Asianet Suvarna News Asianet Suvarna News
breaking news image

ಕೊಲೆ ನಡೆದ ದಿನ ದರ್ಶನ್ ಹಾಕಿದ್ದ ಶೂ ಸೀಜ್ : ವಿಜಯಲಕ್ಷ್ಮಿ ಮನೆಯಲ್ಲಿವೆ ಎಂದಿದ್ದ ಕಾಸ್ಟ್ಯೂಮ್ ಡಿಸೈನರ್!

ಅಪಾರ್ಟ್‌ಮೆಂಟ್‌ ಸೆಕ್ಯೂರಿಟಿ ರೂಂಗೆ ದರ್ಶನ್ ಶೂಗಳನ್ನ ತಂದುಕೊಟ್ಟ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ವಾಸವಿದ್ದ ಅಪಾರ್ಟ್‌ಮೆಂಟ್ ಬಳಿ ದರ್ಶನ್ ಕರೆದೊಯ್ದು ಶೂ ವಶಕ್ಕೆ
ನಟ ದರ್ಶನ್ ಸಮ್ಮುಖದಲ್ಲಿ ಆತ ಬಳಸಿದ್ದ ಲೂಫರ್ಸ್ ಶೂ ವಶಕ್ಕೆ ಪಡೆದ ಪೊಲೀಸರು

ವಿಜಯಲಕ್ಷ್ಮಿ ಮನೆಯಿಂದ ದರ್ಶನ್ (Darshan) ಶೂನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆ (Murder)ನಡೆದ ದಿನ ದರ್ಶನ್ ಹಾಕಿದ್ದ ಶೂ ವಿಜಯಲಕ್ಷ್ಮಿ(Vijayakshmi) ಮನೆಯಲ್ಲಿ ಸೀಜ್ ಆಗಿದೆ. ವಿಜಯಕ್ಷ್ಮಿಯ ಹೊಸಕೆರೆ ಹಳ್ಳಿ ಫ್ಲಾಟ್‌ನಿಂದ ದರ್ಶನ್ ಶೂ ವಶಕ್ಕೆ ಪಡೆಯಲಾಗಿದೆ. ದರ್ಶನ್ ಮನೆ ಟೆರಸ್‌ನಲ್ಲಿ ಆತ ಹಾಕಿದ್ದ ಬಟ್ಟೆಯನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಕೊಲೆ ನಡೆದ ದಿನ ಹಾಕಿದ್ದ ಶೂ ದರ್ಶನ್ ಮನೆಯಲ್ಲಿ ಸಿಕ್ಕಿರಲಿಲ್ಲ. ದರ್ಶನ್ ಶೂಗಳು(Darshan Shoe) ವಿಜಯಲಕ್ಷ್ಮಿ ಮನೆಯಲ್ಲಿವೆ ಎಂದು ಕಾಸ್ಟ್ಯೂಮ್ ಡಿಸೈನರ್ ಹೇಳಿದ್ದರು. ಕಾಸ್ಟ್ಯೂಮ್ ಡಿಸೈನರ್ ರಾಜು ಹೇಳಿಕೆ ಆಧರಿಸಿ ವಿಜಯಲಕ್ಷ್ಮಿಗೆ ಪೊಲೀಸರು ಕರೆ ಮಾಡಿದ್ದು, ದರ್ಶನ್ ಶೂಗಳು ತಮ್ಮ ಮನೆಯಲ್ಲಿರೋದನ್ನ ವಿಜಯಲಕ್ಷ್ಮಿ ಒಪ್ಪಿಕೊಂಡಿದ್ದಾರೆ. ಮನೆಯಲ್ಲಿ ಅಪ್ರಾಪ್ತ ಬಾಲಕನಿದ್ದಾನೆ ಎಂದು ಗೇಟ್ ಬಳಿ ವಿಜಯಲಕ್ಷ್ಮಿ ತಂದುಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ನಟ ದರ್ಶನ್‌ರ ಇಂದಿನ ಸ್ಥಿತಿಗೆ ಅವರ ಮುಂಗೋಪವೇ ಕಾರಣ: ನಿರ್ಮಾಪಕ ಮಹದೇವ್

Video Top Stories