ಕಾಂಗ್ರೆಸ್‌ನ ಕನಸಿನ ಯೋಜನೆಗೆ ಕೆವೈಸಿ ತೊಂದರೆನಾ..? ಗೃಹಲಕ್ಷ್ಮಿ ಗೊಂದಲ ಶುರುವಾಗಿದ್ದು ಎಲ್ಲಿ ..?

ಗೃಹಲಕ್ಷ್ಮಿ ಅರ್ಜಿಯಲ್ಲಿ ಈ ಅಂಶಗಳನ್ನ ಮರೆತಿದ್ದೀರಾ..?
ಹೊಸದಾಗಿಯೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಅವಕಾಶ
ಫ್ರೀ ಭಾಗ್ಯಗಳ ಅಧ್ಯಯನಕ್ಕೆ ಮುಂದಾದ ರಾಜ್ಯ ಸರ್ಕಾರ

First Published Sep 8, 2023, 12:32 PM IST | Last Updated Sep 8, 2023, 12:32 PM IST

ಕರ್ನಾಟಕ ಕಾಂಗ್ರೆಸ್ ಕನಸಿನ ಕೂಸಾದ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ. ಪ್ರತಿ ತಿಂಗಳು ಮನೆಯ ಯಜಮಾನಿಗೆ 2000 ರೂಪಾಯಿ ಹಣ ನೀಡೋ ಮೂಲಕ ಮನೆಯ ಖರ್ಚು ವೆಚ್ಚಕ್ಕೆ ನೆರವಾಗಬೇಕು ಅನ್ನೋದು ಕಾಂಗ್ರೆಸ್ ಆಶಯ. ಅದರಂತೆ ಭರ್ಜರಿಯಾಗಿ ಗೃಹಲಕ್ಷ್ಮಿ ಓಪನಿಂಗ್ (Gruha Lakshmi scheme)ಕಂಡಿತ್ತು. ಆದ್ರೆ ಹೊಸ ನೋಂದಣಿಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ ಅನ್ನೋ ಸುದ್ದಿ ಓಡಾಡ್ತು. ಈ ಬಗ್ಗೆ ಕಾಂಗ್ರೆಸ್ (Congress) ಅಧಿಕೃತ ಟ್ವೀಟರ್ ಹ್ಯಾಂಡಲ್ ಕೂಡ ಟ್ವೀಟ್(Tweet) ಮಾಡಿ ನಂತರ ಡಿಲಿಟ್ ಮಾಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪ್ರಚಂಡ ಗೆಲುವು ತಂದುಕೊಟ್ಟ ಪ್ರಚಂಡ ಅಸ್ತ್ರ. ಕೈ ಪಾಳೆಯಕ್ಕೆ ಚುನಾವಣೆಯಲ್ಲಿ ಸ್ತ್ರೀಶಕ್ತಿಯ ಶ್ರೀರಕ್ಷೆ ಸಿಗುವಂತೆ ಮಾಡಿದ್ದ ಬ್ರಹ್ಮಾಸ್ತ್ರ. ಅದುವೇ ಗೃಹಲಕ್ಷ್ಮೀ ಗ್ಯಾರಂಟಿ. ಪಂಚಗ್ಯಾರಂಟಿಗಳಲ್ಲಿ ಅತ್ಯಂತ ದೊಡ್ಡ ಪ್ರತಿಜ್ಞೆಯಾಗಿದ್ದ ಗೃಹಲಕ್ಷ್ಮೀ ಯೋಜನೆಗೆ ಕೈ ಸರ್ಕಾರ ಚಾಲನೆ ಕೊಟ್ಟಿದ್ದಾಗಿದೆ. ಮೈಸೂರಿನ(Mysore) ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹಲಕ್ಷ್ಮೀ ಚೆಕ್ ಅನಾವರಣಗೊಳಿಸುವ ಮೂಲಕ ಗೃಹಲಕ್ಷ್ಮೀ ಯೋಜನೆಗೆ ಖರ್ಗೆ ಚಾಲನೆ ಕೊಟ್ಟಿದ್ದರು.

ಇದನ್ನೂ ವೀಕ್ಷಿಸಿ:  ಸನಾತನ ಧರ್ಮದ ವಿರುದ್ಧ ಮುಂದುವರಿದ ಡಿಎಂಕೆ ದಾಳಿ: ಅಂತರ ಕಾಯ್ದುಕೊಳ್ತಾ I.N.D.I.A ಕೂಟ ?