ಅತ್ತೆಯನ್ನ ಮುಗಿಸಿ ಸೆಲೆಬ್ರೇಷನ್‌ಗೆ ಗೋವಾಗೆ ಹೋದ..! ವಾರದ ನಂತರ ಸಿಕ್ಕಿತ್ತು ತಲೆ ಬುರುಡೆ..!

ಅವಳನ್ನ ಮುಗಿಸಲು ಎಂಥಹ ಪ್ಲಾನ್ ಮಾಡಿದ್ದ ಗೊತ್ತಾ?
ತಾಯಿಯಂತೆ ಸಾಕಿದವಳನ್ನೇ ಕೊಂದುಬಿಟ್ಟ ಪಾಪಿ..!
ತಮಿಳು ನಾಡಿಗೆ ಹೋಗಿ ಪೆಟ್ರೋಲ್ ತಂದು ಸುಟ್ಟುಬಿಟ್ಟ!
 

First Published Feb 29, 2024, 5:17 PM IST | Last Updated Feb 29, 2024, 5:17 PM IST

ಅದು ಸುಂದರ ಕುಟುಂಬ. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಗಂಡ ಕಾರ್ಖಾನೆಯಲ್ಲಿ ದುಡಿದು ಬಂದ್ರೆ ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇದ್ದಳು. ಆದ್ರೆ ಒಬ್ಬನ ಸಂಪಾದನೆ ಮನೆ ನಡೆಸಲು ಕಷ್ಟವಾಗ್ತಿದೆ ಅನ್ನಿಸಿದಾಗ ಹೆಂಡತಿ(Wife) ಕೂಡ ಕೆಲಸಕ್ಕೆ ಹೋಗುವ ನಿರ್ಧಾರ ಮಾಡಿದ್ಲು. ಅದರಂತೆ ಆವತ್ತು ಮೊದಲ ಬಾರಿಗೆ ಆಕೆ ಕೆಲಸಕ್ಕೆ ಅಂತ ಮನೆಯ ಹೊಸ್ತಿಲು ದಾಟಿದ್ಲು. ಆದ್ರೆ ಕೆಲಸಕ್ಕೆ ಅಂತ ಹೋದವಳು ವಾಪಸ್ ಬರಲೇ ಇಲ್ಲ. ರಾತ್ರಿಯೆಲ್ಲ ಹುಡುಕಾಡಿದ್ರು ಅವಳ ಸುಳಿವು ಸಿಕ್ಕಿರಲಿಲ್ಲ. ಪೊಲೀಸ್(Police) ಕಂಪ್ಲೆಂಟ್ ಆಯ್ತು. ಆದ್ರೂ ಯಾವುದೇ ಪ್ರಯೋಜನವಾಗೋದಿಲ್ಲ. ಆದ್ರೆ ಆಕೆ ನಾಪತ್ತೆಯಾಗಿ ಮೂರು ವಾರಗಳ ನಂತರ ಅವಳ ತಲೆಬುರುಡೆ ಸಿಕ್ಕಿತ್ತು. ಸರಿಯಾಗಿ ವರ್ಕ್ ಮಾಡಿದ ಮೇಲೆ ಜಸ್ವಂತ್ ತನ್ನ ಅತ್ತೆಯನ್ನ ಕೊಂದಿರೋದಾಗಿ(Murder) ಹೇಳಿದ್ದ. ಈ ಮೂಲಕ ಒಂದು ಮಿಸ್ಸಿಂಗ್ ಕೇಸ್‌ಗೆ ಮೇಜರ್ ಟ್ವಿಸ್ಟ್ ಸಿಕ್ಕಿತ್ತು. ಅವನು ಪಕ್ಕಾ ಕಳ್ಳ. ಅಪ್ಪ ತೀರಿಹೋಗಿದ್ದ. ಅಮ್ಮ ಕಣ್ಣು ಕಾಣದವಳು. ಇವನ ಜವಬ್ದಾರಿಯನ್ನ ಅತ್ತೆ ಮಾವನೇ ತೆಗೆದುಕೊಂಡಿದ್ರು. ಸ್ವಂತ ಮಗನ ಹಾಗೆ ಆರೈಕೆ ಮಾಡಿದ್ರು. ದೂರದ ಆಂಧ್ರದಲ್ಲಿ ಬಿಟೆಕ್ ಓದುತ್ತಿದ್ದ ಈತನ ಮೇಲೆ ಬೈಕ್ ಕಳ್ಳತನದ ಕೇಸ್‌ಗಳು ಇವೆ. ಆದ್ರೆ ಆಗ್ಗಾಗೆ ಅತ್ತೆ ಮನೆಗೆ ಬಂದು ಹೋಗ್ತಿದ್ದ. ಬಂದಾಗಲೆಲ್ಲಾ ಅತ್ತೆ ಖರ್ಚಿಗೆ ದುಡ್ಡು ಕೊಟ್ಟು ಕಳಿಸುತ್ತಿದ್ದಳು..ಆದ್ರೆ ಈ ಬಾರಿ ಗೋವಾ ಟ್ರಿಪ್ಗೆ(Trip) ಹಣ ಬೇಕಿತ್ತು. ಅತ್ತೆ ಕೊಡಲ್ಲ ಅಂದಳು. ಆಗ ಅವನ ಕಣ್ಣಿಗೆ ಬಿದ್ದಿದ್ದೆ ಅವಳ ಮಾಂಗಲ್ಯ ಸರದ ಮೇಲೆ.. ಅದನ್ನ ಕೊಡೋದಕ್ಕೆ ಅತ್ತೆ ಒಪ್ಪದಿದ್ದಾಗ ಅವಳನ್ನ ಕೊಂದಾದ್ರೂ ಸರಿ ಅವಳ ಸರ ಪಡಿಯಬೇಕು ಅಂತ ಡಿಸೈಡ್ ಮಾಡಿ ಆಂಧ್ರದಿಂದ ಒಂದು ಕಾರ್ ಬಾಡಿಗೆಗೆ ಪಡೆದು ಹೊಸ್ಸೂರಿನಿಂದ ಪೆಟ್ರೋಲ್ ಖರೀಧಿಸಿ ಆಕೆ ಕೆಲಸ ಮಾಡ್ತಿದ್ದ ಅಪಾರ್ಟ್ಮೆಂಟ್ ಕಡೆಗೆ ಹೊರಟೇಬಿಟ್ಟ. ಸದ್ಯ ಪೊಲೀಶರು ಜಸ್ವಂತ್ ವಿಚಾರಣೆ ಮಾಡಿ ಜೈಲಿಗೆ ಬಿಟ್ಟಿ ಬಂದಿದ್ದಾರೆ.

ಇದನ್ನೂ ವೀಕ್ಷಿಸಿ:  ಪ್ರಿಯಾಂಕ್ ಖರ್ಗೆ ನೋಡಿದ್ರೆ ಪಾಪ ಅನಿಸುತ್ತೆ, ಮಂತ್ರಿಯಾದ್ರೂ ಎದುರಿಸಲು ತಾಕತ್ತಿಲ್ಲ: ಚಕ್ರವರ್ತಿ ಸೂಲಿಬೆಲೆ

Video Top Stories