ಪುರಾತನ ನಗರ ಹೇಳಿತ್ತು ಮನುಕುಲದ ಇತಿಹಾಸ! ಪ್ರಧಾನಿ ಮೋದಿ ದ್ವಾರಕಾ ಭೇಟಿಯಿಂದ ಶುರುವಾಯ್ತು ಚರ್ಚೆ!

ಸಮುದ್ರದಲ್ಲಿ ಅಡಗಿದೆ ಗೀತಾಚಾರ್ಯ ಕೃಷ್ಣನ ಸಾಮ್ರಾಜ್ಯ!
ಕೃಷ್ಣ ಭೂಮಿಯ ದರ್ಶನದ ಬಳಿಕ ಮೋದಿ ಹೇಳಿದ್ದೇನು?
ಕಡಲಾಳದಲ್ಲಿ ಮೋದಿ ಧ್ಯಾನ..ಒಳಗಣ್ಣಿಗೆ ಕಂಡಿದ್ದೇನು?

First Published Feb 27, 2024, 5:02 PM IST | Last Updated Feb 27, 2024, 5:02 PM IST

ಶ್ರೀಕೃಷ್ಣ..ಗೀತಾಚಾರ್ಯ.. ಮಹಾಭಾರತದ ಸೂತ್ರಧಾರ. ಆ ಕೃಷ್ಣನ ಸಾಮ್ರಾಜ್ಯ ಭೂಮಿಯ ಮೇಲಷ್ಟೇ ಅಲ್ಲ, ಕೋಟಿ ಕೋಟಿ ಭಕ್ತರ ಹೃದಯಾಂತರಾಳದಲ್ಲಿದೆ. ಅದೇ ಥರ, ಕೃಷ್ಣನ(Krishna) ಅದೃಶ್ಯ ಸಾಮ್ರಾಜ್ಯವೊಂದು, ಸಮುದ್ರಗರ್ಭದಲ್ಲಿ ರಹಸ್ಯವಾಗಿ ಉಳಿದುಬಿಟ್ಟಿದೆ. ಯಾವ ಭೂಭಾಗ ಒಂದು ಕಾಲದಲ್ಲಿ ಕೃಷ್ಣ ಪರಮಾತ್ಮನ ಅಸಮಾನ್ಯ ಲೀಲೆಗೆ ಕಾರಣನೆಲೆಯಾಗಿತ್ತೋ, ಅದೀಗ ಸಮುದ್ರ ಕಡಲಾಳದಲ್ಲಿ ಅಡಗಿಕೊಂಡಿದೆ. ಆದ್ರೆ ಅದೇ ಜಾಗದಲ್ಲಿ, ದೇಶದ ಪ್ರಧಾನಿ ನರೇಂದ್ರ ಮೋದಿ(Narendra Modi) ಧ್ಯಾನ ಮಾಡಿ ಬಂದಿದಾರೆ. ಗುಜರಾತಿನಲ್ಲಿರೋ(Gujarat) ಒಂದು ಪುಟ್ಟ ನಗರ. ಆದ್ರೆ, ಇದರ ವಿಖ್ಯಾತಿ, ಇದರ ಪ್ರಾಮುಖ್ಯತೆ, ಇದಕ್ಕೆ ಅಂಟಿಕೊಂಡಿರೋ ಸಮುದ್ರಕ್ಕಿಂತಲೂ ವಿಶಾಲವಾದ್ದು. ಆಳವಾದ್ದು.. ಅಂದ್ ಹಾಗೆ, ಅಸಲಿಗೆ ಈ ಊರಿನ ಬಗ್ಗೆ ಈಗ್ಯಾಕೆ ಮಾತಾಡ್ತಾ ಇದೀವಿ ಅಂತ ಕೇಳ್ತಿರಾ? ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ಪ್ರಧಾನಿ ನರೇಂದ್ರ ಮೋದಿ, ಹಿಂದೂಧರ್ಮದ ಶ್ರದ್ಧಾಕೇಂದ್ರವಾಗಿರೋ ದ್ವಾರಕೆಗೆ(Dwarka) ಭೆಟಿ ನೀಡಿದ್ರು. ಆದ್ರೆ, ದ್ವಾರಕೆಲಿರೋ ಈ ಕೃಷ್ಣ ಪರಮಾತ್ಮನ ದರ್ಶನವನ್ನಷ್ಟೇ ಪಡೆದಿದ್ದಿದ್ರೆ, ಅದರ ಕತೆ ಅಲ್ಲಿಗೇ ಮುಗಿದು ಹೋಗ್ತಾ ಇತ್ತು.ಆದ್ರೆ ಈ ಬಾರಿ ಮೋದಿ ಅವರು, ದ್ವಾರಕೆಯ ರಹಸ್ಯವನ್ನೆಲ್ಲಾ ತನ್ನ ಗರ್ಭದಲ್ಲಿ ಹುದುಗಿಸಿಕೊಂಡಿರೋ ಸಮುದ್ರಕ್ಕೆ ಧುಮುಕಿದ್ರು. ಕಡಲಾಳದಲ್ಲಿ ಕೃಷ್ಣನ ಕುರುಹುಗಳನ್ನ ಹುಡುಕಿದ್ರು.

ಇದನ್ನೂ ವೀಕ್ಷಿಸಿ:  Siddaramaiah: ಜೆಡಿಎಸ್ ಅಭ್ಯರ್ಥಿ ಗೆಲ್ಲಲು 45 ಮತಗಳಿಲ್ಲ, ಆತ್ಮಸಾಕ್ಷಿ ಅಂತಾರಲ್ಲ, ಆತ್ಮಸಾಕ್ಷಿ ಅನ್ನೋ ಮತ ಇದ್ಯಾ ?: ಸಿಎಂ

Video Top Stories