ಚೈತ್ರಾ ಕುಂದಾಪುರ ಆ ಮಾತು ಹೇಳಿದ್ಯಾಕೆ? ಆ ಯೋಜನೆಗೂ.. ಈ ಕೇಸ್‌ಗೂ ಏನು ಲಿಂಕ್?

ಸ್ವಾಮೀಜಿ ಅರೆಸ್ಟ್ ಆಗ್ಲಿ ಎಲ್ಲಾ ಸತ್ಯ ಹೊರಗಡೆ ಬರುತ್ತೆ
ಇಂದಿರಾ ಕ್ಯಾಂಟೀನ್ ಬಿಲ್ ಗಾಗಿ ಈ ರೀತಿ ಷಡ್ಯಂತ್ರ
ಕಾರಿನಿಂದ ಇಳಿಯುವಾಗ ಚೈತ್ರ ಕುಂದಾಪುರ ಹೇಳಿಕೆ

Share this Video
  • FB
  • Linkdin
  • Whatsapp

ಚೈತ್ರಾ ಕುಂದಾಪುರ 5 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಾಹಿತಿ ಹೊರಬಂದಿದೆ. ಸ್ವಾಮೀಜಿ ಬಂಧನ ಬಳಿಕ ಸತ್ಯ ಹೊರ ಬರುತ್ತದೆ. ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ ಎಂದು ಸಿಸಿಬಿ ಕಚೇರಿ(CCB Office) ಬಳಿ ಚೈತ್ರಾ ಕುಂದಾಪುರ(
Chaitra Kundapur) ಹೇಳಿದ್ದಾಳೆ. ಇಂದಿರಾ ಕ್ಯಾಂಟೀನ್ ಬಿಲ್‌ಗಾಗಿ (Indira canteen bill) ಷಡ್ಯಂತ್ರ ಮಾಡಲಾಗಿದೆ. ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನ ಪೊಲೀಸರು ಸಿಸಿಬಿ ಕಚೇರಿಗೆ ಕರೆತಂದಿದ್ದು, ಕಾರಿನಿಂದ ಕೆಳಗೆ ಇಳಿಯುವಾಗ ಚೈತ್ರಾ ಈ ರೀತಿ ಹೇಳಿದ್ದಾರೆ. ಚೈತ್ರಾ ಕುಂದಾಪುರ 5 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಇಂದಿನಿಂದ ಆರಂಭವಾಗಲಿದೆ. ಸಿಸಿಬಿ ಎಸಿಪಿ ರೀನಾ ಸುವರ್ಣರಿಂದ ಚೈತ್ರಾ ವಿಚಾರಣೆ ಆಗಲಿದೆ.10 ದಿನ ಕಸ್ಟಡಿಗೆ ಸಿಸಿಬಿ ಪೊಲೀಸರು ಪಡೆದಿದ್ದಾರೆ. ಅಲ್ಲದೇ ಹಣ ಪಡೆದ ಸ್ಥಳಗಳಲ್ಲಿ ಸಿಸಿಬಿ ಮಹಜರು ಮಾಡಲಿದೆ.

ಇದನ್ನೂ ವೀಕ್ಷಿಸಿ: ಜೂ. ಎನ್‌ಟಿಆರ್ ಕಾರ್ ನಂಬರ್‌ಗಳೆಲ್ಲ 9999 ! 9 ರ ಗುಟ್ಟು ಏನಿದು ಮಿಸ್ಟರಿ ?

Related Video