ಮಗಳನ್ನೇ ಕೊಲೆ ಮಾಡಲು ಅಪ್ಪ ನಿರ್ಧರಿಸಿದ್ದೇಕೆ..? ಮರ್ಯಾದಾ ಹತ್ಯೆಯಿಂದಿತ್ತು ಕರುಣಾಜನಕ ಕಥೆ..!

ಮಗಳ ಹೆಣ ಹಾಕಿ ಪೊಲೀಸ್ ಠಾಣೆಗೆ ಹೋದ..!
ಅಪ್ಪನ ವಿರುದ್ಧವೇ ನಿಂತುಬಿಟ್ಟರು ಮಕ್ಕಳು..!
ಹೆತ್ತವರ ವಿರುದ್ಧ ಕೇಸ್ ದಾಖಲಿಸಿದ್ದಳು ಮಗಳು..!

First Published Oct 15, 2023, 1:59 PM IST | Last Updated Oct 15, 2023, 1:59 PM IST

ಅದು ಸುಂದರ ಕುಟುಂಬ. ಅಪ್ಪ, ಅಮ್ಮ ಮತ್ತು ಮೂವರು ಹೆಣ್ಣು ಮಕ್ಕಳು. ಮೊದಲ ಮಗಳು ಮದುವೆಯಾಗಿ ಗಂಡನ ಮನೆ ಸೇರಿದರೆ ಇನ್ನಿಬ್ಬರು ಮನೆಯಲ್ಲಿ ಅಪ್ಪ ಅಮ್ಮನಿಗೆ ನೆರವಾಗಿದ್ರು. ಎಲ್ಲರೂ ಸಂತೋಷವಾಗೇ ಇದ್ರು. ಆದ್ರೆ ಅವತ್ತೊಂದು ದಿನ ಎರಡನೇ ಮಗಳು ಮಲಗಿದಲ್ಲೇ ಹೆಣವಾಗಿದ್ಲು. ನಿದ್ರೆಯಲ್ಲಿದ್ದ ಮಗಳನ್ನ ಅಪ್ಪನೇ ಕೊಂದು ಮುಗಿಸಿದ್ದಾನೆ. ಅಷ್ಟೇ ಅಲ್ಲ ಮಗಳ ಹೆಣ ಹಾಕಿ ಸೀದಾ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಸ್ವಂತ ಮಗಳ ಕಥೆಯನ್ನೇ ಮುಗಿಸಿದ್ದ ಅಪ್(Father)ಪ ಯಾವುದೇ ಪಶ್ಚಾಪವಿಲ್ಲದೇ ಪೊಲೀಸರ ಮುಂದೆ ಬಂದು ನಿಂತಿದ್ದ. ಇನ್ನೂ ಆತನ ಸಂಬಂಧಿಕರನ್ನ ಕೇಳಿದ್ರೆ ಅವರೂ ಕೂಡ ಮಂಜುನಾಥನನ್ನೇ ವಹಿಸಿಕೊಂಡು ಮಾತಾಡ್ತಾರೆ. ಅವನು ಮಾಡಿದ್ದು ಸರಿ ಅನ್ನೋ ಲೆಕ್ಕದಲ್ಲಿ ಮಾತನ್ನಾಡ್ತಾರೆ. ಈಕೆಯ ಪರಿಸ್ಥಿತಿ ಯಾವ ಶತೃಗೂ ಬೇಡ. ಅತ್ತ ಗಂಡ ಜೈಲಲ್ಲಿ..ಒಬ್ಬ ಮಗಳು ಹೆಣವಾಗಿದ್ದರೆ ಮತ್ತೊಬ್ಬಳು ಎಲ್ಲಿದ್ದಾಳೆ ಅನ್ನೋದೇ ಗೊತ್ತಿಲ್ಲ. ಆದ್ರೆ ಮಂಜುನಾಥ ಮಗಳನ್ನೇ ಕೊಲ್ಲೋ(Murder) ಮಟ್ಟಕ್ಕೆ ಹೋಗಿದ್ದಾದ್ರೆ ಅಂತ ವಿಚಾರಿಸಿದಾಗ ಗೊತ್ತಾಗಿದ್ದು ಆ ಇಬ್ಬರು ಹೆಣ್ಣು ಮಕ್ಕಳು ಆ ತಂದೆಗೆ ಎಷ್ಟು ಹಿಂಸೆ ನೀಡಿದ್ರು ಅಂತ. ತಮ್ಮ ಪ್ರೀತಿಗಾಗಿ ಆ ಹೆಣ್ಣುಮಕ್ಕಳು ಹೆತ್ತವರನ್ನೇ ಪೊಲೀಸ್ ಠಾಣೆಯಲ್ಲಿ ಕೂರಿಸಿಬಿಟ್ಟಿದ್ರು.. ಅಕ್ಕ ತಾನು ಕೆಡೋದಲ್ಲದೇ ತನ್ನ ತಂಗಿಯ ಬ್ರೇನ್ ವಾಷ್ ಕೂಡ ಮಾಡಿಬಿಟ್ಟಿದ್ಲು.

