Mysore Murder News: ಫ್ಲೆಕ್ಸ್ ವಿಚಾರವೊಂದೇ ಕೊಲೆಗೆ ಕಾರಣವಾಗಿಬಿಡ್ತಾ? ಇದನ್ನ ತೆಗೆಸಿದ್ದಕ್ಕೆ ಅಕ್ಮಲ್‌ ಟಾರ್ಗೆಟ್ ಮಾಡಿದ್ರಾ?

ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಲ್ತಾಫ್
ಎಸ್‌ಡಿಪಿಐ ನಾಯಕನ ಕೊಲೆಯಲ್ಲಿ ಅಲ್ತಾಫ್ ಹೆಸರು..!
ಐವರ ವಿರುದ್ಧ ದೂರು ದಾಖಲಿಸಿದ ಅಕ್ಮಲ್ ಹೆಂಡತಿ..!

First Published Mar 10, 2024, 4:53 PM IST | Last Updated Mar 10, 2024, 4:54 PM IST

ಅವನು ಮೌಲ್ವಿ. ದರ್ಗಾದಲ್ಲಿ ಸೇವೆ ಮಾಡಿಕೊಂಡು, ಜೀವನ ಮಾಡ್ತಿದ್ರು. ಅಷ್ಟೇ ಅಲ್ಲ SDPI ಪಕ್ಷದಲ್ಲಿ ಗುರುತಿಸಿಕೊಂಡಿದ್ರು. ಅಣ್ಣ ಕಾಂಗ್ರೆಸ್ ಕಾರ್ಪೋರೇಟರ್ ಆದ್ರೂ ಈತ ಮಾತ್ರ ಬೇರೆ ಪಕ್ಷದಲ್ಲಿ ದುಡಿಯುತ್ತಿದ್ದ. ಇಂಥವನು ಆವತ್ತು ನಮಾಜ್ ಮಾಡಿ ವಾಪಸ್ ಮನೆಗೆ ಹೋಗುವಾಗ ಬರ್ಬವಾಗಿ ಮರ್ಡರ್(Murder) ಆಗಿಬಿಟ್ಟ. ನಡುರಸ್ತೆಯಲ್ಲೇ ಅವನನ್ನ ಕೊಚ್ಚಿ ಕೊಚ್ಚಿ ಕೊಂದುಬಿಟ್ಟಿದ್ರು. ಇನ್ನೂ ಇದೇ ಕೇಸ್‌ನ ತನಿಖೆಗಿಳಿದ ಪೊಲೀಸರಿಗೆ ಅಲ್ಲಿ ಕೇಳಿ ಬಂದಿದ್ದು ಅಲ್ಪ ಸಂಖ್ಯಾತ ನಿಗಮದ ರಾಜ್ಯಧ್ಯಕ್ಷನ ಹೆಸರು. ಮೌಲ್ವಿ(Maulvi) ಕೊಲೆಯಲ್ಲಿ ಮುಸ್ಲಿಂ ಮುಖಂಡ, ಅಲ್ಪ ಸಂಖ್ಯಾತ ನಿಗಮದ ಅರ್ಧಯಕ್ಷ ಅಲ್ತಾಫ್ ಹೆಸರು ಕೆಳಿ ಬರ್ತಿದೆ. ಮೌಲ್ವಿ ಅಕ್ಮಲ್ ಕೊಲೆಯಾಗೋದಕ್ಕೂ ಮೂರು ದಿನಗಳ ಮುನ್ನ ಅಲ್ಪ ಸಂಖ್ಯಾತ ನಿಗಮದ ಅಧ್ಯಕ್ಷ ಅಲ್ತಾಫ್ ಮೈಸೂರಿಗೆ(Mysore) ಭೇಟಿ ಕೊಟ್ಟಿದ್ದರು. ಆದ್ರೆ ಅವರ ವೆಲ್ಕಮ್ಗಾಗಿ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ಫ್ಲೆಕ್ಸ್ಗಳನ್ನ ಏರಿಯಾದ ಮೂಲೆ ಮೂಲೆಗಳಲ್ಲೂ ಕಟ್ಟಿದ್ರು. ಇದು ಅಕ್ಮಲ್ನ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು. ಅಧಿಕಾರಿಗಳಿಗೆ ಕಂಪ್ಲೆಂಟ್(Complaint) ಕೊಟ್ಟು ಫ್ಲೆಕ್ಸ್‌ಗಳನ್ನ ತೆರವು ಗೊಳಿಸಿದ್ರು. ನಂತರ ಇದೇ ವಿಷಯಕ್ಕೆ ಅಲ್ಲಿನ ಲೋಕಲ್ ಕಾರ್ಪೋರೇಟರ್ ಜೊತೆ ಜಗಳ ನಡೆಯಿತು. ಆದ್ರೆ ಇದೇ ಫ್ಲೆಕ್ಸ್ ಗಲಾಟೆ ಅಕ್ಮಲ್ನ ಹೆಣ ಉರುಳಿಸಿದೆ ಅನ್ನೋದು ಅಕ್ಮಲ್ ಹೆಂಡತಿಯ ಆರೋಪ. ಕೇವಲ ಒಂದು ಫ್ಲೆಕ್ಸ್ ವಿಚಾರಕ್ಕೆ ಒಬ್ಬನ ಪ್ರಾಣ ತೆಗೆಯುತ್ತಾರೆ ಅದರಲ್ಲೂ ರಾಜಕೀಯ ಮುಖಂಡರು ಈ ಕೃತ್ಯವೆಸಗುತ್ತಾರೆ ಅಂತ ಅನಿಸೋದಿಲ್ಲ. ಇಲ್ಲ ಸಂಥಿಂಗ್ ಬೇರೆ ಏನೋ ಇರಬೇಕು.

ಇದನ್ನೂ ವೀಕ್ಷಿಸಿ:  BJP Protest: ಬಿಜೆಪಿಗರಿಗೆ ಮಾನ, ಮಾರ್ಯಾದೆ ಇದ್ದರೇ, ಬರ ಪರಿಹಾರ ಕೊಡಿಸಿ ಧರಣಿ ಮಾಡಲಿ: ಡಿಕೆ ಶಿವಕುಮಾರ್‌