ಅಪ್ಪ ಮಗನನ್ನ ಕೊಂದರೆ.. ಇಲ್ಲಿ ಮಗ ತಾಯಿಯನ್ನ ಮುಗಿಸಿದ..!

ಹುಟ್ಟಿಸಿದ ಅಪ್ಪನೇ ಮಗನ ಕತ್ತು ಸೀಳಿದ..!
ರಕ್ತ ನೋಡಲು ಚಾಕು ಕಾದಿದ್ದು 63 ವರ್ಷ..!
ನಿದ್ದೆಯಿಂದ ಎಚ್ಚರಿಸಿದಕ್ಕೇ ಕೊಲೆ ಮಾಡೋದಾ?
 

First Published Nov 3, 2023, 2:19 PM IST | Last Updated Nov 3, 2023, 2:19 PM IST

ಸಂಬಂಧ ಅಂದ್ರೆ ಅಲ್ಲಿ ಪ್ರೀತಿಯೂ ಇರುತ್ತೆ, ಜಗಳವೂ ಇರುತ್ತೆ. ಅದರ ಜೊತೆಗೆ ಕ್ರೌರ್ಯ, ಕ್ರೈಂ ಕೂಡ ಇರುತ್ತೆ. ಆದ್ರೆ ಅದಕ್ಕೆಲ್ಲಾ ಒಂದು ಮಿತಿ ಇರಬೇಕು. ಅಲ್ಲೊಬ್ಬ ಅಪ್ಪ(Father) ಅತೀ ಕ್ಷುಲ್ಲಕ ಕಾರಣಕ್ಕೆ ಮಗನನ್ನು(SOn) ಕೊಂದ್ರೆ, ಮತ್ತೊಬ್ಬ ಕಡುಪಾಪಿ ಮಗ ಹೀನಾತಿ ಹೀನ ಕೃತ್ಯವನ್ನು ಎಸಗಿ ಜೈಲು ಸೇರಿದ್ದಾನೆ. ಇಲ್ಲೊಬ್ಬ ಅಪ್ಪ ಮಗನನ್ನೇ ಕೊಂದು(Murder) ಹಾಕಿದ್ದಾನೆ. ಅದೂ ಕೂಡ ಮಲಗಿದ್ದವನನ್ನ ಮಗ ಎಚ್ಚರಿಸಿಬಿಟ್ಟ ಅಂತ. ಕೋಪದಲ್ಲಿ ಮೂಗು ಕೊಯ್ದುಕೊಂಡರೆ ಮತ್ತೆ ಬರುತ್ತಾ..? ಈಗ ಮಗನನ್ನೇ ಕೊಂದ ಕೃಷ್ಣಯ್ಯ ಜೈಲು ಸೇರಿದ್ದಾನೆ. ಒಂದು ಕಡೆ ಸಹೋದರನ ಸಾವು. ಮತ್ತೊಂದು ಕಡೆ ಅಪ್ಪನನ್ನು ಪೊಲೀಸರು ಕರೆದುಕೊಂಡು ಹೋಗಿರೋದು ಆ ಕುಟುಂಬವನ್ನ ಕಣ್ಣೀರನಲ್ಲಿ ಮುಳುಗುವಂತೆ ಮಾಡಿದೆ. ಇನ್ನೂ ಇಲ್ಲಿ ಹುಟ್ಟಿಸಿದ ಅಪ್ಪನೇ ಮಗನ ಕತ್ತು ಸೀಳಿದ್ರೆ ಅಲ್ಲೊಬ್ಬ ಸೈಕೋ ತಾಯಿಯನ್ನೇ(Mother) ಮುಗಿಸಿದ್ದಾನೆ.ಇಲ್ಲೊಬ್ಬ  ತನ್ನನ್ನು ಹೆತ್ತು ಹೊತ್ತು ಸಾಕಿ ಬೆಳೆಸಿದ ತಾಯಿಯನ್ನೆ ಕೊಂದು ಹಾಕಿದ್ದಾನೆ. ಆದ್ರೆ ಕೊಲೆಗೆ ಕಾರಣ ಕೇಳಿದ್ರೆ ಇಂಥವರೂ ಭೂಮಿ ಮೇಲೆ ಇರ್ತಾರ ಅಂತ ಅಂದುಕೊಳ್ತೀರಾ. ಸೈಕೋ ಕಾಮುಕನ್ನಾಗಿದ್ದ ಮಗ ತನ್ನ ಕಾಮ ದಾಹವನ್ನ ತೀರಿಸಿಕೊಳ್ಳಲು ತನ್ನ ತಾಯಿಯೇ ಮೇಲೆಯೇ ಎರಗಿಬಿಟ್ಟಿದ್ದಾನೆ. ಆದ್ರೆ ತಾಯಿ ತಿರಸ್ಕರಿಸಿದಕ್ಕೆ ಅವಳ ಕತ್ತು ಹಿಸುಕಿ ಕೊಂದೇ ಬಿಟ್ಟಿದ್ದಾನೆ. ಸದ್ಯ ಈ ಎರಡು ಘಟನೆಯಿಂದ ಮಾನವೀಯ ನೆಲೆಗಟ್ಟಿನಲ್ಲಿ ಯೋಚಿಸುವವರು ಆಘಾತಕ್ಕೆ ಒಳಗಾಗಿದ್ದಾರೆ. ಇವೆರಡು ಘಟನೆ ರಕ್ತ ಸಂಬಂಧಗಳಿಗೆ ಜನರು ಕೊಡುವ ಬೆಲೆಯ ಬಗ್ಗೆ ಪ್ರಶ್ನೆ ಮಾಡುವಂತಿದೆ.

ಇದನ್ನೂ ವೀಕ್ಷಿಸಿ:  ಬರದ ನಡುವೆ ನಿಲ್ಲದ ಶಾಸಕರ ವಿದೇಶ ಪ್ರವಾಸ: ಗೆದ್ದ 5 ತಿಂಗಳಲ್ಲಿ 3ನೇ ಬಾರಿ ವಿದೇಶಕ್ಕೆ ದರ್ಶನ್ ಪುಟ್ಟಣ್ಣಯ್ಯ