ನಿವೃತ್ತ ಯೋಧನ ಕತ್ತು ಸೀಳಿ ಕೊಲೆ: ತಂಗಿಯ ಅರಿಶಿಣ, ಕುಂಕುಮ ಅಳಿಸಿದ ಅಣ್ಣ..!

ಭಾವನ ಕಥೆ ಮುಗಿಸಿ ಬಾಮೈದ ಎಸ್ಕೇಪ್ ಆಗಿಬಿಟ್ಟ..!
ಕಾಲಿಗೆ ಬೀಳ್ತೀನಿ ಅಂತ ಹೇಳಿ ಬ್ಲೇಡ್ ತಂದಿದ್ದ..!
16 ವರ್ಷ ದೇಶ ಸೇವೆ ಮಾಡಿದವ ಬರ್ಬರ ಕೊಲೆ..!

Share this Video
  • FB
  • Linkdin
  • Whatsapp

ಆತ ನಿವೃತ್ತ ಯೋಧ.. 16 ವರ್ಷ ದೇಶ ಕಾಯ್ದು ನಂತರ ತನ್ನ ತವರಿಗೆ ಬಂದಿದ್ದ. ಆದ್ರೆ ನಿವೃತ್ತಿಯಾದ ನಂತರ ತನ್ನದೇ ಬ್ಯುಸಿನೆಸ್ ಸ್ಟಾರ್ಟ್ ಮಾಡಿ ಬಡವರಿಗೆ ನೆರೆವಾಗಿದ್ರು. ಕೊರೊನಾ ಟೈಂನಲ್ಲಿ ತನ್ನ ಗ್ರಾಮದವರಿಗೆ ಇನ್ನಿಲ್ಲದಂತೆ ಸಹಾಯ ಮಾಡಿದ್ದ ಆತ ಎಲ್ಲರ ಪಾಲಿನ ಹೀರೋ ಆಗಿದ್ದ. ಆದ್ರೆ ಇಂತವನು ಆವತ್ತು ಅದೇ ಯೋಧ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ಸೇನೆಯಿಂದ ವಾಪಸ್ ಆಗಿ ಸ್ವಗ್ರಾಮಕ್ಕೆ ಬಂದು ಸ್ಟೋನ್ ಕ್ರಷರ್ ನಡೆಸುತ್ತಿದ್ದ ಮಾಜಿ ಯೋಧನ(Retired soldier) ಸ್ವಂತ ಬಾಮೈದನೇ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಬಾಮೈದನೇ ಬಾವನ ಕಥೆ ಮುಗಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಆಗಿಮಿಸಿದ ಪೊಲೀಸರು(police) ತನಿಖೆಯನ್ನೂ ಆರಂಭಿಸಿ ಪಾಪಿ ಬಾಮೈದನ ಬಂಧನಕ್ಕೆ ಬಲೆ ಬೀಸಿದ್ರು. ಆದ್ರೆ ಆ ಖತರ್ನಾಕ್ ಸಂಜಯ್ ಪೊಲೀಸರಿಗೆ ಛಳ್ಳೆ ಹಣ್ಣು ತನ್ನಿಸುತ್ತಲೇ ಇದ್ದ.ತನ್ನ ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಅಂತ ತಿಳಿದ ಬಾಮೈದ ತನ್ನ ತಂಗಿಯ ಅರಿಶಿಣ ಕುಂಕುಮವನ್ನೇ ಅಳಿಸಿಬಿಟ್ಟ ಪಾಪಿ.. ನಂತರ ಒಂದು ಹೆಣ ಹಾಕಿ ಪೊಲೀಸರ ಕಣ್ಣು ತಪ್ಪಿಸಲು ಊರೂರು ಸುತ್ತಿದ. ಇನ್ನೂ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ರಿಂದ ಪೊಲೀಸರಿಗೆ ಇವನ ಪತ್ತೆ ಹಚ್ಚೋದೇ ದೊಡ್ಡ ಸವಾಲಾಗಿಬಿಟ್ಟಿತ್ತು. ಆದ್ರೆ ಆವತ್ತು ಇದ್ದಕ್ಕಿದ್ದಂತೆ ಅವನ ಫೋನ್ ಸ್ವಿಚ್ ಆನ್ ಆಗಿಬಿಡ್ತು. ಅಷ್ಟೇ.. ಪೊಲೀಸರು ಕೆಲವೇ ನಿಮಿಷಗಳಲ್ಲಿ ಅವನ ಮುಂದೆ ಹೋಗಿ ನಿಂತದ್ರು.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್‌ನ ಕನಸಿನ ಯೋಜನೆಗೆ ಕೆವೈಸಿ ತೊಂದರೆನಾ..? ಗೃಹಲಕ್ಷ್ಮಿ ಗೊಂದಲ ಶುರುವಾಗಿದ್ದು ಎಲ್ಲಿ ..?

Related Video