ರಾತ್ರಿ 10 ಗಂಟೆಗೆ ಮೇಲಿಂದ ಬಿತ್ತು ಹೆಣ..! ಗಣೇಶ ಹಬ್ಬಕ್ಕೆ ಬಂದವಳು ಹೆಣವಾಗಿದ್ಲು..!

ಬೆಳ್ಳಂಬೆಳಗ್ಗೆ ಸಿಕ್ಕಿತ್ತು ಪೋಷಕರಿಗೆ ಮಗಳ ಸಾವಿನ ಸುದ್ದಿ
ಗಂಡನ ಮನೆಯಲ್ಲಿ ಅನುಮಾನಸ್ಪದವಾಗಿ ಸಾವು..!
ಕೊಂದು ಮನೆಯ ಮೇಲಿನಿಂದ ಬಿಸಾಕಿದ ಆರೋಪ!

Share this Video
  • FB
  • Linkdin
  • Whatsapp

ಆತ ರಾಯಚೂರಿನ ಹುಡುಗ, ಆಕೆ ಆಂಧ್ರದ ಆಧೋನಿಯ ಹುಡುಗಿ. ಹಿರಿಯರು ಎಲ್ಲರೂ ಸೇರಿ ಮದುವೆ ಮಾಡಿದ್ರು. ನೂರಾರು ಕನಸುಗಳನ್ನ ಕಟ್ಟಿಕೊಂಡು ಅತ್ತೆ ಮನೆಗೆ ಆಂಧ್ರ ಸೊಸೆ ಬಂದಿದ್ಲು. ಆದ್ರೆ ಮದುವೆಯಾಗಿ ಒಂದು ವರ್ಷವಾಗಿತ್ತು ಅಷ್ಟೇ. ಅವತ್ತೊಂದು ದಿನ ಅವಳು ಮನೆ ಮೇಲಿಂದ ಬಿದ್ದು ಪ್ರಾಣಬಿಟ್ಟಿದ್ಲು.. ಅವಳ ಸಾವು ಎರಡೂ ಕುಂಟುಂಬವನ್ನೂ ಶಾಕ್ ಆಗುವಂತೆ ಮಾಡಿತ್ತು. ಇನ್ನೂ ಹೆಣವನ್ನೂ ಎತ್ತಿರಲಿಲ್ಲ.. ಅಷ್ಟರಲ್ಲಾಗಲೇ ಹೆಣ್ಣುಮಗಳ ಸಾವಿನ (death) ಬಗ್ಗೆ ಅಂತೆ ಕಂತೆಗಳು ಶುರುವಾಯ್ತು. ಮನೆ ಮಗಳು ಹೀಗೆ ರಾತ್ರೋ ರಾತ್ರಿ ಪ್ರಾಣ ಬಿಟ್ಟಿದ್ದಾಳೆ ಅಂತ ಗೊತ್ತಾದ್ರೆ ಯಾವ ಹೆತ್ತವರು ತಾನೆ ಸುಮ್ಮನಿರ್ತಾರೆ. ಇಲ್ಲಿ ಆಗಿದ್ದು ಕೂಡ ಅಷ್ಟೇ.. ಶಿಲ್ಪಾ ಸತ್ತ ಉದ್ದಿ ಕೇಳಿ ಸ್ಪಾಟ್‌ಗೆ ಬಂದ ಹೆತ್ತವರು ನ್ಯಾಯ ಬೇಕು ಅಂತ ಕೂತುಬಿಟ್ಟಿದ್ರು. ಅಷ್ಟೇ ಅಲ್ಲ ಆಕೆಯನ್ನ ಗಂಡನ ಮನೆಯವರೇ ಕೊಂದಿದ್ದಾರೆ(murder) ಅಂತ ಆರೋಪಿಸಿದ್ರು. ಅವರಿಬ್ಬರು ಮದುವೆಯಾಗಿ ಒಂದು ವರ್ಷವಾದ್ರೂ ಒಟ್ಟಿಗೆ ಸಂಸಾರ ಮಾಡಿದ್ದು ಒಂದು ತಿಂಗಳು ಅಷ್ಟೇ. ಮದುವೆಯಾದ ಮೇಲೆ ಆಕೆ ಗಂಡನ ಮನೆಗಿಂತ ಹೆಚ್ಚು ತವರು ಮನೆಯಲ್ಲೇ ಇದ್ದು ಬಿಟ್ಟಿದ್ಲು. ಇನ್ನೂ ಮಗನ ಸಂಸಾರ ಹೀಗಾಯ್ತಲ್ಲ ಅಂತ ಅತ್ತೆ ಮಾವ ಗಣೇಶ ಹಬ್ಬದ(Ganesha festival) ಹಿಂದಿನ ದಿನವಷ್ಟೇ ಬೀಗರ ಮನೆಗೆ ಹೋಗಿ ಸಂಧಾನ ಮಾಡಿಕೊಂಡು ಸೊಸೆಯನ್ನ ಕರೆದುಕೊಂಡು ಬಂದಿದ್ರು. ಆದ್ರೆ ಬಂದು ಮೂರೇ ದಿನವೇ ಸೊಸೆ ಪ್ರಾಣಬಿಟ್ಟಿದ್ದಾಳೆ. ಆದ್ರೆ ಶಿಲ್ಪಾ ಮನೆಯವರು ಮಾತ್ರ ಅತ್ತೆ-ಮಾವ ಅಳಿಯ ಸೇರಿಕೊಂಡೇ ಮಗಳನ್ನ ಕೊಲೆ ಮಾಡಿದ್ದಾರೆ ಅಂತಿದ್ದಾರೆ. ಅದ್ರೆ ಇದರ ತನಿಖೆ ನಡೆಸುತ್ತಿರೋ ಪೊಲೀಸರು ಹೇಳಿದ್ದೇ ಬೇರೆ.ನಿಜಕ್ಕೂ ಇದು ದುರಂತ ಕಥೆಯೇ.. ನೂರಾರು ಕನಸುಗಳನ್ನ ಕಟ್ಟಿಕೊಂಡು ಗಂಡನ ಮನೆಗೆ ಬಂದವಳು ಹೀಗೆ ಹೀನಾಯವಾಗಿ ಸಾಯುತ್ತಾಳೆ ಅಂದ್ರೆ ಏನರ್ಥ..! ಸದ್ಯ ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಮೇಲೆ ಅಲ್ಲಿ ನಿಜಕ್ಕೂ ನಡೆದಿದ್ದೇನು ಅನ್ನೋದು ಗೊತ್ತಾಗಲಿದೆ.

ಇದನ್ನೂ ವೀಕ್ಷಿಸಿ: ದಳ ಕಮಲ ಸ್ನೇಹಕ್ಕೆ ನೀರೆರೆದ ಕಾವೇರಿ: ಸರ್ಕಾರಕ್ಕೆ ಜಂಟಿಯಾಗಿ ಹೋದ ಸಂದೇಶವೇನು..?

Related Video