Asianet Suvarna News Asianet Suvarna News

ಸಾವನ್ನೇ ಗೆದ್ದು ಬಂದ ವಿದ್ಯಾರ್ಥಿನಿ ಅಶ್ವಿನಿ: ಮಾತು ತಪ್ಪಿದ ಮಹಾರಾಣಿ ವಿವಿ ವಿಸಿ

ಅಕ್ಟೋಬರ್ 7 ಅಂದು ಬೆಂಗಳೂರು ಮಹಾರಾಣಿ ಕಾಲೇಜು ಆವರಣದಲ್ಲಿ ಭೀಕರ ಅಪಘಾತವೊಂದು ನಡೆದಿತ್ತು. ಪ್ರೊ.ನಾಗರಾಜು ಕಾರು ಪಾರ್ಕ್ ಮಾಡುವಾಗ ಬ್ರೇಕ್ ಬದಲು ಅಚಾನಕ್ಕಾಗಿ ಌಕ್ಸಿಲೇಟರ್ ಒತ್ತಿದ್ದರು. ಅಂದು ನಡೆದ ಅಪಘಾತದಲ್ಲಿ ಕೊಪ್ಪಳ ಮೂಲದ ವಿದ್ಯಾರ್ಥಿನಿ ಅಶ್ವಿನಿ ಗಾಯಗೊಂಡು ಆಸ್ಪತ್ರೆ ಸೇರಿದ್ರು. 25 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಅಶ್ವಿನಿ ಸಾವು ಗೆದ್ದು ಬಂದಿದ್ದಾರೆ. ಇದೇನೋ ಖುಷಿ ವಿಚಾರ.. ಆದ್ರೆ ವಿದ್ಯಾರ್ಥಿನಿ ಅಶ್ವಿನಿ ಕುಟುಂಬಕ್ಕೆ ಚಿಕಿತ್ಸೆ ವೆಚ್ಚ ಭರಿಸೋದೆ ದೊಡ್ಡ ಸಮಸ್ಯೆಯಾಗಿದೆ.

ಅಪಘಾತದ ವೇಳೆ ಆಸ್ಪತ್ರೆಯ ಎಲ್ಲಾ ಖರ್ಚು ವೆಚ್ಚ ಭರಿಸೋದಾಗಿ ಮಹಾರಾಣಿಯ ವಿವಿಯ(Maharani cluster university) ವಿಸಿ ಹೇಳಿದ್ರಂತೆ. ಆದ್ರೆ ಆರು ಲಕ್ಷ ನೀಡಿದ ವಿವಿ ಇನ್ಮುಂದೆ ಮತ್ತೆ ಹಣ ಕೇಳಬೇಡಿ ಎಂದು ಕಡ್ಡಿ ಮುರಿದಂತೆ ಹೇಳಿದ್ಯಂತೆ ಡಿಸ್ಚಾರ್ಜ್ ಮಾಡಿಸಿಕೊಂಡು  ಸರ್ಕಾರಿ ಆಸ್ಪತ್ರೆಗೆ(Hospital) ದಾಖಲು ಮಾಡಿ ಅಂತ ಹೇಳಿ ಕೈಬಿಟ್ಟಿದ್ದಾರಂತೆ. ಇನ್ನೂ ಅಶ್ವಿನಿ ವೈದ್ಯಕೀಯ ವೆಚ್ಚ ಈಗಾಗಲೇ  12ಲಕ್ಷ ಮುಟ್ಟಿದೆ. ಹೆಚ್ಚಿನ ಹಣ ಹೇಗೆ ಹೊಂದಿಸೋದು ಎನ್ನುತ್ತಿದೆ ಅಶ್ವಿನಿ ಕುಟುಂಬ. ಇನ್ನೊಂದ್ಕಡೆ ಉಜ್ವಲ ಭವಿಷ್ಯದ ಕನಸು ಕಂಡಿದ್ದ ಅಶ್ವಿನಿಯ ಬಲಗಾಲಿಗೆ ಆಪರೇಷನ್ ಮಾಡಿ ರಾಡ್ ಅಳವಡಿಸಲಾಗಿದೆ. ಆ್ಯಕ್ಸಿಡೆಂಟ್ನಿಂದ ಕನಸೆಲ್ಲಾ ನುಚ್ಚುನೂರಾಗಿದೆ ಎಂದು  ವಿದ್ಯಾರ್ಥಿನಿ(Student) ಕಣ್ಣೀರು ಹಾಕುತ್ತಿದ್ದಾಳೆ. ಅಷ್ಟೇ ಅಲ್ಲ ಕಾಲೇಜಿನವರು ಸೌಜನ್ಯಕ್ಕೂ ನನ್ನನ್ನ ನೋಡಲು ಬಂದಿಲ್ಲ, ಚಿಕಿತ್ಸೆ ವೆಚ್ಚ ಹೆಚ್ಚಾಗಿದ್ದು, ನಮ್ಮ ಕುಟುಂಬಕ್ಕೆ ಸಹಾಯ ಮಾಡಿ ಅಂತ ಅಂಗಾಲಾಚುತ್ತಿದ್ದಾಳೆ. ಅಶ್ವಿನಿಗೆ ಬೆಡ್ ರೆಸ್ಟ್ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ..ಈಗಾಗಲೇ ಆಸ್ಪತ್ರೆಗೆ 12 ಲಕ್ಷ ಖರ್ಚು ಮಾಡಿದ್ದು, ಮುಂದಿನ ಟ್ರೀಟ್ಮೆಂಟ್ಗೆ ಹಣ ಹೊಂದಿಸೋದೇ ಕಷ್ಟವಾಗಿದೆ..ಅಶ್ವಿನಿ ಕುಟುಂಬಕ್ಕೆ ಕೊಟ್ಟ ಮಾತಿನಂತೆ ವಿವಿ ನಡೆದುಕೊಳ್ಳಬೇಕಿದೆ.

ಇದನ್ನೂ ವೀಕ್ಷಿಸಿ:  ಅವಳಿನಗರ ಪೊಲೀಸರ ಮುಂದೆ ಚಾಲೆಂಜಿಂಗ್ ಟಾಸ್ಕ್..! ಸಣ್ಣ ಸುಳಿವೂ ಇಲ್ಲದ ಕೇಸ್‌ನಲ್ಲಿ ಖದೀಮರ ಬಂಧಿಸಿದ್ದೇಗೆ..?