Asianet Suvarna News Asianet Suvarna News

ಉಂಡ ಮನೆಗೆ ಕನ್ನ ಬಗೆದ ಕಿರಾತಕರು..! 30 ಸಾವಿರ ಹಣಕ್ಕಾಗಿ ಧಣಿಯನ್ನೇ ಕೊಂದ ಪಾಪಿಗಳು !

ಹೆಣ ಹಾಕಿ ಮನೆಗೆ ಬಂದು ನಾಟಕ ಮಾಡಿದ ಆರೋಪಿಗಳು
ಕೊಲೆ ಮಾಡಿ ಮನೆಯವರೊಂದಿಗೆ ಶವ ಹುಡುಕಾಡಿದ್ರು ! 
30 ಸಾವಿರ ಹಣಕ್ಕಾಗಿ ಧಣಿಯನ್ನೇ ಕೊಂದ ಪಾಪಿಗಳು !

ಅವನು ಪಕ್ಕಾ ಬ್ಯುಸಿನೆಸ್ ಮ್ಯಾನ್. 2 ಟ್ರಾಕ್ಟರ್ ಇಟ್ಟುಕೊಂಡು. ಮೂರ್ನಾಲಕ್ಕು ಆಳುಗಳಿಗೆ ಸಂಬಳಕಟ್ಟಿಕೊಂಡು ಜೀವನ ಮಾಡ್ತಿದ್ದ. ಆತ ತನ್ನ ವ್ಯವಹಾರದ ಬಗ್ಗೆ ಎಷ್ಟು ತಲೆಕೆಡಸಿಕೊಂಡಿದ್ದ ಅಂದ್ರೆ ಅದಕ್ಕಾಗಿ ಹೆಂಡತಿ ಮಕ್ಕಳನ್ನ ಬಿಟ್ಟು ಬೇರೆ ಮನೆಯಲ್ಲಿ ವಾಸ ಮಾಡ್ತಿದ್ದ. ಆದ್ರೆ ಆವತ್ತೊಂದು ದಿನ ಇದೇ ಮನುಷ್ಯ ನಾಪತ್ತೆಯಾಗಿಬಿಟ್ಟಿದ್ದ. ಎಲ್ಲಿ ಹುಡುಕಿದ್ರೂ ಸಿಗೋದೇ ಇಲ್ಲ. ಆತ ಕಾಣೆಯಾಗಿ ಎರಡು ದಿನದ ನಂತರ ಆತನ ಮನೆಗೆ ವಿಷ್ಯ ಗೊತ್ತಾಗುತ್ತೆ. ಪೊಲೀಸರ (Police) ಬಳಿ ಹೋಗಿ ಕಂಪ್ಲೆಂಟ್ ಕೊಡುವ ಹೊತ್ತಿಗೆ ಮಿಸ್ಸಿಂಗ್ ಆದವನು ಕೊಲೆಯಾಗಿರರೋ ವಿಷ್ಯ ಗೊತ್ತಾಗುತ್ತೆ. ಅಲ್ಲಿ ಸಿಕ್ಕ ಅನಾಥ ಶವ ಯಾರದ್ದು ಅನ್ನೋದು ಗೊತ್ತಾಯ್ತು. ಆದ್ರೆ ನೆಕ್ಸ್ಟ್ ಟಾಸ್ಕ್ ಆತ ಕೊಲೆಯಾಗಿದ್ದು(Murder) ಯಾಕೆ..? ಕೊಂದವರು ಯಾರು ಅನ್ನೋದನ್ನ ಪತ್ತೆ ಹಚ್ಚೋದು. ಆದ್ರೆ ಹಂತಕರನ್ನ ಪತ್ತೆ ಮಾಡೋದು ಪೊಲೀಸರಿಗೆ ಅವನ ಗುರುತು ಸಿಗುವಷ್ಟು ಕಷ್ಟ ವಾಗೋದಿಲ್ಲ. ಕಾರಣ ಹಂತಕರು ಕೊಲೆಯಾದ ಅಶೋಕನ ಮನೆಯಲ್ಲೇ ಇದ್ರು. ಅವರು ತಿಂದ ಮನೆಗೇ ಕನ್ನ ಹಾಕಿದ್ರು ಅಷ್ಟೇ ಅಲ್ಲ ತಮ್ಮ ಧಣಿಯನ್ನೇ ಮುಗಿಸಿಬಿಟ್ಟಿದ್ರು. ಕಿರಣ್, ಗುಂಡಪ್ಪ, ನಿರಂಜನ್ ಮೂವರು ಸೇರಿಯೇ ಅಶೋಕನ ಕಥೆ ಮುಗಿಸಿದ್ರು. ಅದನ್ನ ಪೊಲೀಸರ ಮುಂದೆ ಒಪ್ಪಿಕೊಂಡಿದ್ರು. ಮನೆ ಮಕ್ಕಳಿಗಿಂತ ಹೆಚ್ಚಾಗಿ ಆತ ಆ ಮೂವರನ್ನ ನೋಡಿಕೊಂಡಿದ್ದ. ದಿನಕ್ಕೆ 500 ರೂಪಾಯಿ ಕೂಲಿ ಜೊತೆಗೆ ಊಟ, ಎಣ್ಣೆ ಎಲ್ಲವನ್ನೂ ನೋಡಿಕೊಳ್ತಿದ್ದ. ಸಾಲದು ಅಂತ ಸಾಲವನ್ನೂ ಕೊಟ್ಟಿದ್ದ. ಆದ್ರೆ ಮಕ್ಕಳಂತೆ ನೋಡಿಕೊಂಡಿದ್ದ ಧಣಿ ಮೇಲೆಯೇ ಈ ಕಿರಾತಕರು ಕಣ್ಣು ಹಾಕಿಬಿಟ್ರು. ಅವನ ಕಥೆ ಮುಗಿಸಿ ನಂತರ ತಮಗೇನೂ ಗೊತ್ತೇ ಇಲ್ಲದಂತೆ ನಾಟಕವಾಡಿಬಿಟ್ಟಿದ್ರು. ಆದರೆ ಅವರ ನಾಟಕವೇ ಪೊಲೀಸರಿಗೆ ಅನುಮಾನ ಬರುವಂತೆ ಮಾಡಿತ್ತು.

ಇದನ್ನೂ ವೀಕ್ಷಿಸಿ:  ತ್ರಿಶತ್ರು ಸಂಹಾರಕ್ಕೆ ಸಿದ್ಧವಾಗಿದೆ ಭಾರತದ ಅಸ್ತ್ರ! ಶತ್ರುವಿನ ಶತ್ರು ಜೊತೆ ಪಾಕ್ ಮಹಾಮೈತ್ರಿ!