ಅತ್ತೆ ಅತ್ತೆ ಅಂತಿದ್ದವನೇ ಹೆಣಹಾಕಿದ್ದೇಕೆ..? ಅಣ್ಣನ ವಾರ್ನಿಂಗ್‌ಗೆ ವೈಲೆಂಟ್ ಆದ್ನಾ ಕೊಲೆಗಾರ ?

ಅವಳ ಹೆಣ ಹಾಕಿ ಸೀದಾ ಮನೆಗೆ ಬಂದು ಮಲಗಿಬಿಟ್ಟ..!
ವೈರಲ್ ವಿಡಿಯೋದಲ್ಲಿ ಸಿಕ್ಕಿತ್ತು ಹಂತಕನ ಸುಳಿವು..!
ಪೊದೆಯೊಳಗೆ ಕರೆದೊಯ್ದು ಕತ್ತು ಹಿಸುಕಿದ್ದ ಹಂತಕ..!

Share this Video
  • FB
  • Linkdin
  • Whatsapp

ಅವಳು ವಿಧವೆ..ಗಂಡ ಸತ್ತ ನಂತರ ಮಗುವನ್ನ ಕರೆದುಕೊಂಡು ಬಂದು ತವರುಮನೆಯಲ್ಲಿ ವಾಸವಿದ್ದಳು. ಆದ್ರೆ ಆವತ್ತೊಂದು ದಿನ ದೇವಸ್ಥಾನಕ್ಕೆ ಅಂತ ಹೋದವಳು ವಾಪಸ್ ಬರಲೇ ಇಲ್ಲ. ಅವಳನ್ನ ದಾರಿ ಮಧ್ಯೆಯೇ ಇದ್ದ ಪೊದೆಯೊಂದರಲ್ಲಿ ಹಂತಕರು ಕೊಂದು ಎಸ್ಕೇಪ್ ಆಗಿದ್ರು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದು ಒಂದು ವಿಲಕ್ಷಣ ಲವ್ ಸ್ಟೋರಿ. ಗಿರಿಜಮ್ಮನನ್ನ ಅದೇ ಗ್ರಾಮದ 21 ವರ್ಷದ ದೇವರಾಜ ಕೊಂದು ಮುಗಿಸಿದ್ದ. ಆತ ಗಿರಿಜಮ್ಮನನ್ನ ಅತ್ತೆ ಅತ್ತೆ ಅಂತ ಕರೆಯುತ್ತಿದ್ದ. ಈಕೆ ಕೂಡ ಅಳಿಯ ಅಂತ ಬಾಯಿ ತುಂಬ ಕರೆಯುತ್ತಿದ್ದಳು. ಆದರೆ ಈ ಅತ್ತೆ ಅಳಿಯನ ನಡುವೆಯೇ ದೇಹ ಸಂಬಂದ ಬೆಳೆದುಬಿಟ್ಟಿತ್ತು. ಇದು ಆಕೆಯ ಅಣ್ಣನಿಗೆ ಗೊತ್ತಾಗಿ ಇಬ್ಬರಿಗೂ ವಾರ್ನ್ ಮಾಡಿದ್ದ. ಯಾವಾಗ ಅಣ್ಣನೇ ಬುದ್ಧಿ ಮಾತು ಹೆಳಿದ್ನೋ ಗಿರಿಜಮ್ಮ ಬದಲಾಗಿಬಿಟ್ಟಳು. ದೇವರಾಜನ ಸಹವಾಸ ಬಿಟ್ಟುಬಿಟ್ಟಳು. ಆದ್ರೆ ದೇವರಾಜ ಮಾತ್ರ ಆಕೆಯ ಸಂಬಂಧವನ್ನ ಕಳದುಕೊಳ್ಳೋದಕ್ಕೆ ರೆಡಿ ಇರಲಿಲ್ಲ. ಆದ್ರೆ ಯಾವಾಗ ಆಕೆ ಎಲ್ಲದಕ್ಕೂ ನೋ ಅಂದಲೋ ಅವಳ ಕಥೆಯನ್ನೇ ಮುಗಿಸೋದಕ್ಕೆ ನಿರ್ಧರಿಸಿಬಿಟ್ಟ. ಅತ್ತೆ ಅತ್ತೆ ಅಂದುಕೊಂಡಿದ್ದವನೇ ಗಿರಿಜಮ್ಮನ ಕಥೆ ಮುಗಿಸಿದ್ದಾನೆ. ಸದ್ಯ ಆಕೆಯನ್ನ ಕೊಂದು ದೇವರಾಜ ಜೈಲು ಸೇರಿದ್ರೆ ಗಿರಿಜಮ್ಮ ಮಸಣ ಸೇರಿದ್ದಾಳೆ.

ಇದನ್ನೂ ವೀಕ್ಷಿಸಿ: ಬಿಹಾರದಲ್ಲಿ ಮಿತ್ರ ಕೂಟದ ಸೀಟು ಹಂಚಿಕೆ ಕಗ್ಗಂಟು ಕ್ಲೀಯರ್: ಬಿಜೆಪಿಗೆ 17, ಜೆಡಿಯು ಪಾಳಯಕ್ಕೆ 16 ಕ್ಷೇತ್ರಗಳ ಹಂಚಿಕೆ

Related Video