Asianet Suvarna News Asianet Suvarna News

ಪ್ರಿಯಾಂಕ್ ಖರ್ಗೆ ನೋಡಿದ್ರೆ ಪಾಪ ಅನಿಸುತ್ತೆ, ಮಂತ್ರಿಯಾದ್ರೂ ಎದುರಿಸಲು ತಾಕತ್ತಿಲ್ಲ: ಚಕ್ರವರ್ತಿ ಸೂಲಿಬೆಲೆ

‘ಅವರು ಹೀಗೇ ಮಾಡುತ್ತಾರೆಂದು ನನಗೆ ಗೊತ್ತಿತ್ತು’
‘ಅವರ ಮನಸ್ಸಿನಲ್ಲಿ ಹೆದರಿಕೆ ಇರೋದು ಗೊತ್ತಿದೆ’
ಪ್ರಿಯಾಂಕ್ ಖರ್ಗೆ ವಿರುದ್ಧ ಸೂಲಿಬೆಲೆ ವಾಗ್ದಾಳಿ

ಕಲಬುರಗಿ: ಜಿಲ್ಲೆಗೆ ಪ್ರವೇಶಿಸದಂತೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆಗೆ(Chakravarti Sulibele) ನಿರ್ಬಂಧ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ರಾತ್ರಿ 11 ಗಂಟೆಗೆ ಕಾರ್ಯಕ್ರಮದ ನಿಷೇಧಿಸಿದ್ದು ಹಾಸ್ಯಾಸ್ಪದವಾಗಿದೆ. ಅವರು ಹೀಗೆ ಮಾಡುತ್ತಾರೆಂದು ನನಗೆ ಗೊತ್ತಿತ್ತು. ಪ್ರಿಯಾಂಕ್ ಖರ್ಗೆಗೆ ಯಾವ ರೀತಿಯ ಹೆದರಿಕೆ ಇರಬಹುದು. ಅವರ ಮನಸ್ಸಿನಲ್ಲಿ ಹೆದರಿಕೆ ಇರೋದು ಗೊತ್ತಿದೆ. ಪ್ರಿಯಾಂಕ್ ಖರ್ಗೆ ನೋಡಿದರೆ ಪಾಪ ಅನಿಸುತ್ತೆ. ಮಂತ್ರಿಯಾಗಿದ್ರೂ ಎದುರಿಸಲು ತಾಕತ್ತು ಇಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದರು. ಕಲಬುರಗಿ(Kalaburagi) ಪೊಲೀಸರ ಬಗ್ಗೆ ಅನುಕಂಪ ಹುಟ್ಟುತ್ತದೆ. ಇಡೀ ರಾಜ್ಯದಲ್ಲಿ ಎಲ್ಲೂ ಶಾಂತಿ ಭಂಗ ಆಗಿಲ್ಲ. ಚಿತ್ತಾಪುರದಲ್ಲಿ ಮಾತ್ರ ಯಾಕೆ ಶಾಂತಿ ಭಂಗ ಆಗುತ್ತದೆ?. ಪ್ರಿಯಾಂಕ್ ಖರ್ಗೆಗೆ ಕ್ಷೇತ್ರದಲ್ಲಿ ಸತ್ಯ ಎದುರಿಸಲು ಆಗಿಲ್ಲ. ಹೇಡಿತನದಿಂದ ಮುಖಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಯಾವತ್ತೂ ಎದುರಿಗೆ ಬರಲ್ಲ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಸೂಲಿಬೆಲೆ  ವಾಗ್ದಾಳಿ ನಡೆಸಿದರು.

ಇದನ್ನೂ ವೀಕ್ಷಿಸಿ:  ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ..ಮಹಿಳೆ ವಿವಸ್ತ್ರಗೊಳಿಸಿ ನಡುರಸ್ತೆಯಲ್ಲೇ ಹಲ್ಲೆ !

Video Top Stories