ಎಲೆಕ್ಟ್ರಾನಿಕ್ ವಾರ್‌ಗೆ ನಾಂದಿ ಹಾಡಿತಾ ಭಾರತದ ನಿರ್ಧಾರ ?: ಚೀನಾ ಲ್ಯಾಪ್ ಟಾಪ್ ಬೇಕಾ ? ತಗೊಳ್ಳಿ ಲೈಸೆನ್ಸ್ !

ಟ್ಯಾಬ್ಲೆಟ್ ಆಮದಿಗೂ ನಿರ್ಬಂಧ ಹೇರಿದ ಭಾರತ 
ಭಾರತದ ನಿರ್ಧಾರಕ್ಕೆ ದಿಕ್ಕೆಟ್ಟು ಕುಂತ ಚೀನಾ..! 
ಮೋದಿ ನಡೆಯ ಹಿಂದಿನ ರಾಜತಂತ್ರವೇನು..? 

First Published Aug 5, 2023, 1:24 PM IST | Last Updated Aug 5, 2023, 1:24 PM IST

ಭಾರತ ತನ್ನ ರಾಜತಾಂತ್ರಿಕ ನೀತಿಯಲ್ಲಿ ಆಗಾಗ ಬದಲಾವಣೆಯನ್ನ ಮಾಡ್ತಾನೆ ಇರುತ್ತೆ. ಭಾರತ(India) ಮಾತ್ರವಲ್ಲಾ, ಎಲ್ಲಾ ದೇಶಗಳು ಕಾಲಕ್ಕೆ ತಕ್ಕಂತೆ ತಮ್ಮ ಲಾಭ ನಷ್ಟಗಳ ಲೆಕ್ಕಾಚಾರವನ್ನ ಹಾಕಿಕೊಂಡು ಆಮದು ರಫ್ತುವಿನ ವಿನಿಮಯಗಳ ಮೇಲೆ ನಿರ್ಬಂಧ ಹೇರೋದು, ಪೂರೈಕೆ(Import) ತಗ್ಗಿಸೋದು ಮಾಡೋದು ಅತ್ಯಂತ ಸಾಧಾರಣ ವಿಚಾರ. ಆದ್ರೆ ಈಗ ಭಾರತ ತೆಗೆದುಕೊಂಡಿರುವ ಒಂದು ನಿರ್ಧಾರ ಇಡೀ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡ್ತಾ ಇದೆ. ಅದೇ ಲ್ಯಾಪ್ ಟಾಪ್(laptops) ಕಂಪ್ಯೂಟರ್(computers), ಟ್ಯಾಬ್ಲೆಟ್ ಗಳ ಆಮದಿಗೆ ನಿರ್ಬಂಧ ಹೇರಿರೋದು. ಒಂದೇ ಒಂದು ದಿನ ಇವುಗಳನ್ನ ಬಳಸದೇ ಇರೋಕೆ ಅಸಾಧ್ಯ ಅನ್ನೋ ಮಟ್ಟಕ್ಕೆ ನಮ್ಮ ಜೀವನ ಶೈಲಿ ಬದಲಾಗಿದೆ. ಈ ಮೂರು ಡಿವೈಸ್‌ಗಳಿಗೆ ಇಂಟರ್ನೆಟ್ ಕನೆಕ್ಟ್ ಆಗಿ ಬಿಟ್ಟರೆ ಸಂವಹನದಿಂದ ಹಿಡಿದು, ನಮ್ಮ ನಮ್ಮ ದುಡಿಮೆಯನ್ನೂ ಮಾಡಬಹುದು. ಆಫೀಸ್‌ ಕೆಲಸಗಳು ಈ ವಸ್ತುಗಳು ಇಲ್ಲದೇ ಮುಗಿಯೋದೇ ಇಲ್ಲ. ಇದೀಗ ಭಾರತ ವಿದೇಶಿ ಲ್ಯಾಪ್ ಟಾಪ್ ಕಂಪ್ಯೂಟರ್, ಟ್ಯಾಬ್ಲೆಟ್ಗಳ ಮೇಲೆ ನಿರ್ಬಂಧ ಹೇರಿದೆ. ಆ ವಸ್ತುಗಳ ಆಮದಿಗೆ ಆಗಲ್ಲ ಅಂತಿದೆ. ಈ ನಿರ್ಧಾರ ಎಲೆಕ್ಟ್ರಾನಿಕ್ ವಲಯದ ದಿಗ್ಗಜ ದೇಶಗಳಿಗೆ ಶಾಕ್  ಕೊಟ್ಟಿದೆ. ಮೋದಿಯ ಇದೊಂದು ನಡೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ಶುರುವಾಗಿದೆ. 

ಇದನ್ನೂ ವೀಕ್ಷಿಸಿ:  "ಅಣ್ಣ ಮಾತಾಡೋದನ್ನ ತಮ್ಮ ಕೇಳ್ತಾನೆ.." ಎಚ್‌ಡಿಕೆಗೆ ಟಕ್ಕರ್‌ ಕೊಟ್ಟ ಡಿ.ಕೆ.ಶಿವಕುಮಾರ್‌