Asianet Suvarna News Asianet Suvarna News

ಗಂಡ ಜೈಲಿಗೆ.. ಹೆಂಡತಿ ಪರಲೋಕಕ್ಕೆ..ಮಕ್ಕಳು ಅನಾಥ..! ಪ್ರೀತಿಸಿದವಳನ್ನು ಪತಿರಾಯ ಕೊಂದಿದ್ದೇಕೆ ?

ಅವಳಿಗೆ 3ನೇ ಮದುವೆ ಅವನಿಗೆ ಎರಡನೆಯದ್ದು..!
ಹೆಂಡತಿಯ ಹೆಣ ಹಾಕಿ ಪೊಲೀಸ್ ಠಾಣೆಗೆ ಬಂದಿದ್ದ..!
ಗೃಹಪ್ರವೇಶಕ್ಕೆ ಹೋಗಿ ಬಂದ ಮೇಲೆ ಜಗಳ ಶುರು..!

ಅವರಿಬ್ಬರು ಸರ್ಕಾರಿ ಅಧಿಕಾರಿಗಳು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿಯಾಗಿ(Health Officer) ಅವರಿಬ್ಬರು ಒಂದೊಂದು ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ರು. ಕೆಲಸದ ಜಾಗದಲ್ಲಾದ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಲವ್ ಮಾಡಿ ಮದುವೆಯಾಗಿದ್ರು. 2 ವರ್ಷ ಸುಖವಾಗಿ ಸಂಸಾರ ಮಾಡಿದ್ರು. ಆದ್ರೆ ಆವತ್ತೊಂದು ದಿನ ಗಂಡ ಪ್ರೀತಿಸಿ(Love) ಮದುವೆಯಾದವಳನ್ನೇ ಕೊಂದು(Murder) ಮುಗಿಸಿದ್ದ. ಅಷ್ಟೇ ಅಲ್ಲ ಮನೆಯಲ್ಲಿ ಹೆಣ ಹಾಕಿ ಪೊಲೀಸ್ ಠಾಣೆಗೆ ಬಂದು ಸರೆಂಡರ್ ಕೂಡ ಆಗಿದ್ದ. ಶ್ರೀಕಾಂತ ಹೆಂಡತಿಯ ಹೆಣ ಹಾಕಿ ಸೀದಾ ಪೊಲೀಸ್ ಠಾಣೆಗೆ ಬಂದು ಸರೆಂಡರ್ ಆಗಿದ್ದ.. ಪೊಲೀಸರು ಆಶ್ಚರ್ಯದಿಂದಲೇ ಅವನನ್ನ ವಷಕ್ಕೆ ಪಡೆದು ನಂತರ ಸ್ಪಾಟ್ಗೆ ಹೋದ ಪೊಲೀಸರು ಮೃತದೇಹವನ್ನ ಪೋಸ್ಟ್ ಮಾರ್ಟಮ್ಗೆ ಕಳುಹಿಸಿದ್ರು. ಬಳಿಕ ಕೇಸ್ ದಾಖಲಿಸಿಕೊಂಡು ಶ್ರೀಕಾಂತನ ವಿಚಾರಣೆ ಆರಂಬಿಸಿದ್ರು. ಆಗ ಆತ ತನ್ನ ಕಥೆಯನ್ನ ಹೇಳೋದಕ್ಕೆ ಶುರು ಮಾಡಿದ.. ಆತ ಹೇಳಿದ ಮೊದಲ ವಾಕ್ಯವೇ ಪೊಲೀಸರ ತಲೆ ತಿರುಗುವಂತೆ ಮಾಡಿತ್ತು. ಕಾರಣ ಆಕೆಗೆ ಡಿಂಪಲ್ ಎರಡನೇ ಹೆಂಡತಿಯಾದ್ರೆ ಡಿಂಪಲ್ಗೆ ಶ್ರೀಕಾಂತ ಮೂರನೇ ಗಂಡ. ಒಪ್ಪಂದಗಳನ್ನ ಮಾಡಿಕೊಂಡು ಆದ ಮದುವೆ ಮೂರು ವರ್ಷ ಬಾಳಲ್ಲಿಲ್ಲ. ಪ್ರೀತಿಸಿ ಮದುವೆಯಾದವನೇ ಡಿಂಪಲ್ ಕಥೆ ಮುಗಿಸಿದ್ದಾನೆ. ಮದುವೆ ಅನ್ನೋದು ಕಮಿಟ್ಮೆಂಟ್ ಹೌದು.. ಆದ್ರೆ ಅದು ಅಗ್ರಿಮೆಂಟ್ವರೆಗೆ ಹೋದ್ರೆ ಏನಾಗುತ್ತೆ ಅನ್ನೋದಕ್ಕೆ ಶ್ರೀಕಾಂತ ಮತ್ತು ಡಿಂಪಲ್ ಸಂಸಾರವೇ ಸಾಕ್ಷಿ. ಇನ್ನೂ ಕೆಲ ಒಪ್ಪಂದಗಳನ್ನ ಮಾಡಿಕೊಂಡು ಮದುವೆಯಾದ ಅವರಿಬ್ಬರು ಎರಡು ವರ್ಷ ಚೆನ್ನಾಗೇ ಇದ್ರು. ಇಬ್ಬರಿಗೂ ಒಂದು ಮಗು ಕೂಡ ಆಯ್ತು. ಆದ್ರೆ ಇತ್ತಿಚೆಗೆ ಶ್ರೀಕಾಂತನಿಗೆ ಹೆಂಡತಿ ಮೇಲೆ ಲೈಟಾಗಿ ಡೌಟ್ ಶುರುವಾಗಿತ್ತು. ಆ ಡೌಟ್ ಹೆಂಡತಿಯ ಹೆಣ ಹಾಕುವಂತೆ ಮಾಡಿತ್ತು.

ಇದನ್ನೂ ವೀಕ್ಷಿಸಿ:  ರಣ್ ಬೀರ್ ಕಪೂರ್ ಸಿನಿಮಾನ ಮಿಸ್ ಮಾಡ್ಕೊಂಡ ಸೌತ್ ಸ್ಟಾರ್..ಅನಿಮಲ್ ಚಿತ್ರ ಮಹೇಶ್ ಬಾಬು ಯಾಕೆ ಮಾಡಲಿಲ್ಲ ?

Video Top Stories