ತಾಯಿಯ ಗೆಳೆಯನ ಕಥೆ ಮುಗಿಸಿದ ಮಗ: ತಪ್ಪಿಸಿಕೊಳ್ಳಲು ಆ್ಯಕ್ಸಿಡೆಂಟ್ ಕಥೆ ಕಟ್ಟಿದ್ದ..!

ತಾಯಿಯ ಅನೈತಿಕ ಸಂಬಂಧದಿಂದ ಬೇಸತ್ತ ಮಗ..!
ಆ್ಯಕ್ಸಿಡೆಂಟ್ ಪ್ರಕರಣಕ್ಕೆ ಸಿಗ್ತು ಬಿಗ್ ಟ್ವಿಸ್ಟ್..!
ಆ್ಯಕ್ಸಿಡೆಂಟ್ ಆದ ಜಾಗದಲ್ಲಿ ಸಿಕ್ಕಿತ್ತು ರಕ್ತದ ಕಟ್ಟಿಗೆ..!

First Published Aug 5, 2023, 2:27 PM IST | Last Updated Aug 5, 2023, 2:27 PM IST

ಅವನು ಕೂಲಿ ಕಾರ್ಮಿಕ. ಹೆಂಡತಿ ಮೂರು ಮಕ್ಕಳೊಂದಿಗೆ ನೆಮ್ಮದಿಯಾಗಿ ಜೀವನ ಸಾಗಿಸ್ತಿದ್ದ. ಆದ್ರೆ ಆವತ್ತೊಂದು ದಿನ ಟೈಫಾಯ್ಡ್ ಬಂದಿದ್ದ ಕಾರಣ ಮೆಡಿಕಲ್ ಸ್ಟೋರಿಗೆ ಹೋಗಿ ಬರ್ತೀನಿ ಅಂತ ಹೋದವನು ವಾಪಸ್ ಬರಲೇ ಇಲ್ಲ. ಅವನ ಫೋನ್‌ಗೆ ಕಾಲ್ ಮಾಡಿದ್ರೆ ಫೋನ್ ಸ್ವಿಚ್ ಆಫ್. ಆತಂಕಗೊಂಡಿದ್ದ ಆತನ ಕುಟುಂಬಕ್ಕೆ ಕೆಲವೇ ಗಂಟೆಗಳಲ್ಲಿ ಒಂದು ಫೋನ್ ಕಾಲ್ ಬಂದಿತ್ತು. ಅತ್ತಕಡೆಯಿಂದ ಕಾಲ್ ಮಾಡಿದವರು ಪೊಲೀಸರು. ನಿಮ್ಮ ಮಗನಿಗೆ ಆ್ಯಕ್ಸಿಡೆಂಟ್(Accident) ಆಗಿದೆ ಬೇಗ ಬನ್ನಿ ಅಂದಿದ್ರು. ಇನ್ನೂ ಇದೇ ಆ್ಯಕ್ಸಿಡೆಂಟ್ ಕೇಸ್‌ನ ಬೆನ್ನು ಬಿದ್ದ ಪೊಲೀಸರಿಗೆ ಅವನ ಫೋನ್ ಒಂದು ಮಾಹಿತಿ ಕೊಟ್ಟಿತ್ತು. ಅದು ಆ್ಯಕ್ಸಿಡೆಂಟ್ ಅಲ್ಲ ಬದಲಿಗೆ ಮರ್ಡರ್(murder) ಅನ್ನೋದನ್ನ. ಯಾವಾಗ ರಾಘವೇಂದ್ರ ರೆಡ್ಡಿ ಶವ ಸಿಕ್ಕ ಹತ್ತಿರದಲ್ಲೇ ಒಂದು ರಕ್ತದ ಕಲೆ ಇರುವ ಕಟ್ಟಿಗೆ ಸಿಗ್ತೋ ಪೊಲೀಸರಿಗೆ ಅದು ಆ್ಯಕ್ಸಿಡೆಂಟ್ ಅಲ್ಲ ಕೊಲೆ ಅನ್ನೋದು ಕನ್ಫರ್ಮ್ ಆಗಿತ್ತು. ಕೂಲಿ ಮಾಡೋದಕ್ಕೆ ಅಂತ ಊರೂರು ಅಲಿತಿದ್ದ ರಾಘವೇಂದ್ರನಿಗೆ ಅವಳೊಬ್ಬಳ ಪರಿಚಯವಾಗಿತ್ತು. ನಂತರ ಅವರಿಬ್ಬರ ನಡುವೆ ಅನೈತಿಕ ಸಂಬಂಧವೂ(Illegal relationship) ಬೆಳೆಯಿತು. ಹೀಗೆ 2 ವರ್ಷ ಕಳೆಯಿತು. ಆದ್ರೆ ಇವರಿಬ್ಬರ ವಿಷ್ಯ ಊರಲ್ಲೆಲ್ಲಾ ಪಸರ್ ಆಯ್ತು, ಕೊನೆಗೆ ಆ ಮಹಿಳೆಯ ಮಗನಿಗೂ ಗೊತ್ತಾಯ್ತು. ಯಾವಾಗ ತಾಯಿ ಪರಪರುಷನ ಸಹವಾಸ ಮಾಡಿದ್ದಾಳೆ ಅಂತ ಗೊತ್ತಾಯ್ತೋ ಆತ ಅವನನ್ನೇ ಮುಗಿಸಲು ನಿರ್ಧಾರ ಮಾಡಿದ್ದ. ತನ್ನ ಸ್ನೇಹಿತ ಜೊತೆಗೆ ಸೇರಿಕೊಂಡು ಆವತ್ತೊಂದು ದಿನ ತನ್ನ ಮನೆಗೆ ಹೋಗಿ ಬರ್ತಿದ್ದವನನ್ನ ಅಡ್ಡಗಟ್ಟಿ ಅವನ ಕಥೆ ಮುಗಿಸಿ ಕೊನೆಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಆ್ಯಕ್ಸಿಡೆಂಟ್ ರೀತಿ ಶವವನ್ನ ಹಾಕಿ ಹೋಗಿದ್ದ.

ಇದನ್ನೂ ವೀಕ್ಷಿಸಿ:  ಎಲೆಕ್ಟ್ರಾನಿಕ್ ವಾರ್‌ಗೆ ನಾಂದಿ ಹಾಡಿತಾ ಭಾರತದ ನಿರ್ಧಾರ ?: ಚೀನಾ ಲ್ಯಾಪ್ ಟಾಪ್ ಬೇಕಾ ? ತಗೊಳ್ಳಿ ಲೈಸೆನ್ಸ್ !