Asianet Suvarna News Asianet Suvarna News

8 ತಿಂಗಳ ಹಿಂದೆ ನಾಪತ್ತೆ..ಈಗ ಮರ್ಡರ್..! ಜಮೀನಿನಲ್ಲಿ ಅವನ ಎಲುಬುಗಳು ಪತ್ತೆ..!

ಮೃತದೇಹದ ಭಾಗಗಳನ್ನ ಒಂದೊಂದು ದಿಕ್ಕಿನಲ್ಲಿ ಹೂತಿಟ್ಟಿದ್ರು..!
ಅವನ ಹೆಣ ಹಾಕಿ ಹುಡುಗಿ ಜೊತೆ ಪರಾರಿ ಅಂತ ಸುದ್ದಿ ಹರಡಿದ್ರು..!
ಕೊಲೆಯಾದ ವ್ಯಕ್ತಿ ಎಲುಬುಗಳು  ಗ್ರಾಮದ ಜಮೀನೊಂದರಲ್ಲಿ ಪತ್ತೆ

ಅವನು ಕೂಲಿ ಕಾರ್ಮಿಕ. ಮದುವೆಯಾಗಿ ಒಂದು ವರ್ಷವಾಗಿತ್ತಷ್ಟೇ. ತಾನಾಯ್ತು ತನ್ನ ಸಂಸಾರವಾಯ್ತು ಅಂತ ಇದ್ದವನು. ಆದ್ರೆ ಆವತ್ತು ಆತ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟ. ಎಲ್ಲಿ ಹುಡುಕಿದ್ರೂ ಆತ ಸಿಗೋದೇ ಇಲ್ಲ. ಇದೇ ಟೈಂನಲ್ಲಿ ಆತ ಯುವತಿಯೊಂದಿಗೆ ಓಡಿಹೋಗಿದ್ದಾನೆ ಅನ್ನೋ ಗುಸುಗುಸು ಊರಲ್ಲೆಲ್ಲಾ ಹರಡಿಬಿಟ್ಟಿತ್ತು. ಅವನ ಕುಟುಂಬ ಪೊಲೀಸ್ ಕಂಪ್ಲೆಂಟ್ ಕೊಡ್ತು ಆದ್ರೂ ನೋ ಯೂಸ್. ಆದ್ರೆ ಆತ ನಾಪತ್ತೆಯಾಗಿ ಬರೊಬ್ಬರಿ 8 ತಿಂಗಳ ನಂತರ ಅವನ(youth) ಎಲುಬುಗಳು ಅವನದ್ದೇ ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿತ್ತು. ಅಲ್ಲಿವರೆಗೂ ಸೈಲೆಂಟಾಗಿದ್ದ ಪೊಲೀಸರು(Police) ಎಚ್ಚೆತ್ತಿದ್ರು ಒಂದು ಡೆಡ್ಲಿ ಮರ್ಡರ್(Murder) ಕೇಸ್‌ನ ಪತ್ತೆ ಹಚ್ಚಿದ್ರು. ಹಂತಕರೆಲ್ಲ ಸೇರಿ ದೃಶ್ಯಂ ಸಿನಿಮಾ ರೀತಿಯಲ್ಲೆ ಊರಲ್ಲಿ ಒಂದು ದೃಶ್ಯವನ್ನ ರೀಕ್ರಿಯೆಟ್‌ ಮಾಡಿ ಪೊಲೀಸ್‌ ಇಲಾಖೆ ಹಾಗೂ ಊರ ಮಂದಿಯನ್ನ ನಂಬಿಸಿದ್ರು. ಆದ್ರೆ ಕೊಲೆಯಾದ ದಾವಲ್‌ ಮನೆಯವರೆ ಇನ್ವೆಷ್ಟಿಗೇಶನ್‌ಗೆ ಇಳಿದಿದ್ರು. ಅಷ್ಟೇ ಅಲ್ಲ ಅವರೇ ಸಾಕ್ಷಿಗಳನ್ನ ಹೊರತೆಗೆದಿದ್ರು. ದಾವಲ್‌ ಮರ್ಡರ್‌ ಕೇಸ್‌(Murder case) ಬಗ್ಗೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ರು. ಮಿಸ್ಸಿಂಗ್‌ ಕೇಸ್‌ ಬಂದಾಗ ತನಿಖೆಗೆ ಇಳಿಯಬೇಕಿದ್ದ ಐ.ಓ ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ವರ್ತಿಸಿದ್ರು. ಕೊನೆಗೆ ದಾವಲ್‌ ಮನೆಯವರೆ ಪೀಲ್ಡಿಗಿಳಿದಿದ್ರು. ಒಬ್ಬ ಕುರಿಗಾಯಿ ಕೊಟ್ಟ ಸುಳಿವನ್ನೇ ಹುಡುಕಿ ಹೊರಟ ಅವರು ಇಡೀ ಜಮೀನನ್ನೇ ಅಗೆದು ಅಗೆದು ಜಾಲಾಡಿದ್ರು.. ಆಗ ಸಿಕ್ಕಿದ್ದೇ ಮನೆ ಮಗನ ಎಲುಬುಗಳು.. ನಂತರ ಇದೇ ಎಲುಬುಗಳನ್ನ ಇಟ್ಟುಕೊಂಡು ಪ್ರಕರಣದ ಇನ್ವಷ್ಟಿಗೇಶನ್‌ ನಡೆಸಿ, ದಾವಲ್‌ ಮರ್ಡರ್‌ ಆಗಿದ್ದಾನೆ ಅನ್ನೋದಕ್ಕೆ ಸಾಕ್ಷಿಗಳನ್ನ ಹೊತ್ತು ಪೊಲೀಸರ ಬಳಿ ತಂದಿದ್ರು.

ಇದನ್ನೂ ವೀಕ್ಷಿಸಿ:  ಮೋದಿ ಹೇಳಿದ 3 ಕಥೆಗಳ ಅಸಲಿ ಮರ್ಮವೇನು ಗೊತ್ತಾ..? ಶಿವನ ಫೋಟೋ ಹಿಡಿದು ಅಖಾಡಕ್ಕಿಳಿದ ರಾಹುಲ್ ಗಾಂಧಿ!

Video Top Stories