
ಅವನನ್ನ ಮುಗಿಸಲು ಟಾಯ್ಲೆಟ್‌ನಲ್ಲಿ ಅಡಗಿದ್ರು..! ಮನೆ ಕಟ್ಟಿದ್ದೇ ತಪ್ಪಾಗಿ ಹೊಯ್ತಾ..?
2 ವರ್ಷದ ದ್ವೇಷ ಕೊಲೆಯಲ್ಲಿ ಅಂತ್ಯ..!
ಮನೆಯನ್ನು ಕಟ್ಟಿದ್ದೇ ತಪ್ಪಾಗಿ ಹೊಯ್ತಾ?
ಪಕ್ಕದ ಮನೆಯಲ್ಲೇ ಇದ್ರು ಹಂತಕರು..!
ಅದೊಂದು ಸಂದರ ಕುಟುಂಬ, ಗಂಡ ಹೆಂಡತಿ ಇಬ್ಬರು ಪುಟ್ಟ ಮಕ್ಕಳು. ಕಷ್ಟಪಟ್ಟು ಹಣ ಸಂಪಾದಿಸಿ ಬೆಂಗಳೂರಿನಲ್ಲಿ(Bengaluru) ಒಂದು ಮನೆ(House)ಮಾಡಿಕೊಳ್ಳಬೇಕು ಅಂತ ಕನಸು ಕಂಡಿದ್ರು. ಇನ್ನೇನು ಅವರ ಕನಸು ನನಸ್ಸಾಗಬೇಕು, ಅಷ್ಟರಲ್ಲೇ ಆ ಮನೆಯ ಒಡೆಯ ಹೆಣವಾಗಿಬಿಡ್ತಾನೆ. ತನ್ನ ಕನಸಿನ ಮನೆಯ ಎದುರಲ್ಲೇ ಅವನನ್ನ ಕೊಚ್ಚಿ ಕೊಚ್ಚಿ ಹಂತಕರು ಕೊಂದುಬಿಡ್ತಾರೆ(Murder). ನಮ್ಮ ಬೆಂಗಳೂರಿನಲ್ಲಿ ಮನೆ ಕಟ್ಟೋದು ಇರಲಿ, ಒಂದು ಅಡಿ ಜಾಗ ತೆಗೆದುಕೊಳ್ಳೋದಕ್ಕೂ ಆಗದಂತಹ ಪರಿಸ್ಥಿತಿ ಇದೆ. ತುಂಡು ಭೂಮಿಗೂ ಬಂಗಾರಕ್ಕಿಂತಲೂ ಹೆಚ್ಚು ಬೆಲೆಯಾಗಿದೆ. ಗಲ್ಲಿ ಗಲ್ಲಿಗೊಂದು ರಿಯಲ್ ಎಸ್ಟೇಟ್. ಅಷ್ಟೇ ಯಾಕೆ ಒಂದೇ ಒಂದು ಅಡಿ ಜಾಗಕ್ಕೂ ಇಲ್ಲಿ ಹೆಣಗಳು ಉರುಳಿರುವ ಉದಾಹರಣೆ ನಮ್ಮ ಕಣ್ಣು ಮುಂದೆಯೇ ಇವೆ. ಬೆಂಗಳೂರಿನಲ್ಲಿ ಭೂಮಿ ಕೊಳ್ಳೋ ಪರಿಸ್ಥಿತಿ ಹೀಗಿದ್ರೂ ನಮ್ಮ ಜನ ಅದರಲ್ಲೂ ನಮ್ಮಂಥಹ ಮಿಡಿಲ್ ಕ್ಲಾಸ್ ಜನ ಬೆಂಗಳೂರಿನಂತಹ ಮಹಾನಗರದಲ್ಲಿ ಅರ್ಧ ಸೈಟ್ ಆದ್ರೂ ಖರೀಧಿಸಿ ಅಲ್ಲೊಂದು ಪುಟ್ಟ ಮನೆ ಮಾಡಿಕೊಳ್ಳಬೇಕೆಂಬ ಕನಸ್ಸು ಕಟ್ಟಿಕೊಳ್ತಾರೆ. ಆದ್ರೆ ಹೀಗೆ ಮನೆ ಕಟ್ಟಿಕೊಂಡು ಖುಷಿಯಿಂದ ಜೀವನ ನಡೆಸಬೇಕೆಂಬ ಕನಸು ಕಂಡಿದ್ದ ಒಂದು ಕುಟುಂಬ ಇವತ್ತು ಸರ್ವನಾಶವಾಗಿದೆ. ಹೀಗೆ ಕೂಲಿ ಮಾಡಿಕೊಂಡು ತಮ್ಮ ಕನಸಿನ ಮನೆ ಕಟ್ಟಲು ಹೊರಟಿದ್ದ ಕುಟುಂಬದ ಒಡೆಯನೇ ಮಸಣ ಸೇರಿದ್ದಾನೆ.
ಇದನ್ನೂ ವೀಕ್ಷಿಸಿ: ಸಾವನ್ನೇ ಗೆದ್ದು ಬಂದ ವಿದ್ಯಾರ್ಥಿನಿ ಅಶ್ವಿನಿ: ಮಾತು ತಪ್ಪಿದ ಮಹಾರಾಣಿ ವಿವಿ ವಿಸಿ