ಅಷ್ಟಕ್ಕೂ ಆ ಇಬ್ಬರು ಹೆಣ್ಣುಮಕ್ಕಳು ತಂದೆ ತಾಯಿಗೆ ಯಾವ ರೀತಿ ಮಾನಸಿಕಾಗಿ ಹಿಂಸಿಸಿದ್ರು. ಮಂಜುನಾಥ ಮೊದಲ ಮಗಳ ಮದುವೆ(Marriage) ಮಾಡಿ ಮುಗಿಸಿದ ಮೇಲೆ ಎರಡನೇ ಮಗಳು ಅಂದ್ರೆ ಕವನಾಗೆ(Kavana) ಮದುವೆ ಮಾಡಲು ಮುಂದಾದ ಒಂದು ಒಳ್ಳೆಯ ಹುಡುಗನನ್ನ ಹುಡುಕಿ ಎಂಗೆಜ್ಮೆಂಟ್ ಕೂಡ ಮಾಡಿದ್ದ. ಆದ್ರೆ ಕವನ ಎಂಗೇಜ್ಮೆಂಟ್ ಆದ ಮೇಲೆ ಬೇರೆಯೊಬ್ಬ ಹುಡುಗನ ಜೊತೆ ಲವ್(love) ಮಾಡಿ ಅವನ ಜೊತೆ ಊರೂರು ಸುತ್ತುತ್ತಾಳೆ. ಈಕೆಯನ್ನ ನೋಡಿದ ಆಕೆಯ ತಂಗಿ ಕೂಡ ಅದೇ ದಾರಿಯನ್ನ ಹಿಡಿದುಬಿಟ್ಟಳು. ಅಷ್ಟೇ ಅಲ್ಲ ಮಕ್ಕಳ ಲವ್‌ನಿಂದ ಹೆತ್ತವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತುವ ಹಾಗೆ ಆಗಿಬಿಡ್ತು. ಯಾವಾಗ ಮಂಜುನಾಥ ಮಕ್ಕಳಿಂದ ಗ್ರಾಮದಲ್ಲಿ ಮರ್ಯಾದೆ ಹೊಯ್ತು ಅಂತ ಅಂದುಕೊಂಡನೋ ಇದಕ್ಕೆಲ್ಲಾ ಕಾರಣವಾದ ಕವನಳನ್ನ ಮುಗಿಸಲು ನಿರ್ಧರಿಸಿಬಿಟ್ಟ. ಮಂಜುನಾಥ ಸ್ವಲ್ಪ ಯೋಚನೆ ಮಾಡಿ ತನ್ನ ವಿರುದ್ಧವೇ ನಿಂತಿದ್ದ ಹೆಣ್ಣುಮಕ್ಕಳನ್ನ ತನ್ನಿಷ್ಟದವರೊಂದಿಗೆ ಮದುವೆ ಮಾಡಿ ಕಳುಹಿಸಿಬಿಟ್ಟಿದ್ದಿದ್ರೆ. ಇವತ್ತು ಆತ ತನ್ನ ಪಾಡಿಗೆ ನೆಮ್ಮದಿಯಾಗಿ ಇರಬಹುದಿತ್ತು. ಆದ್ರೆ ಊರಲ್ಲಿ ಮರ್ಯಾದೆ ಹೊಯ್ತು ಅಂತ ಮಗಳ ಕಥೆಯನ್ನೇ ಮುಗಿಸಿ ಜೈಲು ಸೇರಿದ್ದಾನೆ. 

ಇದನ್ನೂ ವೀಕ್ಷಿಸಿ:  ಕೋಟಿ ಬೇಟೆಯಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ..? ಕಾಂಟ್ಯಾಕ್ಟರ್ ಮನೆಯಲ್ಲಿ ಸಿಕ್ಕ ಹಣ ಯಾರದ್ದು..?

Video Top Stories