ಹೆಸರೇ ಕೇಳದ ಕಂಪನಿಗಳು..ಊಹೆಗೂ ಮೀರಿದ ರಹಸ್ಯಗಳು! ಯಾವ ಪಾರ್ಟಿಗೆ ಎಷ್ಟು ಕಾಣಿಕೆ.. ಅಷ್ಟು ಕೋಟಿ ಕೊಟ್ಟಿದ್ಯಾರು..?
ಸಂಗ್ರಾಮಕ್ಕೂ ಮುನ್ನ ಸೃಷ್ಟಿಯಾಗಿದೆ ‘ಬಾಂಡ್’ ಸಂಚಲನ!
ರಾಜಕೀಯ ಯುದ್ಧಕ್ಕೆ ಟ್ವಿಸ್ಟ್ ಕೊಟ್ಟ ಎಲೆಕ್ಟೋರಲ್ ಬಾಂಡ್!
ಕೋಲಾಹಲ ಸೃಷ್ಟಿಸುತ್ತಾ ಚುನಾವಣಾ ಬಾಂಡ್ ದೇಣಿಗೆ ರಹಸ್ಯ!
ಚುನಾವಣಾ ಆಯೋಗ ಮಹಾಮತಸಂಗ್ರಾಮದ ಕಂಪ್ಲೀಟ್ ಡೀಟೇಲ್ಸ್ ಮುಂದಿಟ್ರು. ಏಪ್ರಿಲ್ 19ರಿಂದ ಈ ಮತಸಮರ ಶುರುವಾಗುತ್ತೆ. ಜೂನ್ 4ರಂದು ಎಲೆಕ್ಷನ್ ಯಾರ ಗೆದ್ರು, ಎಷ್ಟು ಗೆದ್ರು ಅನ್ನೋದು ಬಯಲಾಗುತ್ತೆ. ಈಗಾಗ್ಲೇ, ನೀತಿಸಂಹಿತೆ ಸಹ ಜಾರಿಯಾಗಿದೆ. ಇಂಥಾ ಸಂದರ್ಭದಲ್ಲಿ ದೊಡ್ಡ ಸದ್ದು ಮಾಡ್ತಾ ಇರೋ ಒಂದು ಸಂಗತಿ ಅಂದ್ರೆ, ಅದು ಚುನಾವಣಾ ಬಾಂಡ್(Electoral bonds). ಎಲೆಕ್ಟೋರಲ್ ಬಾಂಡ್. ಈ ಹೆಸರನ್ನ ಈ ಮುಂಚೆ ನಾವೂ ಕೇಳಿದ್ವಿ. ನೀವೂ ಕೇಳೇ ಇರ್ತೀರಿ. ಆದ್ರೆ ಈಗ ಈ ಎಲೆಕ್ಷನ್ ಬಾಂಡ್, ದೊಡ್ಡದೊಂದು ರಹಸ್ಯವನ್ನೇ ಬಟಾಬಯಲಾಗಿಸೋಕೆ ಮುಂದಾಗಿದೆ. ಇದರಿಂದ, ನಿನ್ನೆ ಮೊನ್ನ ತನಕ ಇದ್ದ ಲೆಕ್ಕಾಚಾರವೇ ಬುಡಮೇಲಾಗಲಿದೆ ಅಂತಿದ್ದಾರೆ. ಭಾರತದಲ್ಲಿ(India) ಈ ಹಿಂದೆ ಇದ್ದ ಕಾನೂನಿನ ಪ್ರಕಾರ, ದೇಣಿಗೆ ಕೊಟ್ಟೋರು ಎಷ್ಟು ಕೊಟ್ರು, ಯಾರಿಗೆ ಕೊಟ್ರು ಅನ್ನೋ ವಿವರನ ಬಹಿರಂಗ ಪಡಿಸೋ ಜರೂರತ್ತು ಇರ್ಲಿಲ್ಲ. ಆದ್ರೆ ಇದು, ಮಾಹಿತಿ ಹಕ್ಕಿನ ಕಾಯ್ದೆಯ(Right to Information Act) ಉಲ್ಲಂಘನೆಯಾಗುತ್ತೆ ಅನ್ನೋ ಕಾರಣಕ್ಕೆ, ಈ ವಿಚಾರ ಸುಪ್ರೀಂ(Supreme court) ಮೆಟ್ಟಿಲೇರಿತ್ತು. ಅಲ್ಲಿಂದ ಕತೆ ಬದಲಾಗೋಕೆ ಶುರುವಾಯ್ತು.
ಇದನ್ನೂ ವೀಕ್ಷಿಸಿ: Ashok on Eshwarappa: ನಾಲ್ಕು ಗೋಡೆಗಳ ಮಧ್ಯೆ ನಡೆದ ಮಾತನ್ನ ನಾನು ಹೇಳಲಾಗಲ್ಲ: ಆರ್. ಅಶೋಕ್