ಪ್ರೀತಿಸಿ ಮದುವೆಯಾದವಳಿಗೆ ವಿಷ ಉಣಿಸಿದ ಗಂಡ..!ಮುದ್ದೆಯಲ್ಲಿ ಸೈನೈಡ್ ಹಾಕಿದ್ನಾ ಪಾಪಿ ಗಂಡ..?

7 ವರ್ಷ ಜೊತೆಯಲ್ಲಿದ್ದವಳನ್ನೇ ಕೊಂದುಬಿಟ್ಟ..!
ಗಂಡನ ಪ್ರೇಯಸಿಯನ್ನ ಬೇಡಿಕೊಂಡಿದ್ದಳು..!
ಅವಳ ಕೊಲೆಗೆ ಕಾರಣವಾದವಳು ಮತ್ತೊಬ್ಬಳು..!

First Published Dec 14, 2023, 2:59 PM IST | Last Updated Dec 14, 2023, 2:59 PM IST

ಅವರು ಪ್ರೀತಿಸಿ ಮದುವೆಯಾದವರು. ಕಷ್ಟ ಪಟ್ಟು ದುಡಿದು ಇಬ್ಬರೂ ಮೇಲೆ ಬಂದವರು. ಇವರಿಬ್ಬರಿಗೂ ಒಂದು ಮುದ್ದಾದ ಮಗು ಕೂಡ ಆಗಿತ್ತು. ಯಾವುದೇ ಕಷ್ಟ ತೊಂದರೇ ಏನೂ ಇರಲಿಲ್ಲ. ಆದ್ರೆ ಆವತ್ತು 4 ದಿನ ಆರಾಮಾಗಿ ಇರೋಣ ಅಂತ ತಮ್ಮ ಊರಿಗೆ ಬಂದಿದ್ರು. 4 ದಿನ ಏಂಜಾಯ್ ಕೂಡ ಮಾಡಿದ್ರು. ಆದ್ರೆ 5ನೇ ದಿನ ಹೆಂಡತಿ ಹಾರ್ಟ್ ಅಟ್ಯಾಕ್‌ನಿಂದ(Heart attack) ಸತ್ತು ಹೋಗಿದ್ಲು. ಮನೆಮಗಳು ಸತ್ತ ವಿಷಯ ಕೇಳಿ ಆಕೆಯ ತವರುಮನೆಯವರೆಲ್ಲಾ ಬಂದ್ರು. ಆದ್ರೆ ಸ್ಪಾಟ್ಗೆ ಬಂದಾಗ ತಮ್ಮ ಮಗಳ ಸಾವಿನ ಬಗ್ಗೆ ಹೆತ್ತವರಿಗೆ ಅನುಮಾನ ಮೂಡೋಕೆ ಶುರುವಾಗಿತ್ತು. ಈ ಸಾವು ಸಹಜದಲ್ಲ ಅನ್ನೋ ಸಂಶಯ ಅವರದ್ದಾಗಿತ್ತು. ಅನುಮಾನದಿಂದಲೇ ಪೊಲೀಸ್ ಕಂಪ್ಲೆಂಟ್ ಕೊಟ್ಟರು. ಇನ್ನೂ ಯಾವಾಗ ಪೊಲೀಸರು(Police) ಬಂದರೋ ಹೆಂಡತಿಯ ಸಾವಿನ ಬಗ್ಗೆ ಒಂದೊಂದೇ ಸ್ಫೋಟಕ ಸತ್ಯಗಳು ಹೊರಗೆ ಬಂದವು. ಶ್ವೇತಾ ಹಾರ್ಟ್ಅಟ್ಯಾಕ್‌ನಿಂದ ಸತ್ತಿಲ್ಲ. ಇನ್ನೂ ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಆಕೆಯ ದೇಹದಲ್ಲಿ ಕೆಮಿಕಲ್ ಅಂಶ ಸೇರಿಕೊಂಡಿದೆ. ಅದೇ ಆಕೆಯ ಸಾವಿಗೆ ಕಾರಣ ಅಂತ ಹೇಳಿಬಿಟ್ರು. ಇನ್ನೂ ಯಾವಾಗ ಗಂಡ ಹೇಳಿದ್ದು ಸುಳ್ಳು ಅಂತ ಗೊತ್ತಾಯ್ತೋ ಪೊಲೀಸರು ಆತನ ವಿಚಾರಣೆ ಶುರು ಮಾಡ್ತಾರೆ. ಆಗಲೇ ನೋಡಿ ಆತ ಸತ್ಯ ಒಪ್ಪಿಕೊಳ್ಳೋದು. ಪ್ರೀತಿಸಿ(Love) ಮದುವೆಯಾದವಳನ್ನೇ ದರ್ಶನ್ ಕೊಂದು ಮುಗಿಸಿದ್ದ.

