ಮೋದಿ ಹೇಳಿದ 3 ಕಥೆಗಳ ಅಸಲಿ ಮರ್ಮವೇನು ಗೊತ್ತಾ..? ಶಿವನ ಫೋಟೋ ಹಿಡಿದು ಅಖಾಡಕ್ಕಿಳಿದ ರಾಹುಲ್ ಗಾಂಧಿ!

ವಿಪಕ್ಷಗಳ ವಿರುದ್ಧ ಮೋದಿ ಅಬ್ಬರ!ಪ್ರಶ್ನೆಗಳಿಗೆಲ್ಲಾ ಉತ್ತರ !
2047ಕ್ಕಾಗಿ 24X7 ಶ್ರಮಿಸುತ್ತೇನೆ..ಮೋದಿ ಕೊಟ್ಟ ವಾಗ್ದಾನ!
2014ರ ರಾಜಕೀಯ ಪರಿಸ್ಥಿತಿ ಬಗ್ಗೆ ಮಾತಾಡಿದ್ದೇಕೆ ಪ್ರಧಾನಿ? 
 

First Published Jul 3, 2024, 5:06 PM IST | Last Updated Jul 3, 2024, 5:06 PM IST

ರಾಹುಲ್ ಗಾಂಧಿ ಈಗ ಬರೀ ಕಾಂಗ್ರೆಸ್ (Congress)ಯುವರಾಜ ಮತ್ರವೇ ಅಲ್ಲ,  ಹಳೇ ಪಕ್ಷದ ಮುಖಂಡರಷ್ಟೇ ಅಲ್ಲ, ಅವರೀಗ ವಿಪಕ್ಷ ನಾಯಕ. ಅಂದ್ರೆ, ಮೋದಿ(Narendra modi) ಎದುರು ಗುಡುಗೋ ಕೆಲಸ ಈಗ ರಾಹುಲ್ ಗಾಂಧಿ(Rahul Gandhi) ಅವರದ್ದು. 2014ರಲ್ಲಿ ಅಧೋಗತಿಗೆ ಸಾಗಿದ್ದ ಕಾಂಗ್ರೆಸ್ ಯಾತ್ರೆ, 2024ರ ಹೊತ್ತಿಗೆ ಮತ್ತೆ ಟ್ರಾಕಿಗೆ ಮರಳಿತ್ತು. ಮೋದಿ ಸುನಾಮಿಗೆ ಸಿಲುಕಿದ ಕಾಂಗ್ರೆಸ್ ಕತೆ ಮುಗಿದೇ ಹೋಯ್ತು ಅನ್ನೋ ಹೊತ್ತಿಗೆ, ಅದ್ಭುತವಾದ ಅವಕಾಶವೊಂದು ರಾಹುಲ್ ಗಾಂಧಿ ಅವರವನ್ನ ಅರಸಿ ಬಂದಿತ್ತು. ಮಹಾಘಟಬಂಧನದ ಸಹಾಯ ಹಸ್ತವೇ, ಹಸ್ತ ಪಾಳಯಕ್ಕೆ ದೊಡ್ಡ ವರವಾಯ್ತು. ಕಾಂಗ್ರೆಸ್‌ನ ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿದ್ದಾರೆ. ವಿಪಕ್ಷ ನಾಯಕನ ಪಟ್ಟದಲ್ಲಿ ಕೂರೋಕೂ ಕಾಂಗ್ರೆಸ್‌ಗೆ ಮಿತ್ರಪಕ್ಷ ಬೆಂಬಲ ಬೇಕಿತ್ತು. ಆದ್ರೆ ಈ ಸಲ ಸ್ವಂತ ಬಲದಿಂದ ವಿಪಕ್ಷ ಸ್ಥಾನದಲ್ಲಿ ಕೂತಿದ್ದಾರೆ. ಅಷ್ಟೇ ಅಲ್ಲ, ತಮಗೆ ಸಿಕ್ಕಿರೋ ಈ ಸ್ಥಾನದ ಬಗ್ಗೆ ತಮಗೆ ತೃಪ್ತಿ ಇದೆ, ಹೆಮ್ಮೆ ಇದೆ ಅಂತ ಹೇಳಿದ್ದಾರೆ. ಆ ಮಾತು ಹೇಳುವಾಗ್ಲೂ ಕೂಡ ಬಿಜೆಪಿನಾ ಕುಟುಕೋದು ಬಿಟ್ಟಿರ್ಲಿಲ್ಲ.

ಇದನ್ನೂ ವೀಕ್ಷಿಸಿ:  ಸಿಎಂ ಪಟ್ಟಕ್ಕಾಗಿ ಸದ್ದಿಲ್ಲದೆ ಶುರುವಾಗಿದ್ಯಾ ಶಕ್ತಿ ಪ್ರದರ್ಶನ..? ಕೆಪಿಸಿಸಿ ಅಧ್ಯಕ್ಷರು ನೋಟಿಸ್ ಕೊಡ್ತೇನೆ ಎಂದದ್ದು ಯಾರಿಗೆ..?