ ಮಗಳು ಅನುಷಾಗೆ ಕಳೆದ ಮಂಗಳವಾರ ಹಾಗೂ ಗುರುವಾರ ಇದೇ ಕುಟುಂಬಕ್ಕೆ ಸೇರಿದ ಪಲ್ಲವಿಗೆ ಇಬ್ಬರು ಯುವಕರು ಬಂದು ವಿಷ(poison) ಕುಡಿಯುವಂತೆ ಬೆದರಿಸಿದ್ದಾರೆ. ಕುಡಿಯಲು ನಿರಾಕರಿಸಿದಾಗ ಸಾಯಿಸೋದಾಗಿ ಬೆದರಿಕೆ ಹಾಕಿ ಕೊನೆಗೂ ವಿಷ ಕುಡಿಸಿದ್ದಾರೆ. ಕಳೆದ ಜುಲೈ 27ರಂದು ಅಣ್ಣೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಶಿಲ್ಪಾ ಪತಿ ಅಶೋಕ್ ಎದುರಾಳಿ ತಂಡದ ಮೂವರು ಮೇಂಬರ್‌ಗಳನ್ನು ಕರೆತಂದು ಅಧ್ಯಕ್ಷ-ಉಪಾಧ್ಯಕ್ಷರ ಪರ ಮತ ಹಾಕಿಸಿದ್ದಾರೆ. ಇದೇ ದ್ವೇಷದಿಂದ ಈ ಕೃತ್ಯ ಎಸಗಿದ್ದಾರೆ ಅನ್ನೋದು ಕುಟುಂಬಸ್ಥರು ಆರೋಪ.

ಇದನ್ನೂ ವೀಕ್ಷಿಸಿ:  Today Horoscope: ಮಿಥುನ ರಾಶಿಯವರಿಗೆ ಸಹೋದರರಿಂದ ತೊಡಕು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

Related Video