Bengaluru Crime: ಕೊಲೆಗಾರನ ಸುಳಿವು ಕೊಟ್ಟಿದ್ದು ಶ್ವಾನ..! ಹೆಣ ಹಾಕಿ ಹೆಂಡತಿ ಪಕ್ಕ ಮಲಗಿದ್ದ..!

ಸಿಸಿ ಟಿವಿಯಲ್ಲಿ ಸಿಕ್ಕಿತ್ತು ಹಂತಕನ ಸುಳಿವು..!
ಹಣ ಬರುವ ವಿಚಾರ ಆರೋಪಿಗೆ ತಿಳಿದುಬಿಟ್ಟಿತ್ತು!
ಲಕ್ಷದ ಆಸೆಯಲ್ಲಿದ್ದವನಿಗೆ ಸಿಕ್ಕಿದ್ದು ಬಿಡಿಗಾಸು..!

First Published Feb 27, 2024, 5:42 PM IST | Last Updated Feb 27, 2024, 5:42 PM IST

ಆಕೆ 70 ವರ್ಷದ ಅಜ್ಜಿ. ತನ್ನ ಮಗಳು ಮೊಮ್ಮಗಳೊಂದಿಗೆ ಬೆಂಗಳೂರಿನಲ್ಲಿ(Bengaluru) ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸ ಮಾಡ್ತಿದ್ದಳು. ಬೆಳಗ್ಗೆ ಸಂಜೆ ವಾಕಿಂಗ್, ಅಕ್ಕಪಕ್ಕದವರ ಜೊತೆ ಹರಟೆ ಮಿಕ್ಕ ಸಮಯದಲ್ಲಿ ಮೊಮ್ಮಗಳೊಂದಿಗೆ ಆಟ. ಇಷ್ಟೇ ಆಕೆಯ ಫುಲ್ ಟೈಂ ಕೆಲಸ. ಹೀಗಿದ್ದ ಅಜ್ಜಿ ಆವತ್ತೊಂದು ದಿನ ಕೊಲೆಯಾಗಿ(Murder) ಹೋಗಿದ್ದಳು. ಹಂತಕ ಆಕೆಯನ್ನ ತುಂಡು ತುಂಡು ಮಾಡಿ ಡ್ರಂನಲ್ಲಿ ತುಂಬಿ ಆಕೆಯ ಮನೆಯ ಪಕ್ಕದಲ್ಲೇ ಇಟ್ಟು ಹೋಗಿದ್ದ. ದಿನೇಶ ತಾನೇ ಸುಶೀಲಮ್ಮನನ್ನ ಕೊಂದಿದ್ದು ಅಂತ ಒಪ್ಪಿಕೊಂಡಿದ್ದ. ಆದ್ರೆ ಆರಂಭದಲ್ಲಿ ಪೊಲೀಸರಿಗೆ ಕಥೆಯೊಂದನ್ನ ಹೇಳಿದ್ದ.. ಆದ್ರೆ ಆ ಕಥೆಯನ್ನ ನಂಬದ ಪೊಲೀಸರು ಅವನನ್ನ ಬೇರೆ ಸ್ಟೈಲ್‌ನಲ್ಲಿ ವಿಚಾರಣೆ ಮಾಡಿದ್ರು. ಆಗಲೇ ಈ ದಿನೇಶ ಆವತ್ತು ನಡೆದ ಘಟನೆ ಬಗ್ಗೆ ವಿವರವಾಗಿ ಹೇಳಿದ್ದು.. ಅಜ್ಜಿಯನ್ನ(Old Woman) ತುಂಡು ತುಂಡು ಮಾಡಿ ಡ್ರಂನಲ್ಲಿ ತುಂಬಿದ ಭಿಕರ ಕೃತಯ್ಯವನ್ನ ವಿವರಿಸೋದು. ಚುನಾವಣೆ ಸಂದರ್ಭದಲ್ಲಿ ಪರಿಚಯವಾದ ದಿನೇಶನನ್ನ ಅಜ್ಜಿ ನಂಬಿಬಿಟ್ಟಿದ್ದಳು. ಇದೇ ಕಾರಣಕ್ಕೆ ಆಕೆಯ ಆಸ್ತಿ ಮಾರಾಟದ ವಿಷಯವನ್ನ ಆಕೆ ಆತನ ಬಳಿ ಹೇಳಿಕೊಂಡಿದ್ದಳು. ಆದ್ರೆ ಯಾವಾಗ ಆಕೆಗೆ ಕೋಟಿ ಹಣ(Money) ಬರುತ್ತೆ ಅಂತ ಗೊತ್ತಾಯ್ತೋ ದಿನೇಶ ಒಂದಷ್ಟು ಮೊತ್ತವನ್ನ ಸಾಲವಾಗಿ ಕೇಳಿದ್ದ. ಆದ್ರೆ ಸುಶೀಲಮ್ಮ ಆರಂಭದಲ್ಲಿ ಕೊಡ್ತೀನಿ ಅಂತ ಹೇಳಿದ್ರೂ ನಂತರ ಸಾಲ ಕೊಡೋಕೆ ಒಪ್ಪೋದಿಲ್ಲ. ಇದು ದಿನೇಶನ ಕೋಪಕ್ಕೆ ಕಾರಣವಾಗಿತ್ತು. ಅದೇ ಕೋಪದಲ್ಲಿ ಆವತ್ತೊಂದು ದಿನ ಮನೆಗೆ ಕರೆಸಿಕೊಂಡು ಅವಳ ಕಥೆ ಮುಗಿಸಿದ.. ಆಕೆ ಮೈಮೇಲಿದ್ದ ಚಿನ್ನಾಭರಣವನ್ನೆಲ್ಲಾ ತೆಗೆದುಕೊಂಡು ಮಾರಟ ಮಾಡಲು ಹೋದ.. ಆದ್ರೆ ಆ ಚಿನ್ನವೂ ನಖಲಿಯಾಗಿತ್ತು. ಕೊನೆ ಕಾಲದಲ್ಲಿ ಆಕೆಗೆ ಬರಲಿದ್ದ ಹಣದ ಬಗ್ಗೆ ಹೇಳಿಕೊಂಡಿದ್ದೇ ವೃದ್ಧಗೆ ಮುಳುವಾಗಿತ್ತು. ದುರಂತ ಅಂದ್ರೆ ಆಕೆಯ ಮೇಲಿದ್ದ ನಕಲಿ ಸರಗಳ ಕಂಡು ಚಿನ್ನದ ಸರ ಎಂದು ಭಾವಿಸಿದ ಪಕ್ಕದ ಮನೆಯವನೇ ಆಕೆಯ ಜೀವ ತೆಗೆದಿದ್ದಾನೆ.

ಇದನ್ನೂ ವೀಕ್ಷಿಸಿ:  ಪುರಾತನ ನಗರ ಹೇಳಿತ್ತು ಮನುಕುಲದ ಇತಿಹಾಸ! ಪ್ರಧಾನಿ ಮೋದಿ ದ್ವಾರಕಾ ಭೇಟಿಯಿಂದ ಶುರುವಾಯ್ತು ಚರ್ಚೆ!

Video Top Stories