ರಾಜ್ಯದ ಆ ಜಿಲ್ಲೆಗೂ ಕಾಲಿಟ್ಟಿದ್ದಾರಾ ಉಗ್ರರು ? ಐಸಿಸ್ ನಂಟು ಇರುವ ಶಂಕೆ !
ಯಾದಗಿರಿಯ ಶಹಾಪುರ ನಗರದ ನಿವಾಸಿ ಖಾಲೀದ್ ಅಹ್ಮದ್ ನಿವಾಸದ ಮೇಲೆ ಎನ್‌ಐಎ ದಾಳಿ ಮಾಡಿದೆ. ಸೆ. 20 ರಂದು ಮತ್ತೆ ರಾಂಚಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಯಾದಗಿರಿ: ಜಾರ್ಖಂಡ್‌ನ ರಾಂಚಿಯಲ್ಲಿ ಬಂಧನಕ್ಕೊಳಗಾದ ಆರೋಪಿ ಫೈಯಾಜ್ ಜೊತೆ ಸಂಪರ್ಕ ಹೊಂದಿರುವ ಯಾದಗಿರಿ (Yadagiri) ಜಿಲ್ಲೆಯ ಶಹಾಪುರ ನಗರದ ನಿವಾಸಿ ಖಾಲೀದ್ ಅಹ್ಮದ್(Khalid Ahmed) ನಿವಾಸದ ಮೇಲೆ ಎನ್‌ಐಎ ದಾಳಿ ಮಾಡಿದೆ. ನಸುಕಿನ ಜಾವ ಶಹಾಪುರದ ಖಾಲೀದ್ ಅಹ್ಮದ್ ನಿವಾಸದ ಮೇಲೆ ದಾಳಿ ಮಾಡಿ, ಎನ್ಐಎ(NIA) ತಂಡ ವಿಚಾರಣೆ ನಡೆಸಿದೆ. ರಾಂಚಿ ಮೂಲದ ಎನ್ಐಎ ತಂಡ ಇಲ್ಲಿಗೆ ಬಂದಿದೆ. ಖಾಲೀದ್ ಅಹ್ಮದ್ ನ ತೀವ್ರ ವಿಚಾರಣೆ ನಡೆಸಿ, ಇದೇ 20 ರಂದು ಮತ್ತೆ ರಾಂಚಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಎನ್ಐಎ ತಂಡ ಖಾಲೀದ್ ಅಹ್ಮದ್‌ನ ಎರಡು ಮೊಬೈಲ್ ಜಪ್ತಿ ಮಾಡಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಜೇರಾಕ್ಸ್ ಪ್ರತಿ ದಾಖಲೆಗಳನ್ನು ತೆಗೆದುಕೊಂಡು ಹೋಗಿದೆ. ಸದ್ಯ ಎನ್ಐಎ ತಂಡದಿಂದ ಖಾಲಿದ್ ವಿಚಾರಣೆ ಮುಕ್ತಾಯವಾಗಿದೆ.
ಇದನ್ನೂ ವೀಕ್ಷಿಸಿ: ಚೈತ್ರಾ ಕುಂದಾಪುರ ಆ ಮಾತು ಹೇಳಿದ್ಯಾಕೆ? ಆ ಯೋಜನೆಗೂ.. ಈ ಕೇಸ್‌ಗೂ ಏನು ಲಿಂಕ್?