ಆದ್ರೆ ಅದಕ್ಕೆ ಕಾರಣ ಅವನ ಅನೈತಿಕ ಸಂಬಂಧ. ತಾನು ಕೆಲಸ ಮಾಡ್ತಿದ್ದ ಜಾಗದಲ್ಲಿ ಪರಿಚಯವಾದವಳ ಜೊತೆಯಲ್ಲಿ ದರ್ಶನ್ ಸಂಬಂದ ಬೆಳಸಿಕೊಂಡಿದ್ದ. ಆ ವಿಷಯ ಶ್ವೇತಾಗೆ ಗೊತ್ತಾಗಿಬಿಡುತ್ತೆ. ಇದೇ ವಿಷಯಕ್ಕೆ ಆಗಾಗ ಜಗಳವಾಗ್ತಿರುತ್ತೆ. ಆದ್ರೆ ಈತನಿಗೆ ಹೆಂಡತಿಗಿಂತ(Wife) ಪ್ರೇಯಸಿಯೇ ಹೆಚ್ಚಾಗಿಬಿಟ್ಟಿರುತ್ತೆ. ಶ್ವೇತಾ ಆಗಾಗ ಗಂಡನ ಪ್ರೇಯಿಸಿಗೆ ಕಾಲ್ ಮಾಡಿ ತನ್ನ ಗಂಡನ ವಿಷಯಕ್ಕೆ ಬರಬೇಡ ಅಂತಲೂ ಹೇಳುತ್ತಿರುತ್ತಾಳೆ. ಆದ್ರೆ ದರ್ಶನ್ ತನ್ನ ಅನೈತಿಕ ಸಂಬಂದಕ್ಕೆ ಹೆಂಡತಿ ಅಡ್ಡಿಯಾಗ್ತಿದ್ದಾಳೆ ಅನ್ನೋ ಕಾರಣಕ್ಕೆ ಪಕ್ಕಾ ಪ್ಲಾನ್ ಮಾಡಿ ಜೊತೆಗೆ ಒಂದು ಸೈನೈಡ್ ಡಬ್ಬಿಯನ್ನೂ ತೆಗೆದುಕೊಂಡು ಚಿಕ್ಕಮಗಳೂರಿಗೆ ಹೋಗಿಬರೋಣ ಅಂತ ಆಕೆಯನ್ನ ಪುಸಲಾಯಿಸಿ ಕರೆದುಕೊಂಡು ಹೋಗ್ತಾನೆ. ಅವಳ ಆ ಚಿಕ್ಕಮಗಳೂರು ಜರ್ನಿಯೇ ಕೊನೆಯ ಜರ್ನಿಯಾಗಿಬಿಡುತ್ತೆ. ಏಳು ವರ್ಷದ ಮಡದಿ ಪ್ರೀತಿ ಬೇಜಾರಾಗಿತ್ತು. ಜೇಬಲ್ಲಿದ್ದ ದುಡ್ಡು ಬುದ್ಧಿಗೆ ಮಂಕುಬೂದಿ ಎರಚಿತ್ತು. ಕಷ್ಟಕ್ಕೆ ನೊಗವಾಗಿದ್ದ ಪತ್ನಿಗಿಂತ ಪರಸ್ತ್ರೀಯ ಮಾದಕ ನಗು ಮಡದಿಯನ್ನ ಮುಗಿಸುವ ಮಸಲತ್ತು ಮಾಡಿಸಿತ್ತು. ಅಂದುಕೊಂಡಂತೆ ಪತ್ನಿಯನ್ನೇನೋ ಮುಗಿಸಿದ. 

ಇದನ್ನೂ ವೀಕ್ಷಿಸಿ:  ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?