ಕವರ್‌ ಸ್ಟೋರಿ ಬಿಗ್‌ ಇಂಪ್ಯಾಕ್ಟ್‌: ಬಬಲಾದಿಯ ಅಕ್ರಮ ಕಳ್ಳಬಟ್ಟಿ ಅಡ್ಡೆಗಳ ಮೇಲೆ ಅಧಿಕಾರಿಗಳ ರೇಡ್‌

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕವರ್‌ ಸ್ಟೋರಿ ವರದಿಯು ಫಲ ನೀಡಿದ್ದು, ಅಕ್ರಮ ಕಳ್ಳಬಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ವಿಜಯಪುರ: ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕವರ್‌ ಸ್ಟೋರಿಯ ವರದಿಯ ಬಿಗ್‌ ಇಂಪ್ಯಾಕ್ಟ್‌ ಆಗಿದ್ದು, ದೇವರ ಹೆಸರಿನಲ್ಲಿ ಕಳ್ಳಬಟ್ಟಿ ದಂಧೆ ನಡೆಯುತ್ತಿತ್ತು. ಇದೀಗ ಬಬಲಾದಿಯ ಕಳ್ಳಬಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಲ್ಕು ಇಲಾಖೆಯ ಅಧಿಕಾರಿಗಳು ಏಕಕಾಲಕ್ಕೆ ರೇಡ್‌ ಮಾಡಿದ್ದಾರೆ. ಈ ಬಗ್ಗೆ ವರದಿ ಬಿತ್ತರವಾಗುತ್ತಿದ್ದಂತೆ ಊರು ಬಿಟ್ಟಿದ್ದ ಖದೀಮರಿಗಾಗಿ ಶೋಧ ನಡೆಸಲಾಗುತ್ತಿದೆ. ಜೊತೆಗೆ ಅಕ್ರಮ ಸರಾಯಿ ಮಾರಾಟ ಮಾಡದಂತೆ ಜಾಗೃತಿಯನ್ನು ಸಹ ಮೂಡಿಸಲಾಗಿದೆ. ಇಲ್ಲಿ ದೇವರ ಹೆಸರಿನಲ್ಲಿ ಗಲ್ಲಿ ಗಲ್ಲಿಯಲ್ಲೂ ಕಳ್ಳಬಟ್ಟಿಯನ್ನು ಸರಬರಾಜು ಮಾಡಲಾಗುತ್ತಿತ್ತು. ಅಲ್ಲದೇ ಮಕ್ಕಳ ಮೂಲಕ ಮಾರಾಟ ಮಾಡಿಸಲಾಗುತ್ತಿತ್ತು. ಕವರ್‌ ಸ್ಟೋರಿಗೆ ಬಬಲಾದಿ ಮಠ ಮತ್ತು ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಶಕ್ತಿ ಯೋಜನೆ ಎಫೆಕ್ಟ್‌, ಆಟೋಗಳು ಖಾಲಿ..ಖಾಲಿ: ಮಾರಾಟಕ್ಕೆ ಮುಂದಾದ ಆಟೋ ಮಾಲೀಕರು

Related Video