ಸಾಲ ವಾಪಸ್ ಕೇಳಲು ಹೋದವನಿಗೆ ಮಚ್ಚಿನೇಟು..! ಅವನನ್ನ ಮುಗಿಸಲು ಆಕೆ ಮಾಡಿದ ಪ್ಲ್ಯಾನ್‌ ಏನ್‌ ಗೊತ್ತಾ ?

ಅವನ ಹೆಣ ಹಾಕಿ ಅವನ ಮೇಲೆಯೇ ಕಂಪ್ಲೆಂಟ್ ಕೊಟ್ಟಳು..!
ಕಷ್ಟ ಅಂತ ಬಂದಾಗ ಸಹಾಯ ಮಾಡಿದ್ದೇ ತಪ್ಪಾಗಿಹೊಯ್ತು..!
10 ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ನವೀನ..!

Share this Video
  • FB
  • Linkdin
  • Whatsapp

ಅವನು ಆ ಊರಿನ ಶ್ರೀಮಂತ ಅಡಿಕೆ ಬೆಳೆಗಾರ, ಮನೆಯಲ್ಲಿ ಅಪ್ಪ ಅಮ್ಮ, ಹೆಂಡತಿ ಮತ್ತು ಇಬ್ಬರು ಮಕ್ಕಳು ಇನ್ನೇನು ಬೇಕು ಆ ಜೀವಕ್ಕೆ. ಆದ್ರೆ ಸುಮ್ಮನೆ ಅಡಿಕೆ ಮಾರಿದ ದುಡ್ಡು ಹಿಡ್ಕೊಂಡು ಜೀವನ ಮಾಡಿದಿದ್ರೆ ಆತ ಇವತ್ತು ಜೀವಂತವಾಗಿರುತ್ತಿದ್ದ. ಆದ್ರೆ ಆತ ಅಡಿಕೆ ತೋಟದಲ್ಲಿ(Arecanut plantation) ಬಂದ ಲಾಭದ ಹಣದಲ್ಲಿ ಬಡ್ಡಿ(Interest) ವ್ಯವಹಾರ ನಡೆಸುತ್ತಿದ್ದ. ಅದೇ ಬಡ್ಡಿ ದುಡ್ಡು ಇವತ್ತು ಅವನ ಪ್ರಾಣವನ್ನೇ ತೆಗೆದಿದೆ. ಪಡೆದ ಹಣ ವಾಪಸ್ ಕೊಡೊಬದಲು ಹಂತಕರು ಅವನ ಹೆಣವನ್ನೇ ಹಾಕಿಬಿಟ್ಟಿದ್ದಾರೆ. ಮಾದರಿ ಕುಟುಂಬ ಅನ್ನಿಸಿಕೊಂಡಿದ್ದ ಕುಟುಂಬದಲ್ಲೇ ಹೆಣಬಿದ್ದಿತ್ತು. ಇನ್ನೂ ಹೆಣ ಹಾಕಿದವರು ಅದೇ ಗ್ರಾಮದಲ್ಲಿದ್ದ ಒಬ್ಬ ಕಿರಾತಕಿ. ನವೀನ ಆ ಮಹಿಳೆಗೆ 5 ಲಕ್ಷ ಹಣವನ್ನ ಬಡ್ಡಿಗೆ ಕೊಟ್ಟಿದ್ದ. ಎರಡು ವರ್ಷದ ಹಿಂದೆ ಮನೆ ಕಟ್ಟಲು ಸಾಲ ಮಾಡಿದ್ದ ಆ ಮಹಿಳೆ ಒಂದು ವರ್ಷ ನಿಯತ್ತಾಗಿ ಬಡ್ಡಿ ಕಟ್ಟಿದ್ಲು. ಆದ್ರೆ ವರ್ಷದ ನಂತರ ಇಡೀ ಗ್ರಾಮದಲ್ಲಿ ಒಂದು ಗುಸುಗುಸು ಶುರುವಾಯ್ತು. ಅದೇನಂದ್ರೆ ಆ ಮಹಿಳೆಗೂ(Woman) ನವೀನನಿಗೂ ಅಕ್ರಮ ಸಂಬಂಧ ಇದೆ ಅಂತ. ಯಾವಾಗ ಗ್ರಾಮದಲ್ಲಿ ಈ ಮಾತುಗಳು ಹರಡೋದಕ್ಕೆ ಶುರುವಾಯ್ತೋ ಆಕೆ ಬಡ್ಡಿ ಹಣ ಕೊಡೋದನ್ನ ನಿಲ್ಲಿಸಿಬಿಟ್ಟಿದ್ಲು. ಒಂದು ವರ್ಷ ಹಣಕ್ಕಾಗಿ ನವೀನನ್ನ ಸತಾಯಿಸಿದ್ಲು. ಆದ್ರೆ ಇತ್ತಿಚೆಗೆ ನವೀನ ಹಣ(Money) ಬೇಕೆ ಬೇಕು ಅಂತ ಪಟ್ಟು ಹಿಡಿದಿದ್ದ. ಈಕೆ ಮಾತ್ರ ಅವನನ್ನೇ ಮುಗಿಸ್ತೀನೇ (Murder) ಹೊರೆತು ದುಡ್ಡು ಕೊಡೋದಿಲ್ಲ ಅನ್ನೋ ನಿರ್ಧಾರ ಮಾಡಿದ್ಲು.. ಪಕ್ಕದಲ್ಲೇ ಇದ್ದ ತನ್ನ ಸಂಬಂಧಿಕನನ್ನ ಕರೆಸಿಕೊಂಡು ಒಂದು ಪಕ್ಕಾ ಪ್ಲಾನ್ ರೆಡಿ ಮಾಡಿದ್ಲು. ಸಹಾಯ ಅಂತ ಬೇಡಿ ಬಂದಾಗ ಜ್ಯೋತಿಗೆ ನವೀನ ಲಕ್ಷ ಲಕ್ಷ ಹಣ ಕೊಟ್ಟಿದ್ದ. ಆದ್ರೆ ಅದೇ ವಾಪಸ್ ಕೊಡು ಅಂದಾಗ ಅವನನ್ನೇ ಮುಗಿಸಿಬಿಟ್ಟಳು ಈ ಕಿಲ್ಲರ್ ಲೇಡಿ ಕೊಲೆ ಮಾಡಿದ್ದಾಳೆ.

Related Video